ಪಬ್ಲಿಕ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದ ಸಮಸ್ತ ವಿದ್ಯಾಭ್ಯಾಸ ಬೋರ್ಡ್: 96.08% ಉತ್ತೀರ್ಣ, 506 ಟಾಪ್ ಪ್ಲಸ್

ಪಬ್ಲಿಕ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದ ಸಮಸ್ತ ವಿದ್ಯಾಭ್ಯಾಸ ಬೋರ್ಡ್:  96.08% ಉತ್ತೀರ್ಣ, 506 ಟಾಪ್ ಪ್ಲಸ್

ಚೇಳಾರಿ (ಕೇರಳ), ಎ.29 : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ಏಪ್ರಿಲ್ ಮೊದಲ ವಾರದಲ್ಲಿ ಆನ್ಲೈನ್ ಹಾಗೂ ಆಫ್‌ಲೈನ್ ಮೂಲಕ ನಡೆಸಿದ ಈ ಬಾರಿಯ ಮದರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆಯಾಗಿ ಶೆಖಡಾ 96.08 ಸಾಧನೆ ದಾಖಲಾಗಿದೆ.
      ಎಪ್ರಿಲ್ 2 ಮತ್ತು 3 ರಂದು ವಿದೇಶಗಳಲ್ಲಿ ಆನ್ಲೈನ್ ಮುಖಾಂತರವೂ, ಏಪ್ರಿಲ್  3 ಮತ್ತು 4ರಂದು ಭಾರತದಲ್ಲಿ ಆಫ್‌ಲೈನ್ ಮುಖಾಂತರವೂ ಸಮಸ್ತ ಮದ್ರಸಗಳ ಪಬ್ಲಿಕ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.
  ಐದು, ಏಳು, ಹತ್ತು, ಪ್ಲಸ್ ಟು  ತರಗತಿಗಳಲ್ಲಿ ನೋಂದಾವಣೆ ಮಾಡಿದ್ದ 2,62,577 ವಿದ್ಯಾರ್ಥಿಗಳಲ್ಲಿ 2,54,205 ಮಂದಿ ಪರೀಕ್ಷೆಯಲ್ಲಿ ಭಾಗವಹಿಸಿದ್ದು  ಇದರಲ್ಲಿ 2,44,228 ಉತ್ತೀರ್ಣರಾಗಿ  (96.08%) ಫಲಿತಾಂಶ ದಾಖಲಿಸಿದ್ದಾರೆ. ವಿವಿಧ ಕಾರಣಗಳಿಂದಾಗಿ 8,372 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
     506 ವಿದ್ಯಾರ್ಥಿಗಳು ಟಾಪ್ ಪ್ಲಸ್, 18,212 ಮಂದಿ ಡಿಸ್ಟಿಂಕ್ಷನ್, 42,543 ಪ್ರಥಮ ಶ್ರೇಣಿ, 28,145 ದ್ವಿತೀಯ ಶ್ರೇಣಿ, ಹಾಗೂ 1,54,822  ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
  ಕೇರಳ, ಕರ್ನಾಟಕ, ಪಾಂಡಿಚೇರಿ, ತಮಿಳುನಾಡು, ಅಂಡಮಾನ್, ಲಕ್ಷದೀಪ, ಯು.ಎ.ಇ, ಕತ್ತರ್, ಸೌದಿ ಅರೇಬಿಯಾ, ಬಹರೈನ್ , ಒಮಾನ್, ಕುವೈತ್ ಮೊದಲಾದೆಡೆ 7,224 ಕೇಂದ್ರಗಳಲ್ಲಿ ಈ ಬಾರಿಯ ಪಬ್ಲಿಕ್ ಪರೀಕ್ಷೆಗಳು ನಡೆದಿತ್ತು. ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನ ಅಂಗೀಕೃತ 10,287 ಮದರಸಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.

ಐದನೇ ತರಗತಿ:  5ನೇ ತರಗತಿಯಲ್ಲಿ ಪರೀಕ್ಷೆ ಬರೆದ 1,14,049 ವಿದ್ಯಾರ್ಥಿಗಳಲ್ಲಿ 1,10,327 ಮಂದಿ ಉತ್ತೀರ್ಣರಾಗಿದ್ದು 96.74 % ಫಲಿತಾಂಶ ದಾಖಲಿಸಿದ್ದಾರೆ. 300 ಮಂದಿ ಟಾಪ್ ಪ್ಲಸ್, 12,409 ಡಿಸ್ಟಿಂಕ್ಷನ್, 28,899 ಪ್ರಥಮ ಶ್ರೇಣಿ, 17,856 ದ್ವಿತೀಯ ಶ್ರೇಣಿ, 50,863 ತೃತೀಯ ಶ್ರೇಣಿ ಪಡೆದುಕೊಂಡಿದ್ದಾರೆ.

ಏಳನೇ ತರಗತಿ: ಏಳನೇ ತರಗತಿ ಪರೀಕ್ಷೆಯಲ್ಲಿ ಭಾಗವಹಿಸಿದ 96,877 ವಿದ್ಯಾರ್ಥಿಗಳಲ್ಲಿ 92,208 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.18 % ಫಲಿತಾಂಶ ದಾಖಲಿಸಿದ್ದಾರೆ. 75 ಮಂದಿ ಟಾಪ್ ಪ್ಲಸ್, 3,503 ಡಿಸ್ಟಿಂಕ್ಷನ್,  7,449 ಪ್ರಥಮ ಶ್ರೇಣಿ, 6,350 ದ್ವಿತೀಯ ಶ್ರೇಣಿ, 74,831 ತೃತೀಯ ಶ್ರೇಣಿ ಪಡೆಸುಕೊಂಡಿದ್ದಾರೆ.

ಹತ್ತನೇ ತರಗತಿ: ಹತ್ತನೇ ತರಗತಿ ಪರೀಕ್ಷೆಯಲ್ಲಿ ಭಾಗವಹಿಸಿದ 37,064 ವಿದ್ಯಾರ್ಥಿಗಳಲ್ಲಿ 35,639 ವಿದ್ಯಾರ್ಥಿಗಳು ಉತ್ತೀರ್ಣರಾಗಿ 96.16 % ಫಲಿತಾಂಶ ದಾಖಲಾಗಿದೆ. 88 ಮಂದಿ ಟಾಪ್ ಪ್ಲಸ್, 1,559 ಡಿಸ್ಟಿಂಕ್ಷನ್, 4,894 ಪ್ರಥಮ ಶ್ರೇಣಿ, 3,240 ದ್ವಿತೀಯ ಶ್ರೇಣಿ, 25,858 ತೃತೀಯ ಶ್ರೇಣಿ ಪಡೆದಿದ್ದಾರೆ.

12ನೇ ತರಗತಿ: ಪ್ಲಸ್ ಟು ತರಗತಿಯಲ್ಲಿ ಪರೀಕ್ಷೆ ಬರೆದ 6,215 ವಿದ್ಯಾರ್ಥಿಗಳಲ್ಲಿ 6,054 ಮಂದಿ ಜಯ ಸಾಧಿಸಿದ್ದಾರೆ. 97.41%. 43 ಮಂದಿ ಟಾಪ್ ಪ್ಲಸ್, 741 ಡಿಸ್ಟಿಂಕ್ಷನ್, 1,301 ಪ್ರಥಮ ಶ್ರೇಣಿ, 699 ದ್ವಿತೀಯ ಶ್ರೇಣಿ , 3,270 ತೃತೀಯ ಶ್ರೇಣಿ ಪಡೆದುಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ: ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ಬಾರಿ ಒಟ್ಟು 7,753 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು.  ಫಲಿತಾಂಶ www.samastha.info ವೆಬ್ಸೈಟ್ ಗಳಲ್ಲಿ ಲಭ್ಯವಿದೆ ಎಂದು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡ್ ನ ಚೆಯರ್ಮೆನ್ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ವಿವರಗಳನ್ನು ಪ್ರಕಟಿಸಿದ್ದಾರೆ.
      ಕಳೆದ ವರ್ಷ ಆರಂಭವಾದ ಕೋವಿಡ್ ದುರಂತದಿಂದ ವಿಶ್ವವೇ ತಲೆಯ ಮೇಲೆ ಕೈ ಹೊತ್ತು ಕೂತಿದ್ದಾಗ ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ಅತ್ಯಂತ ನಾಜೂಕಿನಿಂದ, ಸರಳ ರೀತಿಯಲ್ಲಿ ಕ್ರಿಯಾತ್ಮಕವಾಗಿ ಆನ್‌ಲೈನ್ ಮುಖಾಂತರ ಮದರಸ ವಿದ್ಯಾಭ್ಯಾಸವನ್ನು ಮುಂದುವರಿಸಿತ್ತು. ವಿದ್ಯಾರ್ಥಿಗಳ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಯೋಜನೆಯು ಅತ್ಯಂತ ಜನಪ್ರಿಯವೂ ಆಗಿತ್ತು. ಆನ್ಲೈನ್ ತರಗತಿಗಳಲ್ಲದೆ ಪರೀಕ್ಷೆಯನ್ನೂ ಆನ್ಲೈನ್ ಮೂಲಕ ನಡೆಸುವುದರೊಂದಿಗೆ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ದಿಟ್ಟ ಹೆಜ್ಜೆಯನ್ನಿಟ್ಟಿತ್ತು. ಸಮಸ್ತದ ಪ್ರಯತ್ನವು ಸರಿಯಾದ ಹಾದಿಯಲ್ಲಿದ್ದು ಜನತೆ ಅದನ್ನು ವಿದ್ಯಾರ್ಥಿಗಳು ಅದನ್ನು ಸ್ವೀಕರಿಸಿದ್ದಾರೆ ಎಂಬುದಕ್ಕೆ ಫಲಿತಾಂಶವೇ ಸಾಕ್ಷಿಯಾಗಿದೆ ಎಂದು ಸಮಸ್ತ ಮುಫತ್ತಿಷ್ ಉಮರ್ ದಾರಿಮಿ ಸಾಲ್ಮರ ತಿಳಿಸಿದ್ದಾರೆ.

      ಟಾಪ್ ಪ್ಲಸ್ ಪಡೆದ ಹಾಗೂ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಮುಫತ್ತಿಷ್ ಉಮರ್ ದಾರಿಮಿ, SKSSF ಜಿಲ್ಲಾ ಅಧ್ಯಕ್ಷರಾದ ಸಯ್ಯದ್ ಅಮೀರ್ ತಂಙಳ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ವಿದ್ಯಾಭ್ಯಾಸ ಬೋರ್ಡ್ ಸದಸ್ಯರಾದ ರಶೀದ್ ಹಾಜಿ ಪರ್ಲಡ್ಕ, ಷರೀಫ್ ಫೈಝಿ, ಕಡಬ, ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಅಬೂಬಕ್ಕರ್ ಹಾಜಿ ಗೋಳ್ತಮಜಲು,  ರಫೀಕ್ ಕೊಡಾಜೆ, ಮುದರ್ರಿಬ್ ಗಳಾದ ತಾಜುದ್ದೀನ್ ರಹ್ಮಾನಿ, ರಿಯಾಝ್ ರಹ್ಮಾನಿ ಮುಫತ್ತಿಷರುಗಳಾದ ಕಾಸಿಂ ಮುಸ್ಲಿಯಾರ್ ಮಠ, ಅಬ್ದುಲ್ ಹಮೀದ್ ದಾರಿಮಿ ಕಕ್ಕಿಂಜೆ, ಹನೀಫ್ ಮುಸ್ಲಿಯಾರ್ ಬೋಳಂತೂರ್, ಉಮರುಲ್ ಫಾರೂಕ್ ದಾರಿಮಿ ತೆಕ್ಕಾರು, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ರೆಂಜಾಡಿ ಲತೀಫ್ ದಾರಿಮಿ, ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಮೊಯಿದಿನಬ್ಬ ಹಾಜಿ ಮಂಗಳೂರು, SKSBV ಚೇರ್ಮಾನ್ ರಫೀಕ್ ಫೈಝಿ ಕನ್ಯಾನ ಮುಂತಾದವರು ವಿಶೇಷವಾಗಿ ಅಭಿನಂದಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ