ನರಿಕೊಂಬು ಗ್ರಾಮ ಪಂಚಾಯತ್:‌ ಮುಹಮ್ಮದ್‌ ರಿಯಾಝ್‌ ಭರ್ಜರಿ ಗೆಲುವು

ನರಿಕೊಂಬು ಗ್ರಾಮ ಪಂಚಾಯತ್:‌ ಮುಹಮ್ಮದ್‌ ರಿಯಾಝ್‌ ಭರ್ಜರಿ ಗೆಲುವು

ಬಂಟ್ವಾಳ: ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿಯ  ನೆಹರುನಗರ ಐದನೇ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ರಿಯಾಝ್‌ ಪ್ರಥಮ ಪ್ರಯತ್ನದಲ್ಲೇ ಭರ್ಜರಿ ಗೆಲುವು ಪಡೆದಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಣೇಶ್ ವಿರುದ್ಧ ಅವರು ಈ ಜಯವನ್ನು ದಾಖಲಿಸಿದ್ದಾರೆ. 
      ಈ ಕುರಿತು ನಂದನ ಟೈಮ್ಸ್ ಜೊತೆ ಮಾತಾಡಿದ ಮಹಮ್ಮದ್ ರಿಯಾಜ್ ಕ್ಷೇತ್ರದ ಜನರಿಗೆ ಮಾಡಿದ ಸೇವೆಯನ್ನು ಜನರು ಗುರುತಿಸಿದ್ದಾರೆ. ನಾನು ಸದಾ ನನ್ನ ಕ್ಷೇತ್ರದ ಜನರಿಗೆ ಕೃತಜ್ಞನಾಗಿರುತ್ತೇನೆ. ಜನರ ಸೇವೆ ಸಲ್ಲಿಸುವಲ್ಲಿ ನನ್ನ ಮೇಲೆ ಇನ್ನಷ್ಟು ಜವಾಬ್ದಾರಿಗಳನ್ನು ಹೇರಿದಂತಾಗಿದೆ. ಅದನ್ನು ನಿಭಾಯಿಸಲು ನಾನು ಖಂಡಿತ ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಬಂಟ್ವಾಳ ಯೂತ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ರಿಯಾಝ್ ಒಟ್ಟು  433 ಮತಗಳನ್ನು ರಿಯಾಜ್ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಗಣೇಶ್‌ ಕೇವಲ 28 ಮತಗಳನ್ನು ಪಡೆದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ