ನೂರುಲ್ ಹುದಾ ಯುಎಇ ಸಮಿತಿಯ  5 ನೇ ವಾರ್ಷಿಕ: ಅಧ್ಯಕ್ಷರಾಗಿ ಷರೀಫ್ ಬಿಕೆ ಪುನರಾಯ್ಕೆ

ನೂರುಲ್ ಹುದಾ ಯುಎಇ ಸಮಿತಿಯ  5 ನೇ ವಾರ್ಷಿಕ: ಅಧ್ಯಕ್ಷರಾಗಿ ಷರೀಫ್ ಬಿಕೆ ಪುನರಾಯ್ಕೆ

ದುಬೈ: ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ನೂತನ ಅಧ್ಯಕ್ಷರಾಗಿ ಷರೀಫ್ ಬಿಕೆ ಕಾವು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ಪುನರಾಯ್ಕೆಯಾಗಿದ್ದಾರೆ.

      ಯುಎಇ ರಾಷ್ಟ್ರೀಯ ಸಮಿತಿಯ 5ನೇ ವಾರ್ಷಿಕ ಮಹಾಸಭೆ ಹಾಗೂ ಮೌಲಿದ್ ಮಜ್ಲಿಸ್ ಕಾರ್ಯಕ್ರಮವು ಇತ್ತೀಚೆಗೆ ದುಬೈ ದೇರಾ ಓರಿಯೆಂಟಲ್ ಪ್ಯಾಲೆಸ್ ಹೋಟೆಲ್ ಸಭಾಂಗಣದಲ್ಲಿ ಜರುಗಿತು. ಸಮಿತಿಯ ಅಧ್ಯಕ್ಷರಾದ ಜನಾಬ್ ಶೆರೀಫ್ ಕಾವು ಸಭೆಯ ಅಧ್ಯಕ್ಷತೆ ವಹಿಸಿದ್ದರು.

      ನೂರುಲ್ ಹುದಾ ದುಬೈ ಸಮಿತಿಯ ಗೌರವಾಧ್ಯಕ್ಷರಾದ ಸುಲೈಮಾನ್ ಮೌಲವಿ ಕಲ್ಲೆಗರವರ ನೇತೃತ್ವದಲ್ಲಿ ಮೌಲಿದ್ ಮತ್ತು ದುವಾ ಮಜ್ಲಿಸ್‌ ನಡೆಯಿತು. ಬಳಿಕ ಸಮಿತಿಯ ವಾರ್ಷಿಕ ಮಹಾಸಭೆಯನ್ನು ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷ ರಾದ ಸಯ್ಯದ್ ಅಸ್ಕರ್ ಅಲಿ ತಂಙಳ್ ಉದ್ಘಾಟಿಸಿದರು. ಕಾರ್ಯದರ್ಶಿ ಅಝೀಝ್ ಸೋಂಪಾಡಿ ನೆರೆದವರನ್ನು ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಅಶ್ರಫ್ ಪರ್ಲಡ್ಕ ಅವರು ವಾರ್ಷಿಕ ವರದಿ ವಾಚಿಸಿದರು, ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್ ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.

      ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಶೆರೀಫ್ ಕಾವು ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ, ಸಹಕರಿಸಿದ ಎಲ್ಲರಿಗೂ ಧನ್ಯವಾದಗೈದು ಹಾಲಿ ಸಮಿತಿ ಯನ್ನು ಬರ್ಖಾಸ್ತುಗೊಳಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ರಾಷ್ಟ್ರೀಯ ಸಮಿತಿಯ ಗೌರವ ಸಲಹೆಗಾರಾದ ಜನಾಬ್ ಅಶ್ರಫ್ ಶಾ ಮಾಂತೂರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

      ಕಾರ್ಯಕ್ರಮದಲ್ಲಿ ಅನಿವಾಸಿ ಉದ್ಯಮಿ, ಸಾಮಾಜಿಕ ನೇತಾರರಾದ ಜನಾಬ್ ಹಾರಿಸ್ ದರ್ಬೆ ಅವರನ್ನು ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು

.ನೂತನ ಸಮಿತಿಯ ಪದಾಧಿಕಾರಿಗಳು: ರಕ್ಷಾಧಿಕಾರಿ: ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ, ಮುಖ್ಯ ಪೋಷಕರಾಗಿ: ಯೂಸುಫ್ ಈಶ್ವರಮಂಗಲ, ಗೌರವಾಧ್ಯಕ್ಷರಾಗಿ ಸಯ್ಯದ್ ಅಸ್ಕರ್ ಅಲಿ ತಂಙಳ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಅದ್ಯಕ್ಷರಾಗಿ ಶೆರೀಫ್ ಕಾವು, ಕಾರ್ಯಾಧ್ಯಕ್ಷರಾಗಿ ಅಶ್ರಫ್ ಪರ್ಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಕೌಡಿಚ್ಚಾರ್, ಕೋಶಾಧಿಕಾರಿಯಾಗಿ ಅಶ್ರಫ್ ಯಾಕೂತ್ ನೆಕ್ಕರೆ ಇವರುಗಳನ್ನು ಆಯ್ಕೆ ಮಾಡಲಾಯಿತು.

      ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜನಾಬ್ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ, ದಾರುನ್ನೂರು ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಶಂಸುದ್ದೀನ್ ಸೂರಲ್ಪಾಡಿ, ಶಂಸುಲ್ ಉಲೆಮಾ ಅರೆಬಿಕ್ ಕಾಲೇಜು ತೋಡಾರು ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಖಾದರ್ ಬೈತಡ್ಕ, ನೂರುಲ್ ಹುದಾ ದುಬೈ ಸಮಿತಿ ಗೌರವಾಧ್ಯಕ್ಷರಾದ ಸುಲೈಮಾನ್ ಮೌಲವಿ ಕಲ್ಲೆಗ, ಅಧ್ಯಕ್ಷರಾದ ಜನಾಬ್ ಅನ್ವರ್ ಮಾಣಿಲ , ನೂರ್ ಮುಹಮ್ಮದ್ ನೀರ್ಕಜೆ ಮೊದಲಾದವರು ಮಾತನಾಡಿ ನೂತನ ಸಮಿತಿಯ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

      ಈ ಸಂದರ್ಭದಲ್ಲಿ ನೂರುಲ್ ಹುದಾ ಸ್ಥಾಪನೆಯ ಉನ್ನತಿಗೆ ಸಹಾಯ ಸಹಕಾರವನ್ನು ನೀಡುತ್ತಾ ಬಂದಿರುವ ಹಾಜಿ ಹಾರಿಸ್ ದರ್ಬೆಯವರನ್ನು ಸನ್ಮಾನಿಸಲಾಯಿತು.

      ನೂರುಲ್ ಹುದಾ ದುಬೈ ಸಮಿತಿ ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ತಿಂಗಳಾಡಿ ಅವರು ಸಹಕರಿಸಿದ ಎಲ್ಲರಿಗೂ ಧನ್ಯವಾದಗೈದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ