ದಂಪತಿಗಳಿಗೆ ಜಯ: ನಾವೂರು ಪಂಚಾಯತ್ ಕಸಿದುಕೊಂಡ ಕಾಂಗ್ರೆಸ್

ದಂಪತಿಗಳಿಗೆ ಜಯ: ನಾವೂರು ಪಂಚಾಯತ್ ಕಸಿದುಕೊಂಡ ಕಾಂಗ್ರೆಸ್

ಬಂಟ್ವಾಳ, ಡಿಸೆಂಬರ್30: ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಇಲ್ಲಿನ ದಂಪತಿ ಜೋಡಿಯೊಂದು ಗೆಲುವಿನ ನಗೆ ಬೀರಿ ಸುದ್ಧಿ ಮಾಡಿದೆ. ಬಂಟ್ವಾಳ ತಾಲೂಕಿನ ನಾವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಾವೂರ 4ನೇ ವಾರ್ಡ್‌ ನಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಬೆಂಬಲಿತ ಸುವರ್ಣ ಕುಮಾರ್‌ ಜೈನ್‌ 496 ಮತಗಳನ್ನು ಪಡೆದು ತಮ್ಮ ಸಮೀಪ ಸ್ಫರ್ಧಿ ಬಿಜೆಪಿ ಬೆಂಬಲಿತ ಹರೀಶ್‌ ರವರನ್ನು 118 ಮತಗಳಿಂದ ಸೋಲಿಸಿದರು. ಹರೀಶ್‌ 378 ಮತಗಳನ್ನು ಪಡೆದರು.

     ಇದೇ ಪಂಚಾಯತ್‌ ನ ದೇವಸ್ಯ ಪಡೂರು 1ನೇ ವಾರ್ಡ್‌ ನಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಬೆಂಬಲಿತ ತ್ರಿಶಲ ಸುವರ್ಣ ಜೈನ್‌ ಅವರು ತಮ್ಮ ಸಮೀಪ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಗೀತಾರವರನ್ನು 191 ಮತಗಳಿಂದ ಸೋಲಿಸಿದರು. ತ್ರಿಶಲ ಸುವರ್ಣ ಜೈನ್‌ 516 ಮತಗಳನ್ನೂ ಗೀತಾ 325 ಮತಗಳನ್ನೂ ಪಡೆದರು. ತ್ರಿಶಲ ಸುವರ್ಣ ಜೈನ್‌ ಅವರು ಇದೇ ಪ್ರಥಮ ಬಾರಿಗೆ ಸ್ಪರ್ಧೆಗಿಳಿದಿದ್ದು, ಇವರು ಸುವರ್ಣ ಕುಮಾರ್‌ ಜೈನ್‌ ರವರ ಧರ್ಮ ಪತ್ನಿ. ಸುವರ್ಣ ಕುಮಾರ್‌ ಜೈನ್‌ ರವರಿಗೆ ಇದು ಎರಡನೇ ಬಾರಿಯ ಗೆಲುವು.

    ನಾವೂರು ಗ್ರಾಮ ಪಂಚಾಯತ್‌ ನ ಒಟ್ಟು 17 ಸ್ಥಾನಗಳ ಪೈಕಿ 10ರಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. 7ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಈ ಮೂಲಕ ನಾವೂರು ಪಂಚಾಯತ್‌ ಕಾಂಗ್ರೆಸ್‌ ಪಾಲಾಗಿದೆ. ಕಳೆದ ಬಾರಿ ನಾವೂರು ಗ್ದರಾಮ ಪಂಚಾಯತ್‌ ನಲ್ಲಿ 12 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರೂ 5ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿತರೂ ಜಯ ಗಳಿಸಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ