ಪೆಟ್ರೋಲ್ ದರ ಏರಿಕೆ: ಕಾಂಗ್ರೆಸ್ ನಿಂದ ಪೆಟ್ರೋಲ್ -100 ನಾಟೌಟ್ ಪ್ರತಿಭಟನೆ

ಪೆಟ್ರೋಲ್ ದರ ಏರಿಕೆ:  ಕಾಂಗ್ರೆಸ್ ನಿಂದ ಪೆಟ್ರೋಲ್ -100 ನಾಟೌಟ್ ಪ್ರತಿಭಟನೆ

ಬೆಂಗಳೂರು: ಕೇಂದ್ರ ಸರಕಾರ ನಿರಂತರವಾಗಿ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

      ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಗರದ ಶಿವಾನಂದ ವೃತ್ತದ ಬಳಿ ರೆಡ್ಡಿ ಪೆಟ್ರೋಲ್ ಬಂಕ್ ಸಮೀಪ ಕೇಂದ್ರ ಸರ್ಕಾರದ ವಿರುದ್ಧ, '100 ನಾಟೌಟ್, ಪೆಟ್ರೋಲ್ ಪಿಕ್‌ಪಾಕೆಟ್' ಪ್ರತಿಭಟನೆ ನಡೆಯಿತು.

      ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ದಿನೇಶ್ ಗುಂಡೂರಾವ್ ಮತ್ತಿತರರು ಪಾಲ್ಗೊಂಡರು. ಈ ಪ್ರತಿಭಟನೆಯು ಇಂದಿನಿಂದ ಹಂತ-ಹಂತವಾಗಿ ರಾಜ್ಯಾದ್ಯಂತ ಐದು ದಿನಗಳ ಕಾಲ ನಡೆಯಲಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ