ಪೆ.27 ಕ್ಕೆ ಜಮೀಯ್ಯತುಲ್ ಫಲಾಹ್ ನಿಂದ ವಿದ್ಯಾರ್ಥಿ ವೇತನ ವಿತರಣೆ, ಸನ್ಮಾನ

ಪೆ.27 ಕ್ಕೆ ಜಮೀಯ್ಯತುಲ್ ಫಲಾಹ್ ನಿಂದ ವಿದ್ಯಾರ್ಥಿ ವೇತನ ವಿತರಣೆ, ಸನ್ಮಾನ
republicday728
republicday468
republicday234

ಬಿ.ಸಿ.ರೋಡ್, ಪೆ.26: ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ, ಸನ್ಮಾನ ಸಮಾರಂಭ ಹಾಗೂ ತರಬೇತಿ ಕಾರ್ಯಕ್ರಮ ವು ಮಾರ್ನಬೈಲ್ ನ ಮೆಲ್ಕಾರ್ ಮಹಿಳಾ ಕಾಲೇಜ್ ನಲ್ಲಿ ಪೆ.27 ರಂದು ಅಪರಾಹ್ನ 3 ಗಂಟೆಗೆ ನಡೆಯಲಿದೆ.                                                 ಸಂಸ್ಥೆಯ ಅದ್ಯಕ್ಷ ಹಾಜಿ ಎ.ಉಸ್ಮಾನ್ ಕರೋಪಾಡಿ ಅದ್ಯಕ್ಷತೆ ವಹಿಸಲಿದ್ದು, ವಗ್ಗ ಸರಕಾರಿ ಪ.ಪೂ.ಕಾಲೇಜು ಪ್ರಭಾರ ಪ್ರಿನ್ಸಿಪಾಲ್ ಶಮೀವುಲ್ಲಾ, ಮೆಲ್ಕಾರ್ ಮಹಿಳಾ ಕಾಲೇಜು ಪ್ರಿನ್ಸಿಪಾಲ್ ಬಿ.ಕೆ.ಅಬ್ದುಲ್ ಲತೀಪ್, ಸಂಸ್ಥೆಯ ಕೋಶಾಧಿಕಾರಿ ಎಫ್.ಎಂ. ಬಶೀರ್ ಫರಂಗಿಪೇಟೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪುರಷ್ಕೃತ ಪೊಲೀಸ್ ವೃತ್ತ ನಿರೀಕ್ಷಕರಾದ ಟಿ.ಡಿ.ನಾಗರಾಜ್ ಬಂಟ್ವಾಳ, ಮುಹಮ್ಮದ್ ರಫೀಕ್ (ಹೈಗ್ರೌಂಡ್ ಪೊಲೀಸ್ ಠಾಣೆ ಬೆಂಗಳೂರು) ಹಾಗೂ ಕೋವಿಡ್ ಸೇನಾನಿ ಡಾ. ಎಂ.ಎಂ. ಶರೀಫ್ ಆಲಡ್ಕ ಇವರನ್ನು ಸನ್ಮಾನಿಸಲಾಗುವುದು ಎಂದು ಜಮೀಯ್ಯತುಲ್ ಫಲಾಹ್ ಕಾರ್ಯದರ್ಶಿ ಎಂ.ಎಚ್. ಇಕ್ಬಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ