ದುಬೈ ಸುನ್ನಿ ಸೆಂಟರ್: ಅಧ್ಯಕ್ಷರಾಗಿ ಸಮಸ್ತ ಕೇಂದ್ರ ಮುಷಾವರ ಸದಸ್ಯ ಬಾಖವಿ ಉಸ್ತಾದ್

ದುಬೈ ಸರ್ಕಾರದ ಅಂಗೀಕೃತ ಪ್ರತಿಷ್ಠಿತ ಇಸ್ಲಾಮಿಕ್ ವಿದ್ಯಾ ಸಂಸ್ಥೆ ಸುನ್ನಿ ಸೆಂಟರ್ ಫಾರ್ ಇಸ್ಲಾಮಿಕ್ ಎಜುಕೇಷನ್ ಇದರ ನೂತನ ಅಧ್ಯಕ್ಷರಾಗಿ ಸಮಸ್ತ ಕೇರಳ ಜಮೀಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾದ ಬಹುಮಾನ್ಯ ಅಬ್ದುಲ್ ಸಲಾಂ ಬಾಖವಿ ಉಸ್ತಾದರನ್ನು ಆಯ್ಕೆ ಮಾಡಲಾಗಿದೆ.

ದುಬೈ ಸುನ್ನಿ ಸೆಂಟರ್: ಅಧ್ಯಕ್ಷರಾಗಿ ಸಮಸ್ತ ಕೇಂದ್ರ ಮುಷಾವರ ಸದಸ್ಯ ಬಾಖವಿ ಉಸ್ತಾದ್

ದುಬೈ: ದುಬೈ ಸರ್ಕಾರದ ಅಂಗೀಕೃತ ಪ್ರತಿಷ್ಠಿತ ಇಸ್ಲಾಮಿಕ್ ವಿದ್ಯಾ ಸಂಸ್ಥೆ ಸುನ್ನಿ ಸೆಂಟರ್ ಫಾರ್ ಇಸ್ಲಾಮಿಕ್ ಎಜುಕೇಷನ್ ಇದರ ನೂತನ ಅಧ್ಯಕ್ಷರಾಗಿ ಸಮಸ್ತ ಕೇರಳ ಜಮೀಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾದ ಬಹುಮಾನ್ಯ ಅಬ್ದುಲ್ ಸಲಾಂ ಬಾಖವಿ ಉಸ್ತಾದರನ್ನು ಆಯ್ಕೆ ಮಾಡಲಾಗಿದೆ.

      ಈ ಹಿಂದೆ ದುಬೈ ಸುನ್ನಿ ಸೆಂಟರ್ ಅಧ್ಯಕ್ಷರಾಗಿದ್ದ ಬಹುಮಾನ್ಯರಾದ ಮರ್ಹೂಂ ಸಯ್ಯದ್  ಹಾಮಿದ್ ಕೋಯಮ್ಮ ತಂಗಳ್ ಅವರ ನಿಧನದಿಂದ ಖಾಲಿಯಾದ ಸ್ಥಾನಕ್ಕೆ ಉಸ್ತಾದರು ಮರು ಆಯ್ಕೆಯಾಗಿದ್ದಾರೆ. ಯುಎಇ ಸುನ್ನಿ ಕೌನ್ಸಿಲ್ ಹಿರಿಯ ಉಪಾಧ್ಯಕ್ಷರು, ಸಮಸ್ತ ತ್ರಿಶೂರ್ ಜಿಲ್ಲಾ ಸೀನಿಯರ್ ವೈಸ್ ಪ್ರೆಸಿಡೆಂಟ್, ಗಲ್ಫ್ ಸತ್ಯಧಾರ ಮಾಸಿಕದ ಮುಖ್ಯ ಸಂಪಾದಕರು ಮುಂತಾದ ಮಹತ್ವದ ಹುದ್ದೆಗಳನ್ನು ಅಲಂಕರಿಸುತ್ತಿರುವ ಅಬ್ದುಸ್ಸಲಾಂ ಬಾಖವಿ ಉಸ್ತಾದರು, ಕಳೆದ ಎರಡು ದಶಕಗಳಿಗಿಂತಲೂ ಅಧಿಕ ಕಾಲದಿಂದ ಯುಎಇಯ ಸುನ್ನಿ ಕರ್ಮರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.

      "ಅಲ್-ಮಸ್ಲಕುಸ್ಸದೀದ್ ಇಲಾ ಹಖೀಖತಿತ್ತೌಹೀದ್", 'ಸ್ವಹೀಹುಲ್ ಬುಖಾರಿ'ಯ 'ಕಿತಾಬುಲ್ ವಹ್ಯು' ಗೆ ಸಂಬಂಧಪಟ್ಟಂತೆ " ಮಿನನುಲ್ ಬಾರಿ" ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

      ತಮಿಳುನಾಡಿನ ವೆಳ್ಳೂರಿನ ಬಾಖಿಯಾತುಸ್ವಾಲಿಹಾತ್ ಕಾಲೇಜಿನಿಂದ 'ಬಾಖವಿ' ಬಿರುದು ಮಾತ್ರವಲ್ಲದೆ ಅಲೀಘಢ ಯುನಿವರ್ಸಿಟಿಯಿಂದ ತಿಯೋಲಜಿ(ಧರ್ಮಶಾಸ್ತ್ರ) ದಲ್ಲಿ ಮಾಸ್ಟರ್ ಬಿರುದನ್ನು ಪಡೆದುಕೊಂಡಿದ್ದಾರೆ.

      ಉಸ್ತಾದರು ದುಬೈ ಸುನ್ನಿ ಸೆಂಟರ್ ಇದರ ನೇತೃತ್ವವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಅಲ್ಲಾಹು ಅನುಗ್ರಹಿಸಲಿ ಎಂದು SKSSF ಕರ್ನಾಟಕ ಯುಎಇ ರಾಜ್ಯ ಸಮಿತಿ, ಕೆ.ಐ.ಸಿ ಕೇಂದ್ರ ಸಮಿತಿ ಯುಎಇ, ದಾರುನ್ನೂರು ಯುಎಇ ರಾಷ್ಟ್ರೀಯ ಸಮಿತಿ, ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿ, ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರ್ ಯುಎಇ ರಾಷ್ಟ್ರೀಯ ಸಮಿತಿ, ದಾರುಸ್ಸಲಾಮ್ ಯುಎಇ ರಾಷ್ಟ್ರೀಯ ಸಮಿತಿ, ವಿಖಾಯ ಕರ್ನಾಟಕ ಯುಎಇ ಸಮಿತಿಯ ಪದಾಧಿಕರಿಗಳು ಶುಭ ಹಾರೈಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ