ಪ್ರತಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದೇ ನನ್ನ ಕನಸು - ರಾಜೇಶ್ ನಾಯ್ಕ್

ಪ್ರತಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದೇ ನನ್ನ ಕನಸು - ರಾಜೇಶ್ ನಾಯ್ಕ್
republicday728
republicday468
republicday234

ಬಂಟ್ವಾಳ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ಮೂಲಕ ಮತದಾರರಿಗೆ ಧನ್ಯವಾದ ಹೇಳುವುದೇ ನಮ್ಮ ಧ್ಯೇಯ ವಾಕ್ಯ ಎಂದು ಬಂಟ್ವಾಳ ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

     ಅವರು ಮಾಣಿ ಗ್ರಾಮ ಪಂ ವ್ಯಾಪ್ತಿಯ ವಿವಿಧ ಕಾಮಗಾರಿ ಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ನಡೆಸಿದ ಬಳಿಕ ಮಾತನಾಡುತ್ತಿದ್ದರು. ತಾಲೂಕಿನ ಜನರು ವಿಶ್ವಾಸವಿರಿಸಿ ನೀಡಿದ ಮತಕ್ಕೆ ಚ್ಯುತಿ ಬಾರದಂತೆ ಪ್ರತಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವುದೇ ನನ್ನ ಕನಸು. ಅಭಿವೃದ್ಧಿ ವಿಚಾರಗಳು ಬಂದಾಗ ಎಲ್ಲರೂ ಒಂದಾಗಿ ಕೈ ಜೋಡಿಸಬೇಕು ಎಂದು ಅವರು ತಿಳಿಸಿದರು.
     ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ ಹಾಗೂ ಆಡಳಿತ ಇತರ ದೇಶಗಳಿಗೆ ಮಾದರಿ ಯಾಗಿದ್ದು ಅವರು ಗುಣಗಾನ ಮಾಡುವಂತಾಗಿದೆ. ಕೋವಿಡ್ ವ್ಯಾಕ್ಸಿನ್ ನ ಮೂಲಕ ಇತರ ದೇಶಗಳಿಗೆ ನಾವು ದೊಡ್ಡಣ್ಣನಾಗಿ ಮೂಡಿಬಂದಿದ್ದೇವೆ. ಅಂತಹ ದೇಶದಲ್ಲಿರುವ ನಾವು ಭಾಗ್ಯಶಾಲಿಗಳು ಎಂದು ಅವರು ಹೇಳಿದರು.
     ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜಗೇರಿಸುವಂತೆ ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ ಅವರು ನೀಡಿದ ಮನವಿಗೆ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ಈಗಾಗಲೇ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ಮಾಣಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಜನರ ಉಪಯೋಗಕ್ಕೆ ಸಿಗುವಂತೆ ಮಾಡುವ ಭರವಸೆ ನೀಡಿದರು.

     ಮಾಣಿ ಗಾಂಧಿ ಮೈದಾನದಲ್ಲಿ  ರೂ 10 ಲಕ್ಷ ಜಿ.ಪಂ. ಅನುದಾನದ ಮೂಲಕ ನಿರ್ಮಾಣ ಮಾಡಿರುವ ರಂಗ ಮಂದಿರವನ್ನು ಉದ್ಘಾಟಿಸಿದ  ಜಿ.ಪಂ.ಸದಸ್ಯೆ ಮಂಜುಳ ಮಾದವ ಮಾವೆ ಅವರು ಮಾತನಾಡಿ ಜಿ.ಪಂ.ಸದಸ್ಯೆಯಾಗಿ ಆಯ್ಕೆಯಾದ ಸಂದರ್ಬದಲ್ಲಿ ಈ  ಭಾಗದ ಜನರ ಬೇಡಿಕೆಯಂತೆ ರಂಗ ಮಂದಿರ ನಿರ್ಮಾಣ ಮಾಡಿದ್ದೇನೆ. ಈ ರಂಗ ಮಂದಿರ ಹಾಗೂ ಮಾಣಿ ಸಂತೆ ಮಾರುಕಟ್ಟೆ ಸಮೀಪದಲ್ಲಿ ನಿರ್ಮಾಣವಾದ ಶೌಚಾಲಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಹೋಗುವ ಜವಬ್ದಾರಿ ಇಲ್ಲಿನ ಜನತೆಗಿದೆ ಎಂದರು.
      ಅಭಿವೃದ್ಧಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಆದರೆ ಜನರ ಸಮಸ್ಯೆಗಳನ್ನು ಅರಿತುಕೊಂಡು ತುರ್ತಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ, ಅದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದು ಅವರು ಹೇಳಿದರು.
      ರೂ 10 ಲಕ್ಷ ವೆಚ್ಚದಲ್ಲಿ ಶಂಭುಗ -ಪಲ್ಲತ್ತಿಲ ರಸ್ತೆ ಕಾಂಕ್ರೀಟೀಕರಣ, ರೂ 10 ಲಕ್ಷ ವೆಚ್ಚದಲ್ಲಿ ಮಾಣಿ - ಪಟ್ಲಕೋಡಿ, ರೂ 10 ಲಕ್ಷ ವೆಚ್ಚದಲ್ಲಿ ಮಾಣಿ-ಅರಿಯಕೋಡಿ, ರೂ. 6 ಲಕ್ಷ ವೆಚ್ಷದಲ್ಲಿ ಮಾಣಿ- ಕಾಪಿಕಾಡು, ರೂ 5 ಲಕ್ಷ ವೆಚ್ಚದಲ್ಲಿ ಕೊಡಾಜೆ -ಕೋಚಪಲ್ಕೆ, ರೂ.10 ಲಕ್ಷದಲ್ಲಿ ಗಾಂಧಿಮೈದಾನದ ರಂಗಮಂದಿರ ಹಾಗೂ ರೂ 4 ಲಕ್ಷ ವೆಚ್ಚದಲ್ಲಿ ಸಂತೆ ಮಾರುಕಟ್ಟೆ ಯಲ್ಲಿ ಶೌಚಾಲಯದ ಉದ್ಘಾಟನೆ ನಡೆಯಿತು.

      ತಾ.ಪಂ.ಸದಸ್ಯೆ ಗೀತಾಚಂದ್ರಶೇಖರ್ ನೆಟ್ಲಮೂಡ್ನೂರು ಗ್ರಾ.ಪಂ .ಅಧ್ಯಕ್ಷ  ಸತೀಶ್ ನೇರಳಕಟ್ಟೆ, ಉಪಾಧ್ಯಕ್ಷೆ ಶಕೀಲಾ, ಅಶೋಕ್, ಮಾಣಿ ಗ್ರಾ.ಪಂ.ಸದಸ್ಯ ನಾರಾಯಣ ಶೆಟ್ಟಿ ದೋಟ, ಮಿತ್ರಾಕ್ಷಿ , ನೇರಳಕಟ್ಟೆ   ವಿ.ಎಸ್.ಎಸ್.ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ ಚೌಟ, ಬ್ಯಾಂಕ್ ನಿರ್ದೇಶಕ ತನಿಯಪ್ಪ ಗೌಡ, ಸನತ್ ಕುಮಾರ್ ರೈ,  ಪ್ರಮುಖರಾದ ಗಣೇಶ್ ರೈ ಮಾಣಿ, ಭರತ್ ಕುಮಾರ್ ಶೆಟ್ಟಿ, ಪ್ರತಾಪ್ ಚಂದ್ರ ಆಳ್ವ, ಹರೀಶ್ ಮಾಣಿ, ಅಶೋಕ್, ವನಿತಾ, ರೂಪರಾಣಿ ಶೆಟ್ಟಿ, ಸುನೀತಾ, ವನಿತಾಕರುಣಾಕರ್, ಆನಂದ ಕುಲಾಲ್, ಸುಶೀಲಾ, ಸಂತೋಷ್ ರೈ ಮಾಣಿ, ಮುತ್ತಪ್ಪ, ಕರುಣಾಕರ ಪೂಜಾರಿ, ನರಸಿಂಹ ಶೆಟ್ಟಿ  ಮಾಣಿ  ಮತ್ತಿತರರು ಉಪಸ್ಥಿತರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ