ಪಿ.ವಿ.ಅಬ್ದುಲ್ ವಹ್ಹಾಬ್ ಮತ್ತೆ ರಾಜ್ಯಸಭೆಗೆ

ಪಿ.ವಿ.ಅಬ್ದುಲ್ ವಹ್ಹಾಬ್ ಮತ್ತೆ ರಾಜ್ಯಸಭೆಗೆ

ತಿರುವನಂತಪುರಂ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಷ್ಟ್ರೀಯ ಖಜಾಂಚಿ ಪಿ.ವಿ.ಅಬ್ದುಲ್ ವಹಾಬ್ ಅವರನ್ನು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ.  ನಾಮಪತ್ರಗಳನ್ನು ಹಿಂಪಡೆಯುವ ಗಡುವು ಮುಗಿಯುತ್ತಿದ್ದಂತೆ ಪ್ರತಿಸ್ಪರ್ಧಿಗಳಿಲ್ಲದೆ, ವಹಾಬ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ವಿಧಾನಸಭೆಯ ಕಾರ್ಯದರ್ಶಿ ಎಸ್.ವಿ.ಉನ್ನಿಕೃಷ್ಣನ್ ನಾಯರ್ ಅಧಿಕೃತ ಘೋಷಣೆಯನ್ನು ಮಾಡಿದರು.
     ಎಲ್‌ಡಿಎಫ್‌ನ ಜಾನ್ ಬ್ರಿಟಾಸ್ ಮತ್ತು ವಿ.ಶಿವದಾಸನ್ ಕೂಡ ಅವಿರೋಧವಾಗಿ ಆಯ್ಕೆಯಾದರು. ಖಾಲಿಯಿದ್ದ ಮೂರು ರಾಜ್ಯಸಭಾ ಸ್ಥಾನಗಳಿಗೆ ಮೂವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇದರಿಂದಾಗಿ ಮೂವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಸ್ಲಿಂ ಲೀಗಿನ  ಪಿ.ವಿ.ಅಬ್ದುಲ್ ವಹ್ಹಾಬ್ ಮೂರನೇ ಬಾರಿಗೆ ರಾಜ್ಯಸಭೆ ಪ್ರವೇಶಿಸುತ್ತಿದ್ದಾರೆ. (2004-2010, 2015-2021)
     1950 ಸೆಪ್ಟೆಂಬರ್‌ 5ರಂದು  ಪುಲಿಕಲ್ ವಟ್ಟಂ ಮನೆಯ ಪಿ.ವಿ.ಅಲವಿ ಕುಟ್ಟಿ ಮತ್ತು ವರಿಕ್ಕೋಡನ್ ಫಾತಿಮಾ ದಂಪತಿಗಳ ಪುತ್ರನಾಗಿ ಮಲಪ್ಪುರಂ ಜಿಲ್ಲೆಯ ನಿಲಂಬೂರಿನಲ್ಲಿ ಜನಿಸಿದರು. ನೀಲಂಬೂರು ಸರ್ಕಾರೀ ಮನವೇದನ್ ಪ್ರೌಢ ಶಾಲೆಯಲ್ಲಾಗಿತ್ತು ಅವರ ವಿದ್ಯಾಭ್ಯಾಸ. ನಂತರ ಮಾಂಬಾಡ್ ಎಂಇಎಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಏರನಾಡ್ ಮಸ್ಲಿಂ ಲೀಗಿನ ಅಮರ ಸೇನಾನಿ ಮತ್ತು ಚಂದ್ರಿಕಾ ದಿನ ಪತ್ರಿಕೆಯ ಲೇಖಕರೂ ಆಗಿದ್ದ ತಂದೆ ತಂದೆ ಪಿ.ವಿ.ಅಲವಿ ಕುಟ್ಟಿಯವರ ಹಾದಿಯಲ್ಲೇ MSF ಮೂಲಕ ರಾಜಕೀಯ ಪ್ರವೇಶಿಸಿದರು. ಯೂತ್ ಲೀಗ್ ಕ್ಷೇತ್ರ ಕಾರ್ಯದರ್ಶಿ ಮತ್ತು ಮುಸ್ಲಿಂ ಲೀಗ್ ಪಂಚಾಯತ್ ಕಾರ್ಯದರ್ಶಿ ಹುದ್ದೆಗಳನ್ನು ಅಲಂಕರಿಸಿದ ನಂತರ ಅವರು ಪ್ರವಾಸೀ ಜೀವನ ಆರಂಭಿಸಿದರು.  ಅವರು ಯುಎಇ ಕೆಎಂಸಿಸಿ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದರು.  ಪಾಣಕ್ಕಾಡ್ ಸೈಯದ್ ಮುಹಮ್ಮದಲಿ ಶಿಹಾಬ್ ತಂಙಳ್ ರವರ ಆಶೀರ್ವಾದದೊಂದಿಗೆ 2004 ರಲ್ಲಿ ಮೊದಲ ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. 2020 ರವರೆಗೂ ರಾಜ್ಯಸಭಾ ಸದಸ್ಯರಾಗಿದ್ದರು. ಮುಸ್ಲಿಂ ಲೀಗ್‌ ಕೇರಳ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ, ಮುಸ್ಲಿಂ ಲೀಗ್‌ ರಾಷ್ಟ್ರೀಯ ಸಮಿತಿಯ ಖಜಾಂಚಿಯಾಗಿ ಮತ್ತು ಚಂದ್ರಿಕಾ ದಿನಪತ್ರಿಕೆಯ  ನಿರ್ದೇಶಕರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ