ಬಕ್ರೀದ್‌ಗಾಗಿ ಲಾಕ್‌ಡೌನ್‌ ಸಡಿಲಿಕೆ: ದಾವೆ ಹೂಡುವುದಾಗಿ ಭಾರತೀಯ ವೈದ್ಯಕೀಯ ಸಂಘದ ಎಚ್ಚರಿಕೆ

ಬಕ್ರೀದ್‌ಗಾಗಿ ಲಾಕ್‌ಡೌನ್‌ ಸಡಿಲಿಕೆ: ದಾವೆ ಹೂಡುವುದಾಗಿ ಭಾರತೀಯ ವೈದ್ಯಕೀಯ ಸಂಘದ ಎಚ್ಚರಿಕೆ

ಹೊಸದಿಲ್ಲಿ: ಕೋವಿಡ್ ಮೂರನೇ ಅಲೆಯು ಸಮೀಪದಲ್ಲಿರುವ ಸಂದರ್ಭದಲ್ಲಿ ಮುಸ್ಲಿಮರ ಪವಿತ್ರ ಹಬ್ಬ ಬಕ್ರಿದ್‌ಗೆ ಮುಂಚಿತವಾಗಿ ರಾಜ್ಯದಲ್ಲಿನ  ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿದರ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು ರವಿವಾರ ಕೇರಳ ಸರಕಾರಕ್ಕೆ ಎಚ್ಚರಿಕೆ ನೀಡಿದೆ.

      ಜನರ ಹಿತಾಸಕ್ತಿಯನ್ನು  ಮನದಲ್ಲಿಟ್ಟುಕೊಂಡು ಈ ಆದೇಶವನ್ನು ಹಿಂತೆಗೆದುಕೊಳ್ಳದಿದ್ದರೆ  ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡುವುದಾಗಿ ಸಂಘವು ಎಚ್ಚರಿಕೆಯನ್ನು ನೀಡಿದೆ. ಜನ ಸೇರುವುದಕ್ಕೆ ಪ್ರಧಾನಿಯವರು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು. ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿರುವುದರ ಮಧ್ಯೆಯೂ, ಸರಕಾರ ತೆಗೆದುಕೊಂಡ ಈ ನಿರ್ಧಾರವು ಸರಿಯಾದ ಕ್ರಮ ಅಲ್ಲ ಎಂದು ಐಎಮ್ಎ ತಿಳಿಸಿದೆ.

      ಜಮ್ಮುಕಾಶ್ಮೀರ, ಉತ್ತರಪ್ರದೇಶ, ಹಾಗೂ ಉತ್ತರಾಂಚಲ, ಸೇರಿದಂತೆ ಉತ್ತರದ ಹಲವಾರು ರಾಜ್ಯಗಳು ಈಗಾಗಲೇ ಧಾರ್ಮಿಕ ಕೇಂದ್ರಗಳನ್ನು ಮುಚ್ಚಿದೆ. ಧಾರ್ಮಿಕ ಯಾತ್ರೆಗಳನ್ನು ನಿಷೇಧಿಸಿದೆ. ಆದರೆ ಕೇರಳ ಸರಕಾರ ಮಾತ್ರ ಇಂತಹ ಕ್ರಮ ತೆಗೆದುಕೊಂಡಿರುವುದು ದುರದೃಷ್ಟಕರ ಎಂದು ಅದು ಹೇಳಿದೆ.

      ಸಮಸ್ತ ಕೇರಳ ಜಂ-ಇಯ್ಯತುಲ್‌ ಉಲಮಾ ಇತ್ತೀಚೆಗೆ ನಡೆಸಿದ ಪ್ರತಿಭಟನೆಯ ಫಲವಾಗಿ ಕೇರಳ ಸರಕಾರವು ಬಕ್ರೀದ್ ಹಬ್ಬದಂದು ಮಸೀದಿಗಳಲ್ಲಿ ಈದ್‌ ನಮಾಝ್‌ ಗೆ ಮತ್ತು ಜುಮುಅ ನಮಾಝ್‌ಗೆ 40 ಜನ ಭಾಗವಹಿಸುವುದಕ್ಕೆ ಅವಕಾಶವನ್ನು ಕಲ್ಪಿಸಿತ್ತು. ಸಮಸ್ತದ ಬೇಡಿಕೆಯೂ ಇದೇ ಆಗಿತ್ತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ