ಫಾತಿಮಾ ತಹ್ಲಿಯ ವಿರುದ್ಧ ಶಿಸ್ತುಕ್ರಮ: ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ ಹೊರಕ್ಕೆ

ಫಾತಿಮಾ ತಹ್ಲಿಯ ವಿರುದ್ಧ ಶಿಸ್ತುಕ್ರಮ: ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ ಹೊರಕ್ಕೆ

ಮಲಪ್ಪುರಂ: ಶಿಸ್ತುಕ್ರಮದ ಭಾಗವಾಗಿ ಫಾತಿಮಾ ತಹ್ಲಿಯಾ ಅವರನ್ನು ಎಂಎಸ್‌ಎಫ್ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ. ಫಾತಿಮ ಗಂಭೀರ ಸ್ವರೂಪದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

      ಪಿ.ಕೆ.ನವಾಝ್ ವಿರುದ್ಧದ ದೂರಿನ ಹಿಂದೆ ಫಾತಿಮಾ ತಹ್ಲಿಯ ಇದ್ದಾರೆ ಎಂಬ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಆಯೋಗಕ್ಕೆ ದೂರು ನೀಡಿದ ಹಸಿರು ಸಂಘಟನೆಯ ಮಾಜಿ ಪದಾಧಿಕಾರಿಗಳನ್ನು ತಹ್ಲಿಯಾ ಬೆಂಬಲಿಸಿದ್ದರು ಎನ್ನಲಾಗಿದೆ. ಫಾತಿಮಾ ತಹ್ಲಿಯಾ ಕೂಡ ಹಸಿರು ಸಮಿತಿಯ ಪುನರ್‌ಸಂಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

      ಮಹಿಳಾ ಆಯೋಗದಲ್ಲಿ ಎಂಎಸ್‌ಎಫ್ ರಾಜ್ಯಾಧ್ಯಕ್ಷ ನವಾಜ್ ವಿರುದ್ಧ ನೀಡಲಾದ ನಿಂದನೀಯ ದೂರನ್ನು ಹಿಂತೆಗೆದುಕೊಳ್ಳದ ಹಿನ್ನೆಲೆಯಲ್ಲಿ ವಿಸರ್ಜನೆಯಾದ ಹಸಿರು ರಾಜ್ಯ ಸಮಿತಿಯ ಬದಲಿಗೆ ಲೀಗ್ ನಿನ್ನೆ ಹೊಸ ಸಮಿತಿಯನ್ನು ಘೋಷಿಸಿತ್ತು. ಪಕ್ಷವು ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ ಮತ್ತು ನನ್ನ ಬಲಿ ವಿವರಣೆಯನ್ನು ಕೇಳಲಿಲ್ಲ. ನನ್ನ ಮೇಲೆ ಶಸ್ತುಕ್ರಮ ಕೈಗೊಂಡಿರುವುದು ಮಾಧ್ಯಮಗಳ ಮೂಲಕ ತಿಳಿದುಬಂತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

      ಮುಸ್ಲಿಂ ಲೀಗ್ ವಿದ್ಯಾರ್ಥಿ ಸಂಘಟನೆಯಾದ ಎಂಎಸ್‌ಎಫ್ ಹಸಿರು ಸಮಿತಿಯ ನೂತನ ಪದಾಧಿಕಾರಿಗಳಿಗೆ ಕೇರಳ ರಾಜ್ಯ ಯೂತ್ ಲೀಗ್ ಪ್ರಧಾನ ಕಾರ್ಯದರ್ಶಿ  ಪಿ.ಕೆ.ಫಿರೋಜ್ ಅಭಿನಂದನೆ ಸಲ್ಲಿಸಿದರು. ಹಸಿರು ಸಮಿತಿಗೆ ಸಂಬಂಧಿಸಿದ ವಿಚಾರದಲ್ಲಿ ನಾಯಕತ್ವದ ನಿರ್ಧಾರಗಳಿಗೆ ಎಲ್ಲರೂ ಬದ್ಧರಾಗಿರಬೇಕು ಎಂದು ಫಿರೋಜ್‌ ಹೇಳಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ