ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ ಇನ್ನಿಲ್ಲ
ಮಲಪ್ಪುರಂ: ಸಮಸ್ತ ಉಪಾಧ್ಯಕ್ಷರೂ, ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷರೂ, ಸುನ್ನಿ ಮುಸ್ಲಿಂ ಸಮೂಹದ ಅಗ್ರಗಣ್ಯ ನಾಯಕ ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ (74) ಇಂದು ಮಧ್ಯಾಹ್ನ 12.45ರ ಸುಮಾರಿಗೆ ನಿಧನರಾಗಿದ್ದಾರೆ.
ಅನಾರೋಗ್ಯ ಪೀಡಿತರಾಗಿ ಅಂಗಮಾಲಿ ಖಾಸಗಿ ಆಸ್ಪತ್ರೆಯಲ್ಲಿದ್ದ ಹೈದರಲಿ ತಂಙಳ್ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ತಂಙಳ್‌ರವರ ನಿಧನದೊಂದಿಗೆ ಮುಸ್ಲಿಂ ಸಮುದಾಯ ಅಪಾರ ದುಖದಲ್ಲಿ ಮುಳುಗಿದೆ.
ನೂರಾರು ಮೊಹಲ್ಲಾಗಳ ಖಾಝಿಯಾಗಿರುವ ತಂಙಳ್, ಹಲವಾರು ಯತೀಂ ಖಾನ, ಧಾರ್ಮಿಕ ಹಾಗೂ ಸಮನ್ವಯ ವಿದ್ಯಾ ಕೇಂದ್ರಗಳ ಮುಖ್ಯಸ್ಥರೂ ಆಗಿದ್ದಾರೆ. 18 ವರ್ಷಗಳ ಕಾಲ ಮಲಪ್ಪುರಂ ಜಿಲ್ಲಾ ಮುಸ್ಲಿಂ ಲೀಗಿನ ಅಧ್ಯಕ್ಷರಾಗಿದ್ದ ಹೈದರಲಿ ತಂಙಳ್ ಹೋದರ ಪಾಣಕ್ಕಾಡ್ ಮುಹಮ್ಮದಲಿ ಶಿಹಾಬ್ ತಂಙಳ್‌ರವರ ನಿಧನ ನಂತರ ಕೇರಳ ರಾಜ್ಯ ಮುಸ್ಲಿಂ ಲೀಗಿನ ಅಧ್ಯಕ್ಷರಾಗಿ ಕಳೆದ ಹನ್ನೆರಡು ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಚಂದ್ರಿಕಾ ಮಲೆಯಾಳಂ ದೈನಿಕದ ನಿರ್ದೇಶಕರೂ ಆಗಿದ್ದಾರೆ.
ತಂಙಳ್‌ರವರ ನಿಧನಕ್ಕೆ ಎಲ್ಲಾ ಕಡೆಯಿಂದಲೂ ಸಂತಾಪ ಹರಿದು ಬರುತ್ತಿದೆ. ಎಸ್‌ಕೆಎಸ್‌ಎಸ್‌ಎಫ್ ದ.ಕ.ಜಿಲ್ಲಾ (ವೆಸ್ಟ್) ಆಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್, ಈಸ್ಟ್ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ, ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ ಸಂತಾಪ ಸೂಚಿಸಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ