ಪಾಕಿಸ್ತಾನಿ‌ ಪಾರಿವಾಳದ ವಿರುದ್ದ ಎಫ್ಐಆರ್ ದಾಖಲಿಸಲು ಕೋರಿಕೆ

ಪಾಕಿಸ್ತಾನಿ‌ ಪಾರಿವಾಳದ ವಿರುದ್ದ ಎಫ್ಐಆರ್ ದಾಖಲಿಸಲು ಕೋರಿಕೆ
republicday728
republicday468
republicday234

ಅಮೃತಸರಪಾರಿವಾಳದ ವಿರುದ್ಧ ದೂರು ದಾಖಲಿಸಲು ಅನುಮತಿ ಕೋರಿದ ವಿಚಿತ್ರ ಪ್ರಸಂಗವೊಂದು ವರದಿಯಾಗಿದೆ. ಪಾಕಿಸ್ತಾನದಿಂದ ಅಕ್ರಮವಾಗಿ ಭಾರತದ ಗಡಿಯೊಳಗೆ ನುಗ್ಗಿರುವ ಪಾರಿವಾಳದ ವಿರುದ್ಧ ಎಫ್‌ಐಆರ್ ದಾಖಲಿಸಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅನುಮತಿ ಕೋರಿದೆ.

      ಈ ಸಂಬಂಧ ಪಂಜಾಬ್ ಪೊಲೀಸರು ಕಾನೂನು ತಜ್ಞರ ಅಭಿಪ್ರಾಯ ಕೋರಿದ್ದಾರೆ.‌ ಕಳೆದ ಶನಿವಾರ ಇಲ್ಲಿನ ರೊರಾವಾಲಾ ಪೋಸ್ಟ್‌ನಲ್ಲಿರುವ ಗಡಿಭದ್ರತಾ ಪಡೆಯ ಸೈನಿಕನ ಭುಜದ ಮೇಲೆ ಹಾರಿ ಬಂದ ಪಾರಿವಾಳವೊಂದು ಕೂತಿತ್ತು. ಗಡಿಯುದ್ದಕ್ಕೂ ಹಾರಾಟ ನಡೆಸಿದ್ದ ಈ ಪಾರಿವಾಳದ ಕಾಲಿಗೆ ಸಂಪರ್ಕ ಸಂಖ್ಯೆ ಹೊಂದಿದ್ದ ಸಣ್ಣದೊಂದು ಕಾಗದದ ತುಂಡನ್ನೂ ಸುತ್ತಲಾಗಿತ್ತು ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾರಿವಾಳವನ್ನು ಪೊಲೀಸರಿಗೆ ಒಪ್ಪಿಸಿರುವ ಬಿಎಸ್‌ಎಫ್ ಸಿಬ್ಬಂದಿ ಅದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲಿಖಿತವಾಗಿ ಕೋರಿದ್ದಾರೆ. ಆದರೆ, ಪಾರಿವಾಳ ಪಕ್ಷಿ ಆಗಿರುವುದರಿಂದ ಅದರ ವಿರುದ್ಧ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತದೆ. ಆದರೆ, ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯವನ್ನು ಕೋರಲಾಗಿದೆ. ಪಾರಿವಾಳದ ಕಾಲಿಗೆ ಕಟ್ಟಲಾಗಿದ್ದ ಕಾಗದ ತುಂಡಿನ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಧ್ರುವ ದಹಿಯಾ ತಿಳಿಸಿದ್ದಾರೆ.

      ಗಡಿಪ್ರದೇಶಗಳಲ್ಲಿ ಗೂಢಚರ್ಯೆ ಕಾರ್ಯಗಳಿಗಾಗಿ ಪಾರಿವಾಳವನ್ನು ಬಳಸಲಾಗುತ್ತದೆ. ಕೊರಿಯರ್ ಮಾದರಿಯಲ್ಲಿ ಪಾರಿವಾಳಗಳನ್ನು ಬಳಸಿ ಅವುಗಳ ಮೂಲಕ ಗುಪ್ತಸಂದೇಶಗಳನ್ನೂ ಕಳುಹಿಸಲಾಗುತ್ತದೆ. ಕೆಲವೊಮ್ಮೆ ಪಾರಿವಾಳಗಳ ಗುರುತಿಗಾಗಿಯೂ ಅದನ್ನು ಸಾಕುವವರು ಅವುಗಳ ಕಾಲಿಗೆ ಟ್ಯಾಗ್ ಕಟ್ಟುತ್ತಾರೆ. ಹಾಗೂ ಸಂಭವಿಸಿರಬಹುದು ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಸದ್ಯಕ್ಕಂತೂ ಪಾರಿವಾಳವು ಖಾಂಗಾರದ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿದೆ.

 

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ