ದುಬೈಯಲ್ಲಿ ಮೃತಪಟ್ಟ ಅಶ್ರಫ್‌ ಪಡೀಲ್;‌ ಯುಎಇ ಅನಿವಾಸಿ ಕನ್ನಡಿಗರ ಒಕ್ಕೂಟದಿಂದ ಅಂತ್ಯಕ್ರಿಯೆ

ದುಬೈಯಲ್ಲಿ ಮೃತಪಟ್ಟ ಅಶ್ರಫ್‌ ಪಡೀಲ್;‌ ಯುಎಇ ಅನಿವಾಸಿ ಕನ್ನಡಿಗರ ಒಕ್ಕೂಟದಿಂದ ಅಂತ್ಯಕ್ರಿಯೆ

ದುಬೈ: ಮಂಗಳೂರು ಹೊರ ವಲಯದ ಪಡೀಲ್‌ ನಿವಾಸಿಯಾದ ಮುಹಮ್ಮದ್‌ ಅಶ್ರಫ್‌ ಪಡೀಲ್‌ ದುಬೈಯಲ್ಲಿ ಹೃದಯಾಘಾತದಿಂದ ಮರಣ 

      ಮಾರ್ಚ್‌ 17 ಗುರುವಾರದಂದು ತಮ್ಮ ವಾಸ ಸ್ಥಳದಲ್ಲಿ ಅಶ್ರಫ್‌ರವರಿಗೆ ಹ್ರದಯಘಾತವಾಗಿದ್ದು, ತಕ್ಷಣವೇ ಅವರನ್ನು ದುಬೈಯ ಅಲ್-ರಾಶಿದ್ ಆಸ್ಪತ್ರೆಗೆ ಕೊಂಡೊಯ್ಯಲು ಪ್ರಯತ್ನಿಸಿದ್ದು, ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ.

      ವಿಷಯ ಅರಿತ ಅನಿವಾಸಿ ಕನ್ನಡಿಗರ ಒಕ್ಕೂಟ ಯುಎಇ ಇದರ ರಿಯಾಜ್ ಜೋಕಟ್ಟೆಯವರು ಸಾದಿಕ್, ನಾಸಿರ್, ಹಾಗೂ ಮೃತರ ಸಂಬಂಧಿಕರೊಂದಿಗೆ ಸೇರಿಕೊಂಡು ಮೃತ ದೇಹದ ದಫನ ಕಾರ್ಯಕ್ಕೆ ಮುಂದಾದರು. ದಫನ ಕಾರ್ಯಕ್ಕೆ ಸಂಬಂಧ ಪಟ್ಟ  ದಾಖಲೆ ಪತ್ರಗಳನ್ನು ತಯಾರಿಸಿ ಎಲ್ಲಾ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ದಿನಾಂಕ 18 ಶುಕ್ರವಾರ ದುಬೈಯ  ಅಲ್-ಕೋಸ್ ಕಬಾರಸ್ತಾನದಲ್ಲಿ ದಫನ ಕ್ರಿಯೆಯನ್ನು ನೆರವೇರಿಸಿದ್ದಾರೆ.

      ಮೃತರ ಸಂಬಂಧಿಕಾರಾದ ಕಲಂದರ್ ಶಾ, ಇರ್ಷಾದ್, ಮುಸ್ತಾಕ್, ಶಾಕಿರ್ ಮುಂತಾದವರು ರಿಯಾಜ್ ಜೋಕಟ್ಟೆಯವರಿಗೆ ಎಲ್ಲಾ ರೀತಿಯ ಸಹಕಾರಗಳನ್ನು ನೀಡಿದರು.

      ಮೃತರು ಪತ್ನಿ, 2 ಹೆಣ್ಣು ಹಾಗೂ 2 ಗಂಡು ಮಕ್ಕಳು, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅನಿವಾಸಿ ಕನ್ನಡಿಗರ ಒಕ್ಕೂಟದ ನೆರವಿಗೆ ಪ್ರಶಂಸೆ ವ್ಯಕ್ತವಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ