ನಾಳೆ ಮಿತ್ತಬೈಲು ಉಸ್ತಾದರ ಅನುಸ್ಮರಣೆ ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಸಮಿತಿ ಆತಿಥ್ಯ

ಮಂಗಳೂರು: ಪಂಡಿತ ಶಿರೋಮಣಿ, ಸಮಸ್ತದ ಉಪಾಧ್ಯಕ್ಷರಾಗಿದ್ದ ಮಿತ್ತಬೈಲು ಜಬ್ಬಾರ್ ಉಸ್ತಾದ್ ರವರ ಎರಡನೇ ವರ್ಷದ ಅನುಸ್ಮರಣೆ ಡಿಸೆಂಬರ್ 23ರಂದು ಕಾವಲ್ ಕಟ್ಟೆ ಎನ್.ಸಿ.ರೋಡಿನಲ್ಲಿರುವ ಶಂಸುಲ್ ಉಲಮಾ ವೇದಿಕೆಯಲ್ಲಿ ಜರುಗಲಿದೆ ಎಂದು ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 9.00 ಗಂಟೆಗೆ ಆರಂಭವಾಗುವ ಅನುಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಅಧ್ಯಕ್ಷರಾದ ಸಯ್ಯದ್ ಅಮೀರ್ ತಂಙಳ್ ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಕೆ.ಎಸ್.ಎಸ್.ಎಫ್. ಕೇಂದ್ರ ಸಮಿತಿ ಕಾರ್ಯದರ್ಶಿ ಬಹುಮಾನ್ಯರಾದ ಖಾಸಿಂ ದಾರಿಮಿ ನೆರವೇರಿಸಲಿದ್ದಾರೆ. ಮಿತ್ತಬೈಲು ಇರ್ಷಾದ್ ದಾರಿಮಿ ದುಆ ನೆರವೇರಿಸಲಿರುವ ಈ ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಎಸ್.ಎಫ್. ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅನೀಸ್ ಕೌಸರಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಖ್ಯಾತ ವಾಗ್ಮಿ ಎಸ್.ವೈ.ಎಸ್. ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಸ್ಸಮದ್ ಪೂಕೊಟ್ಟೂರ್ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಬೆಳ್ತಂಗಡಿ ವಲಯಾಧ್ಯಕ್ಷರಾದ ನಝೀರ್ ಆಝ್ಹರಿ ವಂದನಾರ್ಪಣೆಗೈಯಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಇಸ್ಮಾಯಿಲ್ ಯಮಾನಿ ವಿನಂತಿಸಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಉಸ್ತಾದರ ಹೆಸರಿನಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ.
ನೇರ ಪ್ರಸಾರ ಅಲ್-ಕೌಸರ್ ಮೀಡಿಯಾದಲ್ಲಿ
ಲಿಂಕ್: https://youtu.be/oBW9wWU4_KE
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ