ಪುತ್ತೂರಿಗೆ ಬಂದ ಪ್ಯಾರೇಜಾನ್

ಪುತ್ತೂರಿಗೆ ಬಂದ ಪ್ಯಾರೇಜಾನ್

ಪುತ್ತೂರು: ಕಾಂಗ್ರೆಸ್ ಸೇವಾದಳದ ರಾಜ್ಯಾಧ್ಯಕ್ಷೆ ಶ್ರೀಮತಿ ಪ್ಯಾರೆ ಜಾನ್ ರವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷ ಸಂಘಟನೆಯ ಬಗ್ಗೆ ಮುಖಂಡರಲ್ಲಿ ಚರ್ಚೆ ನಡೆಸಿದರು.

      ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಜಿಲ್ಲಾ ಸೇವಾದಳದ ಅಧ್ಯಕ್ಷ ಸುರೇಶ ಶೆಟ್ಟಿ ಹಾಗೂ ದ.ಕ. ಜಿಲ್ಲಾ ಪರಿಷತ್ ನ ಮಾಜಿ ಅಧ್ಯಕ್ಷರಾದ ಸದಾನಂದ ಪೂಂಜಾರವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರಿದ್ದಾಂಜಲಿ ಅರ್ಪಿಸಲಾಯಿತು.
      ಕೆ.ಪಿ.ಸಿ.ಸಿ ಸದಸ್ಯರಾದ ಎಂ. ಬಿ. ವಿಶ್ವನಾಥ್ ರೈ, ಜಿಲ್ಲಾ ಕಾಂಗ್ರೆಸ್ ನ ಪ್ರದಾನ ಕಾರ್ಯದರ್ಶಿ ಹಾಗು ನಗರಸಭೆಯ ಮಾಜಿ ವಿಪಕ್ಷನಾಯಕ ಎಚ್. ಮಹಮ್ಮದ್ ಅಲಿ,  ರಾಜೀವ್ ಗಾಂಧಿ ಪಂಚಾಯತ್ ರಾಜ್ ನ ಮುಖ್ಯಸ್ಥ ಚಿಲ್ಮೆತಾರ್  ಸಂತೋಷ್ ಕುಮಾರ್ ರೈ, ಜಿಲ್ಲಾ ಕಾಗ್ರೇಸ್ ಕಾರ್ಯದರ್ಶಿ ಯಾಕೂಬ್ ದರ್ಬೆ, ನಗರ ಕಾಂಗ್ರೆಸ್ ಪದಾಧಿಕಾರಿಗಳಾದ ಸಿರಿಲ್ ರೋಡ್ರಿಗಸ್, ಶರೋನ್ ಸಿಕ್ವೇರ, ಅಮರನಾಥ್ ಗೌಡ, ಕೇಶವ ಪಡೀಲ್,  ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ  ಶ್ರೀಮತಿ  ಸನಮ್ ನಜಿರ್, ಶ್ರೀಮತಿ ಪ್ರತೀಕ ಪೂರ್ಣೇಶ್ ಮೊದಲಾದವರು ಉಪಸ್ಥಿತರಿದ್ದರು.
      ಪುತ್ತೂರು ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜ ಸ್ವಾಗತಿಸಿ, ಜಿಲ್ಲಾ ಸೇವಾದಳ ದ ಸದಸ್ಯೆ ಶ್ರೀಮತಿ ರೇಖಾ ಯಶೋಧರ ರವರು ವಂದಿಸಿದರು

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ