ಜೂನ್ ಅಂತ್ಯದವರೆಗೆ ಖಾಸಗಿ ಬಸ್ ರಸ್ತೆಗಿಳಿಯೋಲ್ಲ - ದಿಲ್ ರಾಜ್ ಆಳ್ವ

ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಖಾಸಗಿ ಬಸ್‌ ಮಾಲೀಕರು ಒಂದೊಮ್ಮೆ ತಿಂಗಳ ಮಧ್ಯದಲ್ಲಿ ಬಸ್ ಓಡಿಸಿದ್ರೆ ಟ್ಯಾಕ್ಸ್ ಸೇರಿ ಇನ್ನಷ್ಟೂ ಇತರೆ ಆರ್ಥಿಕ ಹೊರೆ ಎದುರಿಸಬೇಕಾಗುತ್ತದೆ.

ಜೂನ್ ಅಂತ್ಯದವರೆಗೆ ಖಾಸಗಿ ಬಸ್ ರಸ್ತೆಗಿಳಿಯೋಲ್ಲ - ದಿಲ್ ರಾಜ್ ಆಳ್ವ

ಮಂಗಳೂರು: ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು‌ ಇಳಿಕೆಯಾಗುತ್ತಿದ್ದಂತೆ ದ.ಕ. ಜಿಲ್ಲೆ ಹಂತ ಹಂತವಾಗಿ ಅನ್‌ ಲಾಕ್‌ ಆಗುತ್ತಿದೆ.  ಇದರ ಭಾಗವಾಗಿ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಸ್‌ ಸಂಚಾರಕ್ಕೆ ಅನುಮತಿ ನೀಡಿದರೂ ಜೂನ್ ಅಂತ್ಯದ ವರೆಗೆ ಖಾಸಗಿ ಬಸ್ ಗಳು ರಸ್ತೆಗಿಳಿಯದಿರಲು ನಿರ್ಧರಿಸಿದೆ ಎಂದು ದ.ಕ. ಜಿಲ್ಲಾ ‌ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ತಿಳಿಸಿದ್ದಾರೆ.

      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದು ನಿಧಾನವಾಗಿ ಅನ್‌ ಲಾಕ್‌ ಪ್ರಕ್ರಿಯೆ ವಿಸ್ತರಣೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಕೆಎಸ್ಆರ್ ಟಿಸಿ ಹಾಗೂ ಖಾಸಗಿ ಬಸ್ ಸಂಚಾರಕ್ಕೆ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ಅನುಮತಿ ನೀಡಿದ್ದಾರೆ.

      ಆದರೆ ಖಾಸಗಿ ಬಸ್ಸುಗಳನ್ನು ರಸ್ತೆಗೆ ಇಳಿಸೋ ದಕ್ಕೆ ಮಾಲೀಕರು ಸಿದ್ದರಿಲ್ಲ. ಅದ್ರಲ್ಲೂ ಜೂನ್ ತಿಂಗಳ ಅಂತ್ಯದವರೆಗೆ ಖಾಸಗಿ ಬಸ್ ಓಡಾಡೋದಿಲ್ಲ. ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಖಾಸಗಿ ಬಸ್‌ ಮಾಲೀಕರು ಒಂದೊಮ್ಮೆ ತಿಂಗಳ ಮಧ್ಯದಲ್ಲಿ ಬಸ್ ಓಡಿಸಿದ್ರೆ ಟ್ಯಾಕ್ಸ್ ಸೇರಿ ಇನ್ನಷ್ಟೂ ಇತರೆ ಆರ್ಥಿಕ ಹೊರೆ ಎದುರಿಸಬೇಕಾಗುತ್ತದೆ. ಹೀಗಾಗಿ ಸದ್ಯಕ್ಕೆ ಬಸ್ ಸಂಚಾರ ಆರಂಭಿಸದಿರಲು ನಿರ್ಧರಿಸಿದ್ದೇವೆ. ಅಲ್ಲದೇ ಡಿಸೇಲ್ ಬೆಲೆಯೇರಿಕೆಯಿಂದಾಗಿ  50% ಸೀಟಿಂಗ್ ಹಾಕಿ ಬಸ್ ಓಡಿಸಲು ಸಾಧ್ಯವೇ ಇಲ್ಲ ಬಸ್ ಓಡಿಸಿದ್ರೆ ಟ್ಯಾಕ್ಸ್ ಕೂಡ ಕಟ್ಟ ಬೇಕಾಗಿರುವ ಕಾರಣ ಅದು ಕಷ್ಟ‌ ಹೀಗಾಗಿ ಈ ತಿಂಗಳ ಅಂತ್ಯದವರೆಗೆ ಬಸ್ ಓಡಿಸದೇ ಇರಲು ನಿರ್ಧಾರ ಮಾಡಿದ್ದೇವೆ ಎಂದು ಆಳ್ವ ತಿಳಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ