ಪುತ್ತೂರು ವಲಯ ಆಂಬುಲೆನ್ಸ್ ಲೋಕಾರ್ಪಣೆ: ಎಸ್ಕೆಎಸ್‌ಎಸ್‌ಎಫ್‌ ಆಂಬುಲೆನ್ಸ್‌ಗಳ ಸಂಖ್ಯೆ 11 ಕ್ಕೇರಿಕೆ

ಪುತ್ತೂರು ವಲಯ ಆಂಬುಲೆನ್ಸ್ ಲೋಕಾರ್ಪಣೆ: ಎಸ್ಕೆಎಸ್‌ಎಸ್‌ಎಫ್‌ ಆಂಬುಲೆನ್ಸ್‌ಗಳ ಸಂಖ್ಯೆ 11 ಕ್ಕೇರಿಕೆ

ಪುತ್ತೂರು: ಎಸ್ಕೆಎಸ್‌ಎಸ್‌ಎಫ್‌ ಪುತ್ತೂರು ವಲಯದ ಮಹತ್ವಾಕಾಂಕ್ಷಿ ಯೋಜನೆಯಾದ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮವು ಮುಕ್ರಂಪಾಡಿ ಮಸೀದಿ ಮುಂಭಾಗದಲ್ಲಿ ಇತ್ತೀಚೆಗೆ ನಡೆಯಿತು.

      ಹತ್ತು ಹಲವು ಸಾಮಾಜಿಕ ಹಾಗೂ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಸ್ಕೆಎಸ್‌ಎಸ್‌ಎಫ್‌ ದ.ಕ.ಜಿಲ್ಲೆಯಲ್ಲಿ ಮತ್ತೊಂದು ಆಂಬುಲೆನ್ಸ್‌ ಲೋಕಾರ್ಪಣೆ ಮಾಡಿದೆ. ಎಸ್ಕೆಎಸ್‌ಎಸ್‌ಎಫ್‌ ಪುತ್ತೂರು ವಲಯದ ನೇತೃತ್ವದಲ್ಲಿ ಸೇವೆಗೆ ಸಜ್ಜುಗೊಂಡ ಆಂಬುಲೆನ್ಸ್‌ನ್ನು ಪುತ್ತೂರಿನ ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಲೋಕಾರ್ಪಣೆಗೈಯುವುದರೊಂದಿಗೆ ಜಿಲ್ಲೆಯಲ್ಲಿ ಎಸ್ಕೆಎಸ್‌ಎಸ್‌ಎಫ್‌ ಆಂಬುಲೆನ್ಸ್‌ ಸಂಖ್ಯೆ ಹನ್ನೊಂದಕ್ಕೇರಿತು.

      ಎಸ್ಕೆಎಸ್‌ಎಸ್‌ಎಫ್‌ ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಕಿನ್ಯ ದುಆ ನೆರವೇರಿಸಿ ಆಂಬುಲೆನ್ಸ್‌ ಸಾಂಕೇತಿಕವಾಗಿ ಚಲಾಯಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಳ್ಳಾಲ ಸಯ್ಯಿದ್ ಮದನಿ ಅರಬಿ ಕಾಲೇಜು ಪ್ರಾಂಶುಪಾಲರಾದ ಉಸ್ಮಾನ್ ಫೈಝಿ ತೋಡಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಕೆಎಸ್‌ಎಸ್‌ಎಫ್‌ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪುತ್ತೂರು ಬದ್ರೀಯಾ ಮಸೀದಿ ಮುದರ್ರಿಸ್ ಅಬ್ಬಾಸ್ ಫೈಝಿ ಪುತ್ತಿಗೆ ಮುಖ್ಯ ಭಾಷಣ ಮಾಡಿದರು.

      ಖ್ಯಾತ ವೈದ್ಯರುಗಳಾದ ಡಾ.ಸುರೇಶ್ ಪುತ್ತುರಾಯ, ಡಾ.ನಝೀರ್ ಅಹ್ಮದ್, ತಾಲೂಕು ಜಂ-ಇಯ್ಯತುಲ್ ಉಲಮಾ ಪ್ರದಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಉಮರ್ ದಾರಿಮಿ ಸಾಲ್ಮರ, ಎಸ್ಕೆಎಸ್‌ಎಸ್‌ಎಫ್‌ ಕೇಂದ್ರ ಸಮಿತಿ ಕಾರ್ಯದರ್ಶಿ ಖಾಸಿಂ ದಾರಿಮಿ ಕಿನ್ಯ, ಪಣೇಮಜಲು ಮಸೀದಿ ಖತೀಬ್ ಅಬ್ಬಾಸ್ ಮದನಿ ಪಣೆಮಜಲು, ಸಾಲ್ಮರ ಮಸೀದಿ ಖತೀಬ್ ಉಮರ್ ದಾರಿಮಿ ಸಾಲ್ಮರ, ಪುತ್ತೂರು ಅನ್ಸಾರುದ್ಧೀನ್ ಜಮಾಅತ್ ಅಧ್ಯಕ್ಷ ರಝಾಕ್ ಹಾಜಿ ಮುಂತಾದವರು ಶುಭ ಹಾರೈಸಿದರು.

      ಸಮಾರಂಭದಲ್ಲಿ ಸಯ್ಯಿದ್ ಶರಫುದ್ದೀನ್ ತಂಙಳ್ ಸಾಲ್ಮರ, ವಿಖಾಯ ಜಿಲ್ಲಾ ಚಯರ್ಮಾನ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಕಲ್ಲೇಗ ಮುದರ್ರಿಸ್ ಸಿದ್ದೀಕ್ ಜಲಾಲಿ, ಮುಕ್ರಂಪಾಡಿ ಮಸೀದಿ ಖತೀಬ್ ಹಸನ್ ಬಾಖವಿ ಮಾಡನ್ನೂರು, ಸಂಟ್ಯಾರ್ ಖತೀಬ್ ಅಶ್ರಫ್ ದಾರಿಮಿ, ಎಸ್ಕೆಎಸ್‌ಎಸ್‌ಎಫ್‌ ಜಿಲ್ಲಾ ಉಪಾಧ್ಯಕ್ಷರಾದ ತಾಜುದ್ದೀನ್ ರಹ್ಮಾನಿ ಕುಂಬ್ರ, ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಪುತ್ತೂರು ನಗರಸಭಾ ಸದಸ್ಯ ಯೂಸುಫ್ ಕೂರ್ನಡ್ಕ, ಜಮಾಲುದ್ದೀನ್ ಹಾಜಿ ಮುಕ್ವೆ, ಎಸ್.ವೈ.ಎಸ್ ಅಧ್ಯಕ್ಷ ಅಬೂಬಕರ್ ಮುಲಾರ್, ಪುತ್ತು ಹಾಜಿ ಬಾಯಾರು, ಗಲ್ಫ್ ಪ್ರತಿನಿಧಿ ನಾಸಿರ್ ರೆಂಜಲಾಡಿ ಮುಂತಾದವರು ಉಪಸ್ಥಿತರಿದ್ದರು.

      ಯುಎಇ ಎಸ್ಕೆಎಸ್‌ಎಸ್‌ಎಫ್‌ ನೀಡಿದ ಆಕ್ಸಿಜನ್ ಸಿಲಿಂಡರನ್ನು ಜಿಲ್ಲಾಧ್ಯಕ್ಷರಾದ ಸಯ್ಯಿದ್ ಅಮೀರ್ ತಂಙಳ್ ವಲಯ ವಿಖಾಯ ಮತ್ತು ಸಹಚಾರಿ ನಾಯಕರಿಗೆ ಹಸ್ತಾಂತರಿಸಿದರು.

      ಇದಕ್ಕೂ ಮೊದಲು ನಡೆದ ಕಾರ್ಯಕರ್ತರ ಸಂಗಮದಲ್ಲಿ ಎಸ್ಕೆಎಸ್‌ಎಸ್‌ಎಫ್‌ ಜಿಲ್ಲಾ ನೇತಾರರಾದ ರಿಯಾಝ್ ರಹ್ಮಾನಿ ಕಿನ್ಯ ಮತ್ತು ಹಕೀಂ ಬಂಗೇರಕಟ್ಟೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಅತೀ ಹೆಚ್ಚು ಸಹಚಾರಿ ಫಂಡ್‌ ಸಂಗ್ರಹಿಸಿದ ಶಾಖೆಗೆ ನೀಡಲ್ಪಡುವ ಅವಾರ್ಡ್ ವಿತರಿಸಿದರು. ವಲಯ ಉಪಾಧ್ಯಕ್ಷ ಇಬ್ರಾಹಿಂ ಬಾತಿಷ ಪಾಟ್ರಕೋಡಿ ಪ್ರತಿಭಾ ಪುರಸ್ಕಾರಗಳನ್ನು ವಿತರಿಸಿದರು. ಮುಕ್ರಂಪಾಡಿ ಮಸೀದಿ ಅಧ್ಯಕ್ಷ ಶರೀಫ್ ಮುಕ್ರಂಪಾಡಿ ವಿಖಾಯ ಕೊರೋನಾ ವಾರಿಯರ್ಸ್ ಗಳಿಗೆ ಗೌರವ ಸಮರ್ಪಣೆ ನಡೆಸಿದರು.

      ವಲಯ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಜಾಬಿರ್ ಫೈಝಿ ಬನಾರಿ ಧನ್ಯವಾದ ಗೈದರು. ಕೋಶಾಧಿಕಾರಿ ಅಶ್ರಫ್ ಮುಕ್ವೆ ಮತ್ತು ಸಂಘಟನಾ ಕಾರ್ಯದರ್ಶಿ ನಝೀರ್ ಅರ್ಶದಿ ಅಜ್ಜಿಕಟ್ಟೆ ಕಾರ್ಯಕ್ರಮಗಳನ್ನು ನಿರೂಪಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ