ಪಿನಂಗೋಡ್ ಅಬೂಬಕರ್ ಹಾಜಿ ನಿಧನ ತುಂಬಲಾರದ ನಷ್ಟ: ಮುಫತ್ತಿಶ್ ಉಮರ್ ದಾರಿಮಿ

ಪಿನಂಗೋಡ್ ಅಬೂಬಕರ್ ಹಾಜಿ ನಿಧನ ತುಂಬಲಾರದ ನಷ್ಟ: ಮುಫತ್ತಿಶ್ ಉಮರ್ ದಾರಿಮಿ
republicday728
republicday468
republicday234

ಕಲ್ಪಟ್ಟ, (ಕೇರಳ) ಎಪ್ರಿಲ್ 19: ಎರಡು ದಶಕಗಳ ಕಾಲ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಜನರಲ್ ಮ್ಯಾನೇಜರ್ ಆಗಿದ್ದ ಖ್ಯಾತ ಚಿಂತಕ,  ಬರಹಗಾರ, ಕೇರಳದ ವಯನಾಡು ಜಿಲ್ಲೆಯ ನಿವಾಸಿಯಾದ ಪಿನಂಗೋಡ್ ಅಬೂಬಕರ್ (64) ರವರು ಅಲ್ಪಕಾಲದ ಅನಾರೋಗ್ಯದಿಂದ ಇಂದು (ಎಪ್ರಿಲ್ 19) ಸಾಯಂಕಾಲ ವಿಧಿವಶರಾದರು.
       ಸುಮಾರು 64 ವರ್ಷ ಪ್ರಾಯವಾಗಿದ್ದ ಅವರು ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
      ಮದ್ರಸಾ ಅಧ್ಯಾಪಕ ಸೇವೆಯ ಮೂಲಕ ಧಾರ್ಮಿಕ ಸೇವೆಯನ್ನು ಆರಂಭಿಸಿದ ಅವರು ತನ್ನ ಪ್ರಾಮಾಣಿಕ ನಡೆನುಡಿಗಳಿಂದ ಸಮಸ್ತದ ಎಲ್ಲಾ ಸಂಘಟನೆಗಳ ನೇತೃದಲ್ಲಿ ಅದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದರು. ಸಮಸ್ತ ಶಿಕ್ಷಣ ಮಂಡಳಿಗೆ ಆಧುನಿಕ ಶಾಸ್ತ್ರೀಯ ಸ್ಪರ್ಶವನ್ನು ನೀಡಿದ ಅವರು ಸಮಸ್ತದ ಪಠ್ಯಪುಸ್ತಕಗಳನ್ನು ಎಲ್ಲಾ ಭಾಷೆಗಳಿಗೆ ವಿಸ್ತರಿಸುವ ಮೂಲಕ ಸಮಸ್ತವನ್ನು ಸಾರ್ವಜನಿಕಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಕನ್ನಡಿಗರಾದ ಐದು ಮಂದಿ ಮದರಸ  ತಪಾಸಣಾಧಿಕಾರಿಗಳಾದ ಮುಫತ್ತಿಶುಗಳನ್ನು ವಿದ್ಯಾಭ್ಯಾಸ ಬೋರ್ಡಿಗೆ ಆಯ್ಕೆಮಾಡಿಕೊಂಡು  ಅವರ ಮೂಲಕ ಸಮಸ್ತದ ಪಠ್ಯಪುಸ್ತಕಗಳನ್ನು ಅಗತ್ಯವಾದ ಕಡೆಗೆ ಕನ್ನಡದಲ್ಲಿ ಮತ್ತು ಉರ್ದುವಿನಲ್ಲಿ  ಮುದ್ರಿಸಲು ವ್ಯವಸ್ಥೆ ಮಾಡಿ ಅದರಲ್ಲಿ ಸಫಲರಾಗಿದ್ದರು. ಮದರಸ ಪಬ್ಲಿಕ್ ಪರೀಕ್ಷೆಗೆ ಪ್ರಸ್ತುತವಿರುವ ಆಧುನಿಕ ಶಾಸ್ತ್ರೀಯ ವಿನ್ಯಾಸಗಳು  ಮತ್ತು ಕೇಂದ್ರೀಕೃತ ಮೌಲ್ಯಮಾಪನಗಳನ್ನು  ಜಾರಿಗೆ ತಂದದ್ದು ಅವರ ಸಾಧನೆಗಳಲ್ಲಿ ಒಂದು.
      ಕನ್ನಡಿಗರೊಂದಿಗೆ ಅಪಾರವಾದ ಪ್ರೀತಿ ಹೊಂದಿದ್ದ ಅವರು ಇಲ್ಲಿಗೆ ಹಲವು ಬಾರಿ ಆಗಮಿಸಿ  ಉಲಮಾ ಉಮರಾ  ತರಗತಿಗಳನ್ನು ನಡೆಸಿಕೊಟ್ಟಿದ್ದಾರೆ. ಕಣ್ಣಿಯತ್ ಉಸ್ತಾದರ  ಸೂಕ್ಷ್ಮತೆಯನ್ನು ಸದಾ ಪ್ರತಿಪಾದಿಸುತ್ತಿದ್ದ ಅವರು ತನ್ನ  ಜೀವನದಲ್ಲಿಯೂ ಅದನ್ನು ಅಳವಡಿಸಿಕೊಂಡು ಸರಳ ಸುಂದರ ರೀತಿಯ ಜೀವನ ನಡೆಸುತ್ತಿದ್ದರು. 
     2002 ರಲ್ಲಿ ಸಮಸ್ತದ  ಮುಫತ್ತಿಶಾದ  ಸಮಯದಿಂದ ಎಸ್.ವೈ.ಎಸ್,  ಎಸ್.ಎಂ.ಎಫ್, ಸುನ್ನೀ ಆಫ್ಕಾರ್, ಹಾಗೂ ಸಮಸ್ತದ ಕನ್ನಡ ಪಠ್ಯಪುಸ್ತಕ ನಿರ್ಮಾಣದಲ್ಲಿ ಅವರ ಜೊತೆಗೂಡಿ ಕಾರ್ಯಾಚರಿಸುವ ಅವಕಾಶ ತನಗೆ ಲಭ್ಯವಾಗಿದ್ದು ಮತ್ತು ಈ ಸಂದರ್ಭಗಳಲ್ಲಿ ಅವರು ನೀಡುತ್ತಿದ್ದ ಗೌರವಾದರಗಳು ಹಾಗೂ  ನಿರ್ಣಾಯಕವಾದ ಅವರ ಪ್ರಾಮಾಣಿಕ ನಿಲುವುಗಳು  ಅವರೆಂದೂ ನನ್ನ ಮನಸ್ಸಿನಿಂದ ಅಳಿದು ಹೋಗದಂತೆ ಸದಾ ಚಿರಸ್ಮರಣೀಯವಾಗಿರಲಿದೆ ಎಂದು ಮುಫತ್ತಿಷ್ ಉಮರ್ ದಾರಿಮಿ ಸ್ಮರಿಸಿಕೊಂಡರು. 
      ಉತ್ತಮ ಸಾಹಿತಿಯಗಿರುವ ಅವರು ಮಲಯಾಳದಲ್ಲಿ ನೂರಾರು ಪುಸ್ತಕಗಳನ್ನು ರಚಿಸಿದ್ದಾರೆ. ಅವರ  ಕೆಲವು ಪುಸ್ತಕಗಳನ್ನು ಉಮರ್ ದಾರಿಮಿಯವರು ಕನ್ನಡಕ್ಕೂ ಭಾಷಾಂತರಿಸಿದ್ದರು. ಸುನ್ನಿ ಅಫ್ಕಾರಿನ ಖಾಯಂ ಅಂಕಣಕಾರರಾಗಿದ್ದ ಅವರು ಸಮಸ್ತದ  ಸುಪ್ರಭಾತ ಮಲಯಾಳ ದೈನಿಕ ಪ್ರಾರಂಭಗೊಂಡಾಗ ಅದರ ರೆಸಿಡೆನ್ಸಿಯಲ್ ಸಂಪಾದಕರಾಗಿ ಭಡ್ತಿ ಪಡೆದು ವಿದ್ಯಾಭ್ಯಾಸ ಬೋರ್ಡ್ ಮಾನೇಜರ್ ಹುದ್ದೆಯಿಂದ ನಿರ್ಗಮಿಸಿದ್ದರು.
     ಎಸ್.ವೈ.ಎಸ್ ರಾಜ್ಯ ಟ್ರಶರರ್, ಸುಪ್ರಭಾತಂ ದಿನಪತ್ರಿಕೆಯ ಸಂಪಾದಕ, ಸುನ್ನೀ ಮಹಲ್ಲ್ ಫೆಡೆರೇಶನ್ ರಾಜ್ಯ ಕಾರ್ಯದರ್ಶಿ, ಸಮಸ್ತ ಲೀಗಲ್ ಸೆಲ್ ಜನರಲ್ ಕನ್ವೀನರ್, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಎಕ್ಸಿಕ್ಯುಟಿವ್ ಸದಸ್ಯ, SKIMV ಬೋರ್ಡ್ ಮ್ಯಾನೇಜರ್, ಸುನ್ನೀ ಅಫ್ಕಾರ್ ವಾರಪತ್ರಿಕೆಯ ಮ್ಯಾನೇಜಿಂಗ್ ಎಡಿಟರ್, ಸುನ್ನೀ ಮಹಲ್ಲ್ ಫೆಡೆರೇಶನ್ ವಯನಾಡ್ ಜಿಲ್ಲಾಧ್ಯಕ್ಷ, ಸಮಸ್ತ ವಯನಾಡ್ ಜಿಲ್ಲಾ ಆರ್ಡಿನೇಶನ್ ಚೆಯರ್ಮೆನ್, ಸಮಸ್ತ ಲೀಗಲ್ ಸೆಲ್ ವಯನಾಡ್ ಜಿಲ್ಲಾ ಚಯರ್ಮೆನ್, ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿ ಮ್ಯಾನೇಜಿಂಗ್ ಕಮಿಟಿ ಸದಸ್ಯ ಮುಂತಾದ ಸ್ಥಾನಗಳನ್ನು ವಹಿಸಿದ್ದರು. ಇದು ಪಿನಂಗೋಡು ಅಬೂಬಕ್ಕರ್ ರವರ ಕ್ರಿಯಾ ಶೀಲತೆ ಮತ್ತು ಚಿಂತನಾ ಶಕ್ತಿಯನ್ನು ಸೂಚಿಸುತ್ತದೆ.
       ಪಿನಂಗೋಡುರವರ ನಿಧನವು ಈ ಸಮುದಾಯಕ್ಕೆ, ಈ ಸಮಾಜಕ್ಕೆ ತುಂಬಲಾರದ ನಷ್ಟ  ಎಂದು ಸಮಸ್ತದ ಮದರಸಾ ತಪಾಸಣಾಧಿಕಾರಿಗಳಾದ ಮುಫತ್ತಿಶ್ ಉಮರ್  ದಾರಿಮಿ ಸಾಲ್ಮರ, ಕಾಸಿಂ ಮುಸ್ಲಿಯಾರ್ ಮಠ, ಹನೀಫ್ ಮುಸ್ಲಿಯಾರ್ ಬೋಳಂತೂರು, ಅಬ್ದುಲ್ ಹಮೀದ್ ದಾರಿಮಿ ಕಕ್ಕಿಂಜೆ, ಉಮರುಲ್  ಫಾರೂಕ್ ದಾರಿಮಿ ತೆಕ್ಕಾರು ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಯ್ಯದ್ ಅಹ್ಮದ್ ಭಾಷಾ ತಂಙಳ್: ಪಿನಂಗೋಡು ಅಬೂಬಕ್ಕರ್ ರವರ ನಿಧನಕ್ಕೆ SYS ದ.ಕ. ಜಿಲ್ಲಾ ಉಪಾಧ್ಯಕ್ಷ, SMF ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಬಂದರು ಝೀನತ್ ಬಕ್ಷ್ ಜುಮ್ಮಾ ಮಸೀದಿ ಮತ್ತು ಬಾವುಟ ಗುಡ್ಡ ಈದ್ಗಾ ಮಸೀದಿಯ ಕೋಶಾಧಿಕಾರಿ ಸಯ್ಯಿದ್ ಅಹ್ಮದ್ ಭಾಷಾ ತಂಙಳ್ ಸಂತಾಪ ವ್ಯಕ್ತಪಡಿಸಿದ್ದಾರೆ. ಎಸ್ಕೆಎಸ್ಎಸ್ಎಫ್ ಜಿಲ್ಲಾ ಅದ್ಯಕ್ಷರಾದ ಸಯ್ಯಿದ್ ಅಮೀರ್ ತಂಙಳ್ ರವರು ಪಿನಂಗೋಡು ಅಬೂಬಕ್ಕರ್ ರವರ ನಿಧನಕ್ಕೆ ಸಂತಾಪ ಸೂಚಿಸಿ ಮೃತರ ಪರಲೋಕ ಜೀವನವು ಸುಖಕರವಾಗಲೆಂದು ಪ್ರಾರ್ಥಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ