ನಳಿನ್‌ ಕುಮಾರ್‌ ಆದೇಶ ಪಾಲಿಸಿದ ಸಿಎಂ; ದಕ್ಷಿಣ ಕನ್ನಡ ಕಡೆಗಣನೆ: ಯು.ಟಿ ಖಾದರ್‌ ಆರೋಪ

ನಳಿನ್‌ ಕುಮಾರ್‌ ಆದೇಶ ಪಾಲಿಸಿದ ಸಿಎಂ; ದಕ್ಷಿಣ ಕನ್ನಡ ಕಡೆಗಣನೆ: ಯು.ಟಿ ಖಾದರ್‌ ಆರೋಪ

ಮಂಗಳೂರು: ‘ಅಭಿವೃದ್ಧಿ ವಿಷಯ ಮಾತನಾಡಬೇಡಿ, ಲವ್ ಜಿಹಾದ್‌ ತಡೆಯುವುದಕ್ಕಷ್ಟೇ ಗಮನ ಕೊಡಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಅವರು ಕಾರ್ಯಕರ್ತರಿಗೆ ನೀಡಿರುವ ಕರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಷರಶಃ ಪಾಲಿಸಿದಂತಿದೆ. ಇದರಿಂದಾಗಿಯೇ ಅವರು ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಏನೇನೂ ಕೊಡುಗೆ ಕೊಟ್ಟಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ದೂರಿದರು.

      ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 12 ಮಂದಿ ಬಿಜೆಪಿ ಶಾಸಕರು ಇದ್ದರೂ ಅನುದಾನವನ್ನು ಬಿಡುಗಡೆ ಮಾಡಿಸಲು ಸಾಧ್ಯವಾಗಲಿಲ್ಲ ಎಂದರು.

      ಕಡಲ್ಕೊರೆತ ತಡೆಯಲು ಮತ್ತು ಮೀನುಗಾರರ ಅಭಿವೃದ್ಧಿಗಾಗಿ ಬಜೆಟ್‌ ನಲ್ಲಿ ಯಾವುದೇ ಪ್ರಸ್ತಾವ ಇಲ್ಲ. ದಕ್ಕೆಯಲ್ಲಿ ಮೀನು ಗಾರಿಕಾ ಬೋಟ್‌ಗಳು ಹೂತು ಹೋಗು ವುದನ್ನು ತಡೆಯುವುದಕ್ಕಾಗಿ ಹೂಳು ತೆಗೆಯುವ ಭರವಸೆಯೂ ಹುಸಿಯಾಗಿದೆ ಎಂದವರು ಹೇಳಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ