ಬಕ್ರೀದ್ ಆಚರಣೆ: ಸರಕಾರದಿಂದ ಹೊಸ ಮಾರ್ಗಸೂಚಿ
ಕರ್ನಾಟಕ ಸರಕಾರವು ಬಕ್ರೀದ್ ಹಬ್ಬ ಆಚರಣೆಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಈ ಬಾರಿಯ ಬಕ್ರೀದ್ ಹಬ್ಬಾಚರಣೆಯಲ್ಲಿ ಹಿನ್ನೆಲೆಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ಇಂದು ಘೋಷಣೆ ಮಾಡಿದೆ.

ಬೆಂಗಳೂರು, ಜುಲೈ 16: ಕರ್ನಾಟಕ ಸರಕಾರವು ಬಕ್ರೀದ್ ಹಬ್ಬ ಆಚರಣೆಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಈ ಬಾರಿಯ ಬಕ್ರೀದ್ ಹಬ್ಬಾಚರಣೆಯಲ್ಲಿ ಹಿನ್ನೆಲೆಯಲ್ಲಿ ಪಾಲಿಸಬೇಕಾದ ನಿಯಮಗಳನ್ನು ಇಂದು ಘೋಷಣೆ ಮಾಡಿದೆ.
ಅದರಂತೆ ಈದ್ಗಾಗಳಲ್ಲಿ ಸಾಮೂಹಿಕ ಪೆರ್ನಾಳ್ ನಮಾಝ್‌ಗೆ ನಿರ್ಬಂಧ ಹೇರಲಾಗಿದೆ. ಮಸೀದಿಗಳಲ್ಲಿ ಮಾತ್ರ ಹಂತ ಹಂತವಾಗಿ ನಮಾಝ್ ಮಾಡಲು ಅನುಮತಿ ನೀಡಲಾಗಿದೆ. ಪ್ರತೀ ಹಂತದಲ್ಲೂ 50ಕ್ಕಿಂತ ಜಾಸ್ತಿ ಜನ ಸೇರಬಾರದು. 65 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕೆಳಗಿನ ಪ್ರಾಯದವರು ನಮಾಝ್‌ಗೆ ಬರುವಂತಿಲ್ಲ.
ಮಾಸ್ಕ್‌ಗಳನ್ನು ಖಡ್ಡಾಯವಾಗಿ ಧರಿಸಬೇಕು. ಪರಸ್ಪರ ಅಂತರ ಕಾಪಾಡಬೇಕು. ಮಸೀದಿ ಪ್ರವೇಶನಕ್ಕೆ ಮುನ್ನ ದೇಹದ ತಾಪಮಾನ ಪರೀಕ್ಷೆ ನಡೆಸಬೇಕು. ಕೈಗಳನ್ನು ಸಾಬೂನು ಅಥವಾ ಸ್ಯಾನಿಟೈಸರ್ ನಿಂದ ಶುಚಿಗೊಳಿಸಬೇಕು. ಮನೆಯಿಂದಲೇ ಮುಸಲ್ಲಾವನ್ನು ಒಯ್ಯಬೇಕು. ಹಸ್ತ ಲಾಘವ, ಪರಸ್ಪರ ಆಲಿಂಗನ ಇತ್ಯಾದಿಗಳನ್ನು ನಿಷೇಧಿಸಿದೆ.
ರರಸ್ತೆಗಳು, ಪಾದಚಾರಿ ಮಾರ್ಗಗಳು, ಆಸ್ಪತ್ರೆ ಆವರಣಗಳು, ತರಗತಿಗಳು ನಡೆಯುತ್ತಿರುವ ಶಾಲಾ-ಕಾಲೇಜುಗಳ ಒಳ ಮತ್ತು ಹೊರಾವರಣ, ಆಟದ ಮೈದಾನ, ಮಸೀದಿ ಮತ್ತುಇತರ ಧಾರ್ಮಿಕ ಸ್ಥಳಗಳ ಆವರಣ, ಉದ್ಯಾನವನಗಳ ಒಳ ಮತ್ತು ಹೊರ ಆವರಣಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಬಲಿದಾನ ಅಥವಾ ಪ್ರಾಣಿ ವಧೆ ಮಾಡುವಂತಿಲ್ಲ ಎಂದು ರಾಜ್ಯ ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ಜ್ ಮತ್ತು ವಕ್ಫ್ ಇಲಾಕೆಯ ಅಧೀನ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ