ಪಾಂಡವರಕಲ್ಲು: ವಿಷಪೂರಿತ ಹಾವು ಕಚ್ಚಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮರಣ

ಪಾಂಡವರಕಲ್ಲು: ವಿಷಪೂರಿತ ಹಾವು ಕಚ್ಚಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮರಣ

ಬಂಟ್ವಾಳ: ವಿಷಕಾರಿ ಹಾವು ಕಚ್ಚಿದ ಪರಿಣಾಮವಾಗಿ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ಎಂಬಲ್ಲಿ ಸಂಭವಿಸಿದೆ.

      ಬಡಗಕಜೆಕಾರು ಗ್ರಾಮದ ಪಾಂಡವರ ಕಲ್ಲು ನಿವಾಸಿ ಉಸ್ಮಾನ್ ಅವರ ಪುತ್ರ ಆಸಿದ್ ( 26) ಎಂಬವರು ಮೃತಪಟ್ಟ  ವ್ಯಕ್ತಿ.

      ಆಸಿದ್ ಅವರು ಕೂಲಿ ಕಾರ್ಮಿಕನಾಗಿದ್ದು, ವಾಮದಪದವು ಬಳಿ ಮಂಗಳವಾರ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಾವಿನ ಕಡಿತಕ್ಕೊಳಗಾಗಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಆಸಿದ್ ಉಸ್ಮಾನ್ ಅವರ ಮೂವರು ಪುತ್ರರಲ್ಲಿ ಕೊನೆಯವರಾಗಿದ್ದು, ಅವಿವಾಹಿತರಾಗಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ