ಧೋನಿಯಿಂದ ಉಡುಗೊರೆ ಪಡೆದ ಪಾಕಿಸ್ತಾನಿ ಕ್ರಿಕೆಟಿಗ: ಹಾರಿಸ್‌ ರವುಪ್

ಧೋನಿಯಿಂದ ಉಡುಗೊರೆ ಪಡೆದ ಪಾಕಿಸ್ತಾನಿ ಕ್ರಿಕೆಟಿಗ: ಹಾರಿಸ್‌ ರವುಪ್

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಹಾರಿಸ್ ರವುಫ್ ಅವರಿಗೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಟೀ-ಶರ್ಟ್ ಉಡುಗೊರೆಯಾಗಿ ನೀಡಿದ್ದಾರೆ.

      ಸ್ವತಃ ಹ್ಯಾರಿಸ್ ರವುಫ್ ಅವರು ಟ್ವೀಟ್ ಮೂಲಕ ಈ ಸಂತೋಷವನ್ನು ಹಂಚಿಕೊಂಡಿದ್ದಾರೆ. ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ತಮ್ಮ ಸಿಎಸ್‌ಕೆ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

      ಕ್ರಿಕೆಟ್‌ನ ದಂತಕಥೆ, ಕ್ಯಾಪ್ಟನ್ ಕೂಲ್ ನನಗೆ ಸುಂದರವಾದ ಟೀ-ಶರ್ಟ್ ಉಡುಗೊರೆಯಾಗಿ ನೀಡಿ ಗೌರವಿಸಿದ್ದಾರೆ. '7' ಅಂಕಿ ಈಗಲೂ ಅವರ ಸದ್ಭಾವನಾ ಸಂದೇಶದಿಂದ ಹೃದಯವನ್ನು ಗೆಲ್ಲುತ್ತಿದೆ ಎಂದು ಹ್ಯಾರಿಸ್ ರವುಫ್ ಟ್ವೀಟ್ ಮಾಡಿದ್ದಾರೆ.

‌      ವೆಸ್ಟ್‌ಇಂಡೀಸ್‌ನ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ನೀಡಿರುವ ಬೆಂಬಲಕ್ಕೂ ರವುಫ್ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

‌      ಹ್ಯಾರಿಸ್ ರವುಪ್, ಅವರು ಮಹೇಂದ್ರ ಸಿಂಗ್ ಧೋನಿ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಕಳೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನ ತಂಡದ ಸದಸ್ಯರಾಗಿದ್ದರು. ಆ ವೇಳೆ ಧೋನಿ ಟೀಮ್ ಇಂಡಿಯಾದ ಮಾರ್ಗದರ್ಶಕರಾಗಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ