ಪ್ಯಾಲಸ್ತೀನ್-ಇಸ್ರೇಲ್ ಶಾಂತಿ ಒಪ್ಪಂದ ಪ್ರತಿರೋಧಕ್ಕೆ ಸಂದ ಜಯ: ಹಮಾಸ್

ಪ್ಯಾಲಸ್ತೀನ್-ಇಸ್ರೇಲ್ ಶಾಂತಿ ಒಪ್ಪಂದ ಪ್ರತಿರೋಧಕ್ಕೆ ಸಂದ ಜಯ: ಹಮಾಸ್

ಪೆಲಸ್ತೀನ್: ಗಾಜಾ ಪಟ್ಟಿಯಲ್ಲಿ 11 ದಿನಗಳ ಕಾಲ ನಡೆದ ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದಿಂದ ಇಸ್ರೇಲ್ ಮತ್ತು  ಹಮಾಸ್ ಕದನ ವಿರಾಮವನ್ನು ಘೋಷಿಸಿದೆ.

      ಅದಾಗ್ಯೂ ಯಾವುದೇ  ಒಪ್ಪಂದದ ಉಲ್ಲಂಘನೆಗೆ ಪ್ರತೀಕಾರ ತೀರಿಸಲು ಸಜ್ಜಾಗಿದ್ದೇವೆ ಎಂದು ಎರಡೂ ಕಡೆಯವರು ಹೇಳಿಕೊಂಡಿದ್ದಾರೆ.

      ‘ಜೇರುಸಲೇಂನ ಖಡ್ಗ' (Sword of Jerusalem) ಯುದ್ಧದ ಸಮಯದಲ್ಲಿ ಇದು ಪ್ರತಿರೋಧದ ವಿಜಯ ಎಂದು ಗಾಜಾವನ್ನು ಆಳುವ ಇಸ್ಲಾಮಿಸ್ಟ್ ಹಮಾಸ್ ಹೇಳಿಕೊಂಡಿದೆ. ಇದು ಮಿಲಿಟರಿ ಮತ್ತು ಆರ್ಥಿಕವಾಗಿ ಸದೃಢವಾದ ವೈರಿಯ ವಿರುದ್ಧದ ಹೋರಾಟದಲ್ಲಿ ಯಶಸ್ವಿ ಪ್ರತಿರೋಧವೆಂದು ಬಿತ್ತರಿಸಿತು.

      ಇಸ್ರೇಲ್ ಧಾಳಿಯ ಕರಾಳ 11 ದಿನಗಳ ಕಾಲ ಪ್ಯಾಲೆಸ್ತೀನಿಯರು ಗಾಜಾದ ಬೀದಿಗಳಲ್ಲಿ ಕಳೆದಿದ್ದರು. ಈ ಒಪ್ಪಂದಕ್ಕಾಗಿ ಗಾಜಾದ ಜನತೆ ಹರ್ಷ ವ್ಯಕ್ತಪಡಿಸಿದರು. ಈ ಯುದ್ಧದಿಂದಾಗಿ ಗಾಜಾದ ಪ್ಯಾಲೆಸ್ಟೀನಿಯರಿಗೆ ರಂಜಾನ್ ಮುಕ್ತಾಯದಲ್ಲಿ ಈದುಲ್-ಫಿತರ್ ಹಬ್ಬವನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಶುಕ್ರವಾರ, ಗಾಜಾದಾದ್ಯಂತ ಮುಂದೂಡಲ್ಪಟ್ಟ ಈದ್ ಅಲ್-ಫಿತರ್ ಹಬ್ಬವನ್ನು ಆಚರಿಸಲಾಗುವುದು.

      ಜೆರುಸಲೇಂನ ಅಲ್-ಅಕ್ಸಾ ಮಸೀದಿಯು ವಿವಾದದ ಕೇಂದ್ರ ಬಿಂದುವಾಗಿತ್ತು. ಮೇ 10 ರಂದು  ಪವಿತ್ರ ರಂಜಾನ್ ಉಪವಾಸದ ತಿಂಗಳಲ್ಲಿ ಅಲ್-ಅಕ್ಸಾ ಮಸೀದಿಯಲ್ಲಿ ಪ್ರತಿಭಟನಾಕಾರರೊಂದಿಗೆ ಪೊಲೀಸ್ ಮುಖಾಮುಖಿಯೂ ಸೇರಿದಂತೆ, ಜೆರುಸಲೇಂನಲ್ಲಿ ಇಸ್ರೇಲಿಗಳು ತಮ್ಮ ಹಕ್ಕುಗಳನ್ನು ತಡೆಯುತ್ತಿದ್ದಂತೆ ಪ್ಯಾಲೆಸ್ಟೀನಿಯರು ಕೋಪದಿಂದ ಅವರನ್ನು ಪ್ರತಿರೋಧಿಸಿದರು.

      ವೈಮಾನಿಕ ಬಾಂಬ್ ಸ್ಫೋಟಗಳಲ್ಲಿ 65 ಮಕ್ಕಳು ಸೇರಿದಂತೆ 232 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ ಮತ್ತು 1,900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕನಿಷ್ಠ 160 ಯೋಧರನ್ನು ಕೊಂದಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ.

      ಇಸ್ರೆಲ್ ನ ಅಧಿಕೃತ ಘೋಷಣೆಯಂತೆ ಇಸ್ರೇಲಿಗರ ಸಾವಿನ ಸಂಖ್ಯೆ 12. ರಾಕೆಟ್ ದಾಳಿಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ ಮತ್ತು ಭಯಭೀತರಾದ ಜನರನ್ನು ಆಶ್ರಯ ಕೇಂದ್ರಗಳಿಗೆ ಕಳುಹಿಸಲಾಗಿದೆ.
      ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್, ಇಸ್ರೇಲಿ ಮತ್ತು ಪ್ಯಾಲೇಸ್ಟಿನಿಯನ್ ನಾಯಕರು ಸಂಘರ್ಷದ ಮೂಲ ಕಾರಣಗಳನ್ನು ಕಂಡುಕೊಂಡು, ಅವುಗಳನ್ನು ಪರಿಹರಿಸಲು ಶಾಂತಿಯನ್ನು ಪುನಃಸ್ಥಾಪಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಅವರು ಗಂಭೀರ ಸಂವಾದದೊಂದಿಗೆ ಸುದ್ದಿಗಾರರಿಗೆ ತಿಳಿಸಿದರು.

      ಗಾಜಾ ಭವಿಷ್ಯದ ಪ್ಯಾಲೇಸ್ಟಿನಿಯನ್ ರಾಜ್ಯದ ಅವಿಭಾಜ್ಯ ಅಂಗವಾಗಿದೆ ಮತ್ತು ವಿಭಜನೆಯನ್ನು ಕೊನೆಗೊಳಿಸುವ ನಿಜವಾದ ರಾಷ್ಟ್ರೀಯ ಸಾಮರಸ್ಯವನ್ನು ಮೂಡಿಸುವ ಯಾವುದೇ ಪ್ರಯತ್ನವನ್ನು ಕೈ ಬಿಡಬಾರದು "ಎಂದು ಅವರು ಹೇಳಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ