ನ್ಯಾ ಯ ಸಿಗದ 600 ದಿನಗಳು: ಸಿಎಎ ವಿರೋಧಿ ಹೋರಾಟಕ್ಕಾಗಿ ಬಂಧಿಸಲ್ಪಟ್ಟ ಯುವ ಹೋರಾಟಗಾರ ಮೀರಾನ್ ಹೈದರ್

ನ್ಯಾ ಯ ಸಿಗದ 600 ದಿನಗಳು: ಸಿಎಎ ವಿರೋಧಿ ಹೋರಾಟಕ್ಕಾಗಿ ಬಂಧಿಸಲ್ಪಟ್ಟ  ಯುವ ಹೋರಾಟಗಾರ ಮೀರಾನ್ ಹೈದರ್

ನವದೆಹಲಿ: ನಿಮಗೆ ಮೀರಾನ್ ಹೈದರ್ ಎಂಬ ಹೆಸರಿನ ನೆನಪಿದೆಯೇ? ನಮ್ಮ ನೆನಪಿನಂಗಳದಿಂದ ಮಾಯಲ್ಪಟ್ಟ ಸಾವಿರಾರು ಯುವ ಹೋರಾಟಗಾರರಲ್ಲಿ ಇವರೂ ಒಬ್ಬರು. ಸಿಎಎ ವಿರೋಧಿ ಹೋರಾಟಕ್ಕಾಗಿ ಮೀರಾನ್ ಹೈದರ್ ಎಂಬ ಯುವ ಹೋರಾಟಗಾರ ಜೈಲು ಪಾಲಾಗಿ ಒಂದೂವರೆ ವರ್ಷಗಳೇ ಕಳೆಯಿತು. ಬಿಡುಗಡೆ ಮಾತ್ರ ಕನಸಾಗಿಯೇ ಮುಂದುವರಿಯುತ್ತಿದೆ.

       ಇವರು 2020ರ ಎಪ್ರಿಲ್‌ನಲ್ಲಿ ಬಂಧಿಸಲ್ಪಟ್ಟ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ. ನರಮೇಧದ ಆರೋಪದ ಮೇಲೆ ದೆಹಲಿ ಪೊಲೀಸರು ಮೀರಾನ್ ಹೈದರ್ ಅವರನ್ನು ಬಂಧಿಸಿದ್ದಾರೆ.‌

       ಮೀರಾನ್ ಹೈದರ್ ಬಿಡುಗಡೆಗಾಗಿ ಸಾಮಾಜಿಕ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ.  ಎಸ್‌ಐಓ, ಎಐಎಸ್‌ಎ ಮೊದಲಾದ ಸಂಘಟನೆಗಳು ಯುನೈಟೆಡ್ ಎಗೇನ್ಸ್ಟ್ ಹೇಟ್ ಎಂಬ ಆಕ್ಟಿವಿಸ್ಟ್ ಗ್ರೂಪ್ ತಯಾರಿಸಿ ಅಭಿಯಾನವನ್ನು ಆರಂಭಿಸಿದೆ.

600 ದಿನಗಳ ಅಕ್ರಮ ಬಂಧನ

600 ದಿನಗಳ ಅನ್ಯಾಯಎಂಬಿತ್ಯಾದಿ ಹೆಸರಿನಲ್ಲಿ ಅಭಿಯಾನ ಆರಂಭಿಸಿದೆ.

       ಮೀರಾನ್ ಹೈದರ್ ಅವರು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳದ ಯುವ ಘಟಕದ ದೆಹಲಿ ಅಧ್ಯಕ್ಷರಾಗಿದ್ದರು. ಸಫೂರ ಸರ್ಗರ್ ಜೊತೆಗೆ ಮೀರಾನ್‌ ಹೈದರ್‌ನನ್ನು ಬಂಧಿಸಲಾಗಿತ್ತು.

       2020ರ ಫೆಬ್ರವರಿ ಕೊನೆಯ ವಾರದಲ್ಲಿ, ಈಶಾನ್ಯ ದೆಹಲಿಯಲ್ಲಿ ನಡೆದ ನರಮೇಧದಲ್ಲಿ 54 ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಇದು ಪೌರತ್ವ ಕಾನೂನು ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಡೆಸಿದ ಸಂಘಟಿತ ದಾಳಿಯಾಗಿತ್ತು.

       ಗಲಭೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮೀರಾನ್ ಹೈದರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಉತ್ತರ ಪ್ರದೇಶದಿಂದ ಗೂಂಡಾಗಳನ್ನು ಸಂಘಟಿಸಲು ಮತ್ತು ಹಿಂಸಾಚಾರ ನಡೆಸಬೇಕಾದ ಸ್ಥಳಗಳನ್ನು ತಿಳಿಸುವುದಕ್ಕಾಗಿ ಮೀರಾನ್ ವಾಟ್ಸಾಪ್ ಬಳಸಿದ್ದಾರೆ. ಶಾಂತಿ, ಸೌಹಾರ್ದತೆ ನೆಲೆಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರೂ ಕೆಲವೆಡೆ ಹಿಂಸಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

       ಮೀರಾನ್‌ನ ಬಿಡುಗಡೆಗೆ ಒತ್ತಾಯಿಸಿ ಸಾಮಾಜಿಕ ರಂಗದ ಹಲವರು ಮುಂದೆ ಬರುತ್ತಿದ್ದಾರೆ. ಈ ಕುರಿತಂತೆ ಸರ್ಕಾರ ತೀವ್ರ ಟೀಕೆಯನ್ನು ಎದುರಿಸುತ್ತಿದೆ. ಡಾ.ಮೀರಾನ್ ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಇನ್ನೂ ಜೈಲಿನಲ್ಲಿದ್ದಾರೆಯೇ ಡಾ.ಎಂದು ಅಭಯ್ ಕುಮಾರ್ ಪ್ರಶ್ನಿಸಿದ್ದಾರೆ.

       ಮಿರಾನ್ ನಮ್ಮ ಹೀರೋ ಎಂದು ವಿದ್ಯಾರ್ಥಿ ನಾಯಕ ಫಹಾದ್ ಅಹಮದ್ ಟ್ವೀಟ್ ಮಾಡಿದ್ದಾರೆ.