ದ.ಕ.ಜಿಲ್ಲೆಯಲ್ಲಿ ವೀಕೆಂಡ್‌ ಕರ್ಫ್ಯೂ: ಏನೇನಿದೆ?

ದ.ಕ.ಜಿಲ್ಲೆಯಲ್ಲಿ ವೀಕೆಂಡ್‌ ಕರ್ಫ್ಯೂ: ಏನೇನಿದೆ?

ಮಂಗಳೂರು: ದ.ಕ ಜಿಲ್ಲೆಯಲ್ಲಿ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆಗೊಂಡು ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದರೂ, ವಾರಾಂತ್ಯ ಕರ್ಫ್ಯೂ ಮುಂದುವರಿಯಲಿದೆ. ಅದರಂತೆ ಶನಿವಾರ ಮತ್ತು ಭಾನುವಾರ ಜಿಲ್ಲೆಯು ಸಂಪೂರ್ಣ ಲಾಕ್ ಡೌನ್ ಆಗಲಿದೆ ಜಿಲ್ಲಾಡಳಿತ ತಿಳಿಸಿದೆ.

      ವಾರಾಂತ್ಯ ಕರ್ಫ್ಯೂ ವೇಳೆ ಜನರಲ್ಲಿ ಗೊಂದಲ ಮೂಡುವುದು ಸಹಜ. ಈ ಸಂದರ್ಭದಲ್ಲಿ ಏನೆಲ್ಲ ಇದೆ ಎಂಬುದರ ಬಗ್ಗೆ ಜನರಲ್ಲಿ ಗೊಂದಲ ಉಂಟಾಗಲಿದೆ.

      ಶನಿವಾರ ಮತ್ತು ಭಾನುವಾರ ಔಷಧಿ ಅಂಗಡಿ, ದಿನಪತ್ರಿಕೆ ಅಂಗಡಿಗಳು ತೆರೆದಿರುತ್ತದೆ. ತುರ್ತು ಅಗತ್ಯ ಸೇವೆಯೊಂದಿಗೆ ಕರ್ತವ್ಯ ನಿರ್ವಹಿಸುವ ಎಲ್ಲಾ ಕೈಗಾರಿಕೆಗಳು ತೆರೆಯಲು ಅವಕಾಶವಿದೆ. ನೌಕರರು ಗುರುತಿನ ಚೀಟಿ ತೋರಿಸಿ ಸಂಚರಿಸಬಹುದು. ರೋಗಿಗಳು ಮತ್ತು ಆಸ್ಪತ್ರೆ ಹೋಗುವವರು ಸಮರ್ಪಕ ದಾಖಲೆ ತೋರಿಸಬೇಕು. ಕೋವಿಡ್ ನಿಯಮ ಪಾಲಿಸಿಕೊಂಡು ಮದುವೆ ಕಾರ್ಯ ನಡೆಸಲು ಅವಕಾಶವಿದೆ. ರೆಸ್ಟೊರೆಂಟ್ ಮತ್ತು ಹೋಟೆಲ್ ನಿಂದ ಪಾರ್ಸಲ್ ಹೋಂ ಡೆಲಿವರಿಗೆ ಮಾತ್ರ ಅವಕಾಶ ಇದೆ.

      ಉಳಿದಂತೆ ದಿನಸಿ, ತರಕಾರಿ ಸೇರಿದಂತೆ ಎಲ್ಲಾ ಅಂಗಡಿಗಳು ಸಂಪೂರ್ಣ ಮುಚ್ಚಲಿವೆ. ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಿಗ್ಗಿನವರೆಗೆ ದ.ಕ ಜಿಲ್ಲೆ ಸಂಪೂರ್ಣ ಸ್ತಬ್ದವಾಗಲಿದೆ. ವಾರಾಂತ್ಯ ಕರ್ಫ್ಯೂ ವೇಳೆ ಮೆಡಿಕಲ್ ಮತ್ತು ದಿನ ಪತ್ರಿಕೆ ಅಂಗಡಿ, ತುರ್ತು ಸೇವೆಗೆ ಮಾತ್ರ ಅವಕಾಶ ನೀಡಿದ್ದು ಉಳಿದದ್ದು, ಎಲ್ಲವೂ ಬಂದ್ ಆಗಲಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ