ಪ್ರಜಾಪ್ರಭುತ್ವ ಸಂರಕ್ಷಣೆಗಾಗಿ ವಿದ್ಯಾವಂತರಾಗೋಣ: ಬಾಲ ಇಂಡಿಯಾದಲ್ಲಿ ಹನೀಫಿ

ಪ್ರಜಾಪ್ರಭುತ್ವ ಸಂರಕ್ಷಣೆಗಾಗಿ ವಿದ್ಯಾವಂತರಾಗೋಣ: ಬಾಲ ಇಂಡಿಯಾದಲ್ಲಿ ಹನೀಫಿ
republicday728
republicday468
republicday234

ಉಪ್ಪಿನಂಗಡಿ: ಆತೂರು ರೇಂಜ್ SKSBV ವತಿಯಿಂದ  72 ನೇ ಗಣರಾಜ್ಯೋತ್ಸವದ ಅಂಗವಾಗಿ ಬಾಲ ಇಂಡಿಯಾ ಕಾರ್ಯಕ್ರಮವು ಆತೂರು ಬದ್ರಿಯಾ  ಕೇಂದ್ರ ಜುಮಾ  ಮಸೀದಿ ವಠಾರದಲ್ಲಿ ನಡೆಯಿತು.
      ಆತೂರು ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಕೆ.ಹೆಚ್.ಎಂ.ಫಾಝಿಲ್ ಹನೀಫಿ ಮಾತನಾಡಿ ಸಂವಿಧಾನವು ಪ್ರಜಾಪ್ರಭುತ್ವ ಭಾರತದ  ಅಡಿಗಲ್ಲಾಗಿದ್ದು, ಅದರ ಸಂರಕ್ಷಣೆಗಾಗಿ ಮುಂದಿನ ಪೀಳಿಗೆಯನ್ನೂ ವಿದ್ಯಾವಂತರಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ನಾವು ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
     ಸಯ್ಯಿದ್ ಜುನೈದ್ ಜಿಫ್ರಿ ತಂಙಳ್ ಆತೂರುರವರ ದುವಾದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆತೂರು ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷರಾದ ಬಿ.ಕೆ.ಅಬ್ದುಲ್ ರಝಾಕ್ ವಹಿಸಿಕೊಂಡು ಧ್ವಜಾರೋಹಣ ನೆರವೇರಿಸಿದರು. ಆತೂರು ರೇಂಜ್ DKSBV ಚೇರ್ಮನ್ ಅಶ್ರಫ್ ರಹ್ಮಾನಿ ಮಕ್ಕಳಿಗೆ ದೇಶ ಪ್ರೇಮದ ಪ್ರತಿಜ್ಞಾವಿಧಿ ಬೋಧಿಸಿದರು. ಮಜೀದ್ ದಾರಿಮಿ ಕುಂಬ್ರ ಹಾಗೂ ಇಸ್ಹಾಕ್ ಕೌಸರಿ ಶುಭ ಹಾರೈಸಿದರು.      
      ಸಮಸ್ತ ವಿದ್ಯಾಭ್ಯಾಸ ಬೊಇರ್ಡ್ ನಿರ್ದೇಶನದಂತೆ ಎಳೆಯ ಮಕ್ಕಳಲ್ಲಿ ರಾಷ್ಟ್ರ ಪ್ರೇಮ, ಭಾವೈಕ್ಯತೆ, ಪ್ತಜಾಪ್ರಭುತ್ವದ ಅರಿವು ಮೂಡಿಸುವ ಭಾಗವಾಗಿ ಪ್ರತೀ ವರ್ಷವು ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬಾಲ ಇಂಡಿಯಾ ಎಂಬ ಕಾರ್ಯಕ್ರಮವನ್ನು ಸಮಸ್ತದ ಅಧಿನದಲ್ಲಿರುವ ಎಲ್ಲಾ ಮದ್ರಸಗಳಲ್ಲಿ ಆಚರಿಸಲಾಗುತ್ತದೆ.
      ಸಮಾರಂಭದಲ್ಲಿ  ಅಬ್ದುಲ್ ರಹ್ಮಾನ್ ಮರುವೇಲು, ಹಂಝ ಸಖಾಫಿ,  ರಫೀಕ್ ಅರ್ಶದಿ ಹಳೆನೇರಂಕಿ, ಇಸ್ಮಾಯಿಲ್ ಖಾಸಿಮಿ ಕುಂಡಾಜೆ, ಅಬ್ದುಲ್ಲಾ ಮುಸ್ಲಿಯಾರ್, ಸಿದ್ದೀಕ್ ನೀರಾಜೆ, ಬಿ.ಆರ್.ಅಬ್ದುಲ್ ಖಾದರ್, ನಝೀರ್ ಪೂರಿಂಗ, ಬಶೀರ್ ಮುಸ್ಲಿಯಾರ್,
ಯೂಸುಫ್ ನೀರಾಜೆ, ನಝೀರ್ ಪತ್ರಕರ್ತರು, ಇಸ್ಮಾಯಿಲ್ ಪಾಲ್ತಾಡಿ, ಸುಹೈಲ್, ಅಫ್ವಾನ್, ಬಾತಿಶ್, ಸಿರಾಜ್ ಮುಂತಾದ ಗಣ್ಯರು
ಉಪಸ್ಥಿತರಿದ್ದರು. ರೇಂಜ್ ವ್ಯಾಪ್ತಿಯ ನಾಯಕರು SKSBV  ವಿಧ್ಯಾರ್ಥಿಗಳು ಭಾಗವಹಿಸಿದ್ದರು. 
      ಕೆ.ಎಂ. ಎಸ್ ಫೈಝಿ ಕರಾಯ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಬ್ದುಲ್ ರಝಾಕ್ ದಾರಿಮಿ ಹಳೆನೇರಂಕಿ ಧನ್ಯವಾದ ಸಮರ್ಪಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ