ಅಪ್ಘಾನಿಸ್ತಾನ: ಉಕ್ರೇನ್‌ ವಿಮಾನ ಅಪಹರಣ

ಅಪ್ಘಾನಿಸ್ತಾನ: ಉಕ್ರೇನ್‌ ವಿಮಾನ ಅಪಹರಣ

ಮಾಸ್ಕೊ: ಉಕ್ರೇನ್ ಜನರನ್ನು ಕರೆದೊಯ್ಯಲು ಅಫ್ಗಾನಿಸ್ತಾನಕ್ಕೆ ತೆರಳಿದ್ದ ವಿಮಾನವೊಂದನ್ನು ಅಪಹರಣ ಮಾಡಲಾಗಿದೆ.

      ಅಪರಿಚಿತರು ವಿಮಾನವನ್ನು ಅಪಹರಿಸಿದ್ದು, ಇರಾನ್‌ನತ್ತ ಸಂಚರಿಸುವಂತೆ ಮಾಡಿದ್ದಾರೆ. ಈ ಕುರಿತು ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್‌ಗ್ನೆನಿ ಯೆನಿನ್ ಮಾಹಿತಿ ನೀಡಿದ್ದಾರೆ ಎಂದು ರಷ್ಯಾದ ಟಿಎಎಸ್‌ಎಸ್‌ ಸುದ್ದಿಸಂಸ್ಥೆ ವರದಿ ಮಾಡಿರುವುದಾಗಿ ‘ಎಎನ್‌ಐ’ ಟ್ವೀಟ್ ಮಾಡಿದೆ.

     ಇರಾನ್‌ ವಾಯುಯಾನ ವಕ್ತಾರರು ಉಕ್ರೇನಿಯನ್ ವಿಮಾನವನ್ನು ಅಪಹರಿಸಿ ಇರಾನ್‌ಗೆ ಹಾರಿದೆ ಎಂಬ ವರದಿಗಳನ್ನು ತಿರಸ್ಕರಿಸಿದ್ದಾರೆ. ಉಕ್ರೇನಿಯನ್ ವಿಮಾನವು ನಿನ್ನೆ ರಾತ್ರಿ ಮಶ್ಹಾದ್‌ನಲ್ಲಿ ಇಂಧನ ತುಂಬುವುದಕ್ಕಾಗಿ ನಿಲ್ಲಿಸಿ, ನಂತರ ಉಕ್ರೇನ್‌ ಕಡೆಗೆ ಹೊರಟಿದೆ ಎಂದು ಹೇಳಿದ್ದಾರೆ. "ಇದು ಈಗ ಕೀವ್‌ನಲ್ಲಿ ಇಳಿದಿದೆ" ಎಂದು ವರದಿಗಳು ಉಲ್ಲೇಖಿಸಿವೆ.

      ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ