ದ್ವಿಚಕ್ರ ಸವಾರನಿಂದ ಭಾರಿ ಮೊತ್ತದ ದಂಡ ವಸೂಲು ಮಾಡಿದ ಪೋಲೀಸರು

ದ್ವಿಚಕ್ರ ಸವಾರನಿಂದ ಭಾರಿ ಮೊತ್ತದ ದಂಡ ವಸೂಲು ಮಾಡಿದ ಪೋಲೀಸರು
republicday728
republicday468
republicday234

ಬೆಂಗಳೂರು: ನಿರಂತರವಾಗಿ ಸಂಚಾರ ಉಲ್ಲಂಘನೆ ಮಾಡುತ್ತಿದ್ದ ಭೂಪನೊಬ್ಬ ಕೊನೆಗೂ ಪೋಲೀಸರ ಬಲೆಗೆ ಬಿದ್ದಿದ್ದಾನೆ. ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೂ ಪೋಲೀಸರ ಕಣ್ಣು ತಪ್ಪಿಸಿಯೇ ಈತ ಸವಾರಿ ನಡೆಸುತ್ತಿದ್ದ.

     ಬೆಂಗಳೂರು ಸಂಚಾರ ಪೂರ್ವ ವಿಭಾಗದ ಆಡುಗೋಡಿ ಸಂಚಾರ ಪೋಲೀಸ್‌ ಠಾಣೆಯ ಎ.ಎಸ್.ಐ ಶ್ರೀ ಸತೀಶ್‌ ರವರು ಇಂದು ಕರ್ತವ್ಯದಲ್ಲಿದ್ದಾಗ ಈ ದ್ವಿಚಕ್ರ ಸವಾರನ್ನು ತಪಾಸಣೆಗೊಳಪಡಿಸಿದ್ದರು. ಕೆಎ-01 ಜೆಸಿ 5831 ನೋಂದಾವಣೆಯ ದ್ವಿಚಕ್ರ ವಾಹನವನ್ನು ತಪಾಸಣೆಗೊಳಪಡಿಸಿದಾಗ ಬರೊಬ್ಬರಿ 21 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವ ವಿಷಯ ಬೆಳಕಿಗೆ ಬಂತು. ವಾಹನ ಮಾಲೀಕರಿಂದ ರೂ.10,500 ದೊಡ್ಡ ಮೊತ್ತದ ದಂಡವನ್ನು ಕಟ್ಟಿಸಿಕೊಂಡ ಪೋಲೀಸರು ಸವಾರನನ್ನು ಸಂಚಾರ ಅರಿವು ತರಬೇತಿಯನ್ನು ಪಡೆಯಲು ಕಳುಹಿಸಿ ಕೊಟ್ಟರು. ಅಪಘಾತಗಳನ್ನು ನಿಯಂತ್ರಿಸಲು ಇಂತಹ ಕ್ರಮಗಳು ಅಗತ್ಯವಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ