ದುಬೈಯಲ್ಲಿ ಭಾರತ ಸ್ವಾತಂತ್ರ್ಯದ ಕಂಪು: ಎಸ್ಕೆಎಸ್ಎಸ್ಎಫ್ ವಿಖಾಯ ಯುಎಇ ಸಮಿತಿಯಿಂದ 75ನೇ ಸ್ವಾತಂತ್ರ್ಯೋತ್ಸವ

ದುಬೈಯಲ್ಲಿ ಭಾರತ ಸ್ವಾತಂತ್ರ್ಯದ ಕಂಪು: ಎಸ್ಕೆಎಸ್ಎಸ್ಎಫ್ ವಿಖಾಯ ಯುಎಇ ಸಮಿತಿಯಿಂದ 75ನೇ ಸ್ವಾತಂತ್ರ್ಯೋತ್ಸವ

SKSSF ಕರ್ನಾಟಕ ಯುಎಇ ಮತ್ತು ವಿಖಾಯ ಕರ್ನಾಟಕ ಯುಎಇ ಸಮಿತಿ ಯ ವತಿಯಿಂದ ದುಬೈಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ.

ದುಬೈ: ಎಸ್ಕೆಎಸ್ಎಸ್ಎಫ್ ಕರ್ನಾಟಕ ಯುಎಇ ಮತ್ತು ವಿಖಾಯ ಕರ್ನಾಟಕ ಯುಎಇ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಯ್ಯದ್ ಅಸ್ಕರ್ ಅಲಿ ತಂಙಳ್‌ರವರ ದುಬೈ ನಿವಾಸದಲ್ಲಿ ಅದ್ದೂರಿಯಾಗಿ ನಡೆಸಲಾಯಿತು.

      ರಾಷ್ಟ್ರ ಗೀತೆಯ ನಂತರ ಧ್ವಜ ಗೌರವ ಸಲ್ಲಿಸಿ ಮಾತನಾಡಿದ ಸಭಾಧ್ಯಕ್ಷ ಸಯ್ಯಿದ್ ಅಸ್ಕರ್ ಅಲಿ ತಂಙಳ್‌ರವರು ಇತಿಹಾಸ ಮರೆಮಾಚುವ ಪ್ರಯತ್ನಗಳು ನಡೆಯುತ್ತಿರವ ಈ ಕಾಲಘಟ್ಟದಲ್ಲಿ 75 ವರ್ಷಗಳ ಹಿಂದೆ ನಮ್ಮ ಪೂರ್ವಜರ ತ್ಯಾಗದಿಂದ ಪಡೆದ ಸ್ವಾತಂತ್ರ್ಯವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಆಗಿರುತ್ತದೆ. ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಕರೆಯಿತ್ತರು. ನಾವು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ನಮ್ಮ ಹೃದಯ ಭಾರತಕ್ಕಾಗಿಯೇ ಮಿಡಿಯುತ್ತಿರುತ್ತದೆ. ರಾಷ್ಟ್ರ ಪ್ರೇಮವೆಂದರೆ ಜನಾಂಗ ದ್ವೇಷದೊಂದಿಗೆ ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸುವುದಲ್ಲ. ಭಾರತ ಯಾವತ್ತೂ ಜಾತ್ಯಾತೀತ ರಾಷ್ಟ್ರವಾಗೇ ಉಳಿಯಬೇಕು ಎಂಬುದು ನೈಜ ದೇಶಪ್ರೇಮದ ಲಕ್ಷಣ ಎಂದು ಹೇಳಿದರು.

      ಕರ್ಣಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೆರೀಫ್ ಕೊಡಿನೀರು ಸ್ವಾಗತಿಸಿದರು. ವಿಖಾಯ ಕರ್ನಾಟಕ ಯುಎಇ ಸಮಿತಿ ಕೋಶಾಧಿಕಾರಿ ಸಿರಾಜ್ ಬಿ.ಸಿ.ರೋಡ್ ಧನ್ಯವಾದ ಸಮರ್ಪಿಸಿದರು.

      ಕಾರ್ಯಕ್ರಮದಲ್ಲಿ ವಿಖಾಯ ಕರ್ನಾಟಕ ಯುಎಇ ಸಮಿತಿ ಚಯರ್‌ಮೇನ್ ಜನಾಬ್ ನವಾಝ್ ಬಿ.ಸಿ.ರೋಡ್, ಕಾರ್ಯದರ್ಶಿ ನಾಸಿರ್ ಬಪ್ಪಲಿಗೆ, ಸಂಚಾಲಕ ಅಝೀಝ್ ಸೋಂಪಾಡಿ, ಸಮಿತಿಯ ಪ್ರಮುಖ ರಾದ ನಿಝಾಮ್ ತೋಡಾರು, ಅಲಿ ಈಶ್ವರಮಂಗಲ, ಮುಹಮ್ಮದ್ ಪರ್ಲಡ್ಕ ರೆಡ್ ಟ್ಯಾಗ್, ಮುಸ್ತಫಾ ಎಚ್‌ಎಂಟಿ ಮಾರ್ಬಲ್, ಝುಬೈರ್ ಕೊಡಿನೀರು, ಝಿಯಾದ್ ನೆಲ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ