ದೇಶದ ಸ್ವಾತಂತ್ರ್ಯ ಸೇನಾನಿಗಳನ್ನು ದೇಶಭಕ್ತಿಯ ಕನ್ನಡಕದ ಮೂಲಕ ನೋಡಬೇಕು: ಅಬ್ದುಸ್ಸಮದ್‌ ಸಮದಾನಿ

ದೇಶದ ಸ್ವಾತಂತ್ರ್ಯ ಸೇನಾನಿಗಳನ್ನು ದೇಶಭಕ್ತಿಯ ಕನ್ನಡಕದ ಮೂಲಕ ನೋಡಬೇಕು: ಅಬ್ದುಸ್ಸಮದ್‌ ಸಮದಾನಿ

ಮಲಪ್ಪುರಂ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸೇನಾನಿಗಳನ್ನು ದೇಶಭಕ್ತಿಯ ಕನ್ನಡಕದ ಮೂಲಕ ನೋಡಬೇಕು ಎಂದು ಸಂಸದ ಡಾಕ್ಟರ್ ಅಬ್ದುಸ್ಸಮದ್ ಸಮದಾನಿ ಹೇಳಿದರು.‌ ಅವರು ಪೂಕೊಟ್ಟೂರು ಪಿ,ಕೆ.ಎಂ.ಐ.ಸಿಯಲ್ಲಿ ಏರ್ಪಡಿಸಿದ ಪೂಲೊಟ್ಟೂರು ಕದನದ 100ನೇ ವಾರ್ಷಿಕ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡುತ್ತಿದ್ದರು.

      ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ಧರ್ಮಗಳ ಧೀರ ಹೋರಾಟಗಾರರು ಮುಂಚೂಣಿಯಲ್ಲಿದ್ದರು. ಅವರು ಯಾವುದೇ ಸ್ವಾರ್ಥ ಪ್ರತಿಫಲಾಪೇಕ್ಷೆ ಇಲ್ಲದೆ ದೇಶವನ್ನು ವಿಮೋಚನೆಗೊಳಿಸುವ ಉದ್ದೇಶದಿಂದ ಮಾತ್ರ ಹೋರಾಡಿದ್ದರು. ಅವರ ತ್ಯಾಗದ ಫಲವೇ ಇಂದಿನ ಸ್ವತಂತ್ರ ಭಾರತ. ಆದರೆ ಇಂದಿನ ಪೂರ್ವಾಗ್ರಹ ಪೀಡಿತ ಐತಿಹಾಸಿಕ ಅಧ್ಯಯನಗಳು ಮತ್ತು ವಿಶ್ಲೇಷಣೆಗಳಿಂದ ಇತಿಹಾಸಕ್ಕೆ ಬಲುದೊಡ್ಡ ಅನ್ಯಾಯಗಳಾಗುತ್ತಿವೆ. ನಾವು ಪ್ರತಿಯೊಂದು ಘಟನೆಯ ಹಿನ್ನೆಲೆಯನ್ನು ಆಯಾ ಕಾಲಘಟ್ಟಕ್ಕೆ ಅನುಸಾರವಾಗಿ ನೋಡಬೇಕು.

      ವಾರಿಯನ್‌ ಕುನ್ನತ್‌ ಕುಂಞಹ್ಮದ್‌ ಹಾಜಿ ಬ್ರಿಟಿಷರ ಮುಂದೆ ಶರಣಾಗತಿ ಘೋಷಿಸದ ಪ್ರಮುಖ ಸಮರ ನೇತಾರರಾಗಿದ್ದರು. ವಾರಿಯನ್‌ ಕುನ್ನನ್‌ರವರ ಹೋರಾಟ ಕೇವಲ ಬ್ರಿಟಿಷರ ವಿರುದ್ಧ ಮಾತ್ರವಾಗಿತ್ತು ಎಂಬುದನ್ನು ಅರಿಯಲು ಅಲ್ಪ ಬುದ್ದಿ ಇದ್ದರೂ ಸಾಕು ಎಂದು ಸಮದಾನಿ ಸಾಹಿಬ್‌ ಹೇಳಿದರು.

      ಖಿಲಾಫತ್‌ ಸಮಿತಿಯ ಕಾರ್ಯದರ್ಶಿ ವಡಕ್ಕ್‌ ವೀಟ್ಟಿಲ್‌ ಮಮ್ಮದ್‌ರ ಮೊಮ್ಮಗ ವಡಕ್ಕ್‌ ವೀಟ್ಟಿಲ್‌ ಮೂಸಾರವರನ್ನು ಚಿನ್ನದ ವಸ್ತ್ರದೊಂದಿಗೆ ಸಂಸದ ಅಬ್ದುಸ್ಸಮದ್‌ ಸಮದಾನಿ ಸನ್ಮಾನಿಸಿದರು.

      ಪೂಕೊಟ್ಟೂರ್‌ ಖಿಲಾಫತ್‌ ಮೆಮೋರಿಯಲ್‌ ಇಸ್ಲಾಮಿಕ್‌ ಸೆಂಟರ್‌, ಮಲಪ್ಪುರಂ ಬ್ಲೋಕ್‌ ಪಂಚಾಯತ್‌ ಸಹಕಾರದೊಂದಿಗೆ  ಹೊರ ತಂದ "ಪೂಕೊಟ್ಟೂರ್‌ ವಸಾಹತು ವಿರೋಧಿ ಯುದ್ಧ" ("ಬ್ಯಾಟ್ಲ್‌ ಆಫ್‌ ಪೂಕೊಟ್ಟೂರು ಆಂಟಿ ಕೊಲೊನಿಯಲ್‌ ವಾರ್") ಎಂಬ ಸಾಕ್ಷ್ಯ ಚಿತ್ರವನ್ನು ಬಶೀರ್‌ ಅಲಿ ಶಿಹಾಬ್‌ ತಂಙಳ್‌ ಬಿಡುಗಡೆಗೊಳಿಸಿದರು.

      ಶಾಸಕ ಟಿ.ವಿ.ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಅಬ್ದುಸ್ಸಮದ್ ಪೂಕೊಟ್ಟೂರ್ ಮುಖ್ಯ ಭಾಷಣ ಮಾಡಿದರು. ಶಾಸಕ ಪಿ.ಉಬೈದುಲ್ಲಾ, ಟಿ.ಕೆ.ಹಂಝ, ಡಾ.ಕೆ.ಕೆ.ಎನ್.ಕುರುಪ್, ನ್ಯಾಯವಾದಿ ಪಿ.ವಿ.ಮನಾಫ್, ಶಿಹಾಬ್ ಪೂಕೊಟ್ಟೂರ್, ನ್ಯಾಯವಾದಿ ಕೆ.ಮೋಹನ್ ದಾಸ್, ನ್ಯಾಯವಾದಿ ಕಾರಟ್ ಅಬ್ದುರಹ್ಮಾನ್, ಕೆ.ಇಸ್ಮಾಯಿಲ್ ಮಾಸ್ಟರ್, ಡಾ.ಕೆ.ಪಿ.ಅಫ್ಸಲ್, ಕೆ.ಎಂ.ಅಕ್ಬರ್, ಶಾಹುಲ್ ಹಮೀದ್ ಮೇಲ್ಮುರಿ, ಹಸನ್ ಸಖಾಫಿ ಪೂಕೊಟ್ಟೂರ್, ಡಾ. ಕೆ.ಪಿ.ಫೈಸಲ್ ಹುದವಿ, ಕೆ.ಪಿ.ಉನ್ನಿಥು ಹಾಜಿ, ಪಿ.ಎ.ಸಲಾಮ್, ಮುಜೀಬ್ ಪೂಕೊಟ್ಟೂರ್, ಪಿ.ಎಂ.ಆರ್. ಅಲವಿ ಹಾಜಿ, ಶಶಿ ಪೂಕೊಟ್ಟೂರ್, ವಿ.ಎಸ್.ಎನ್. ನಂಬೂದಿರಿ, ಕೆ.ಮನ್ಸೂರ್ ಕುಂಞಿಪ್ಪು, ಸಿ.ಟಿ.ನೌಶಾದ್, ಇ.ಪಿ.ಬಾಲಕೃಷ್ಣನ್ ಮಾಸ್ಟರ್ ಮತ್ತು ವಿ.ಪಿ.ಸಲೀಂ ಮಾತನಾಡಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ