ದನ ಕಳ್ಳತನದ ಅರೋಪ: ಹಿಗ್ಗಾ ಮುಗ್ಗಾ ಹಲ್ಲೆ

ದನ ಕಳ್ಳತನದ ಅರೋಪ: ಹಿಗ್ಗಾ ಮುಗ್ಗಾ ಹಲ್ಲೆ
republicday728
republicday468
republicday234

ಬೆಳ್ತಂಗಡಿ: ದನ ಕಳ್ಳತನದ ಆರೋಪ ಹೊರಿಸಿ ಇಬ್ಬರ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿದ ಐವರನ್ನು ಬೆಳ್ತಂಗಡಿ ಪೋಲೀಸರು ಬಂಧಿಸಿದ್ದಾರೆ.
       ಬೆಳ್ತಂಗಡಿ ಕುಪ್ಪೆಟ್ಟಿ ನಿವಾಸಿ ಅಬ್ದುಲ್ ರಹೀಂ ಎಂಬವರು ತನ್ನ ಪಿಕಪ್ ವಾಹನದ ದುರಸ್ತಿಗಾಗಿ ಮುಹುಮ್ಮದ್ ಮುಸ್ತಫ ಎಂಬವರ ಜೊತೆ ಬೆಳ್ತಂಗಡಿಯ ಚರ್ಚ್ ರೋಡಿಗೆ ಬಂದಿದ್ದರು. ಆ ಬಳಿಕ ಅಲ್ಲಿಯೇ ಸವಣಾಲು ಎಂಬಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿ ರಾತ್ರಿ ಊಟ ಮುಗಿಸಿ ಹಿಂದಿರುಗುವ ವೇಳೆ ಮೇಲಾಂತಬೆಟ್ಟು ಎಂಬಲ್ಲಿಗೆ ತಲುಪಿದಾಗ ಬೈಕ್ ನಲ್ಲಿ ಬಂದ ಇಬ್ಬರು ಪಿಕಪ್ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಅಷ್ಟರಲ್ಲಿಯೇ ಓಮ್ನಿ ಕಾರಿನಲ್ಲಿ ಕೆಲವರು ಬಂದು ಸೇರಿಕೊಂಡಿದ್ದಾರೆ. ಪಿಕಪ್ ವಾಹನದಲ್ಲಿ ದನ ಕಳ್ಳತನದ ಸುಳ್ಳಾರೋಪ ಹೊರಿಸಿ ದೊಣ್ಣೆ ಮತ್ತು ಪಾದರಕ್ಷೆಗಳಿಂದ ಅಬ್ದುಲ್ ರಹೀಮ್ ಮತ್ತು ಮುಹಮ್ಮದ್ ಮುಸ್ತಫಾರಿಗೆ ಹಲ್ಲೆ ನಡೆಸಿ, ಪಿಕಪ್ ವಾಹನವನ್ನು ಜಖಂಗೊಳಿಸಿ, ಜೀವ ಬೆದರಿಕೆ ಒಡ್ಡಿ ಪರಾರಿಯಾಗಿರುತ್ತಾರೆ.
      ಹಲ್ಲೆಯಿಂದ ಗಾಯಗೊಂಡು ಬಿದ್ದಿದ್ದ ಗಾಯಾಳುಗಳನ್ನು ಅಲ್ಲಿಗೆ ಬಂದ ಓರ್ವರು ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಹಲ್ಲೆಗೊಳಗಾದ ಅಬ್ದುಲ್ ರಹೀಮ್ ರವರು ಹಲ್ಲೆ ನಡೆಸಿದವರಲ್ಲಿ ರಾಜೇಶ್ ಭಟ್, ರಾಕೇಶ್ ಭಟ್, ಸಾಬು, ಗುರು ಪ್ರಸಾದ್, ಲೋಕೇಶ್ ಮತ್ತು ಚಿದಾನಂದ ಎಂಬವರುಗಳನ್ನು ಗುರುತಿಸಿದ್ದಾರೆ.
      ಘಟನೆಯ ಬಗ್ಗೆ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ಕಲಂ 143, 341, 504, 506, 323, 324, 326, 355, 425 ಮತ್ತು ಐಪಿಸಿ 149ರಂತೆ ಪ್ರಕರಣ ದಾಖಲಾಗಿದೆ.
      ತನಿಖೆ ಮುಂದುವರಿಸಿದ ಪೋಲೀಸರು ಈಗಾಗಲೇ ರಾಜೇಶ್ ಭಟ್, ರಾಕೇಶ್ ಭಟ್, ಗುರು ಪ್ರಸಾದ್, ಲೋಕೇಶ್ ಮತ್ತು ಚಿದಾನಂದ ಎಂಬವರುಗಳನ್ನು ಬಂಧಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ಈ ಪ್ರಕರಣವು ಇತ್ತೀಚೆಗೆ ಸರಕಾರವು ಜಾರಿಗೊಳಿಸಿದ ಪರಿಷ್ಕೃತ ಗೋಹತ್ಯಾ ನಿಷೇಧ ಕಾನೂನಿನ ದುಷ್ಪರಿಣಾಮವನ್ನು ಸೂಚಿಸುತ್ತಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ