ದೇಶದಾದ್ಯಂತ NRC ಜಾರಿಗೆ ನಿರ್ಧಾರ ಕೈಗೊಂಡಿಲ್ಲ - ರಾಜ್ಯಸಭೆಯಲ್ಲಿ ಸಚಿವ ರೈ

ದೇಶದಾದ್ಯಂತ NRC ಜಾರಿಗೆ ನಿರ್ಧಾರ ಕೈಗೊಂಡಿಲ್ಲ - ರಾಜ್ಯಸಭೆಯಲ್ಲಿ ಸಚಿವ ರೈ
republicday728
republicday468
republicday234

ನವದೆಹಲಿ: ರಾಷ್ಟ್ರ ವ್ಯಾಪಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸರಕಾರವು ರಾಜ್ಯಸಭೆಯಲ್ಲಿ ಬುಧವಾರ  ಮಾಹಿತಿ ನೀಡಿದೆ.
      ದೇಶದಾದ್ಯಂತ ಎನ್ಆರ್‌ಸಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಯಾವುದಾದರೂ ಯೋಜನೆ ಹೊಂದಿದೆಯೇ ಎಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ಈವರೆಗೆ ದೇಶದಾದ್ಯಂತ ಎನ್‌ಆರ್‌ಸಿಯನ್ನು ಸಿದ್ಧಪಡಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
     ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ರೈ, ಪೌರತ್ವ ಕಾಯ್ದೆ 1955 ಮತ್ತು ಎನ್‌ಆರ್‌ಸಿ ಅಡಿಯಲ್ಲಿ ಬಂಧನ ಕೇಂದ್ರಗಳನ್ನು ಒದಗಿಸಲು ಅವಕಾಶವಿಲ್ಲ ಎಂದೂ ಅವರು ಹೇಳಿದ್ದಾರೆ.

     ಈಗಾಗಲೇ ಶಿಕ್ಷೆಯನ್ನು ಪೂರ್ಣಗೊಳಿಸಿರುವ ವಿದೇಶಿ ಪ್ರಜೆಗಳನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಬೇಕು. ಅವರ ಗಡಿಪಾರು ಅಥವಾ ವಾಪಸಾತಿಗೆ ಬಾಕಿ ಇರುವಂಥವರನ್ನು ಸೂಕ್ತ ಸ್ಥಳದಲ್ಲಿರಿಸಬೇಕು ಎಂದು 2012ರ ಫೆ. 28ರಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ ಎಂದೂ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ