ನಾಳೆಯಿಂದ ಸಮಸ್ತ ಪಬ್ಲಿಕ್ ಪರೀಕ್ಷೆ: ಯಾರಿಗೆಲ್ಲ?

ಮಂಗಳೂರು: ಪ್ರತಿಷ್ಠಿತ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡಿನ ಅಧೀನದಲ್ಲಿ ನಡೆಯುವ ಮದ್ರಸದ ಐದು, ಏಳು, ಹತ್ತು ಮತ್ತು ಹನ್ನೆರಡನೇ ತರಗತಿಗಳ ಪಬ್ಲಿಕ್ ಪರೀಕ್ಷೆಗಳು ನಾಳೆಯಿಂದ (ಎಪ್ರಿಲ್ 3) ಆರಂಭವಾಗಲಿದೆ ಎಂದು ವಿಭಾಗೀಯ ಪರೀಕ್ಷಾ ಅಧೀಕ್ಷಕರಾದ ಮುಫತ್ತಿಸ್ ಉಮರ್ ದಾರಿಮಿ ಸಾಲ್ಮರ ತಿಳಿಸಿದರು.
ಕೋವಿಡ್-19ರ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ದೇಶದಾದ್ಯಂತ ಈ ವರ್ಷ 7,219 ಕೇಂದ್ರಗಳಲ್ಲಿ ಸಮಸ್ತ ಮದ್ರಸಗಳ ಪಬ್ಲಿಕ್ ಪರೀಕ್ಷೆ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಡಿವಿಷನ್ ಗಳಲ್ಲಾಗಿ 397 ಕೇಂದ್ರಗಳು ಪರೀಕ್ಷೆಗೆ ಸಜ್ಜು ಗೊಂಡಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 8049 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಣೆ ನೀಡಿದರು
ಮಂಗಳೂರು ಡಿವಿಷನ್ ವ್ಯಾಪ್ತಿಯ ಪರೀಕ್ಷಾ ಮೇಲ್ವಿಚಾರಕರಿಗೆ ಮಾಹಿತಿ ಶಿಬಿರ ಮತ್ತು ಪರೀಕ್ಷಾ ಪರಿಕರಗಳ ವಿತರಣೆ ಕಾರ್ಯವು ಅಝ್ಹರಿಯ ಕೇಂದ್ರ ಮದರಸದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಸಮಿತಿ ಅಧ್ಯಕ್ಷರಾದ ಐ. ಮೊಯಿದಿನಬ್ಬ ಹಾಜಿಯವರ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಜಂಇಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ ಪರಿಕರಗಳ ವಿತರಣೆಗೆ ಚಾಲನೆ ನೀಡಿದರು.
ಮಂಗಳೂರು ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ರಿಯಾಜ್ ಹಾಜಿ ಬಂದರ್, ಅಡ್ಯಾರ್ ಕಣ್ಣೂರ್ ರೇಂಜ್ ಮದ್ರಸಾ ಮೆನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಹಮೀದ್ ಟ್ಯಾಲೆಂಟ್ ಮೆನೇಜ್ಮೆಂಟ್ ಪ್ರತಿನಿಧಿಗಳಾಗಿ ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಮಂಗಳೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಸಲೀಂ ಅರ್ಷದಿ ದೆಮ್ಮಲೆ, ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿಯಾದ ಇರ್ಫಾನ್ ಮುಸ್ಲಿಯಾರ್ ಕಲಾಯಿ, ಅಡ್ಯಾರ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿಯಾದ ಮುಹಮ್ಮದ್ ಅಶ್ರಫ್ ಅಝ್ಹರಿ, ಅಝ್ಹರಿಯ್ಯಾ ಕೇಂದ್ರ ಮದರಸದ ಪ್ರಧಾನ ಅಧ್ಯಾಪಕರಾದ ಬಶೀರ್ ಮದನಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಪಟ್ಟೋರಿ ಅಬ್ದುಲ್ ಅಝೀಜ್ ಫೈಝಿ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಮಂಗಳೂರು ರೇಂಜ್ ಪರೀಕ್ಷಾ ಬೋರ್ಡ್ ಚೇರ್ಮನ್ ಮುಹಮ್ಮದ್ ಅಲಿ ಫೈಝಿ ಸ್ವಾಗತಿಸಿ ಮುಸ್ತಫಾ ಫೈಝಿ ಕಿನ್ಯಾ ವಂದಿಸಿದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ