ತಾಲಿಬಾನ್‌ ಮಹಿಳೆಯರಿಗೆ ಉನ್ನತ ಶಿಕ್ಷಣ ನಿಷೇಧ: ಸೌದಿ ಅರೇಬಿಯಾ ಮತ್ತು ಟರ್ಕಿಯ ಖಂಡನೆ

ತಾಲಿಬಾನ್‌ ಮಹಿಳೆಯರಿಗೆ ಉನ್ನತ ಶಿಕ್ಷಣ ನಿಷೇಧ: ಸೌದಿ ಅರೇಬಿಯಾ ಮತ್ತು ಟರ್ಕಿಯ ಖಂಡನೆ

ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ನಿಷೇಧಿಸಿರುವ ತಾಲಿಬಾನ್‌ ಆಡಳಿತ ನಿರ್ಧಾರವನ್ನು ಸೌದಿ ಅರೇಬಿಯಾ ಮತ್ತು ಟರ್ಕಿಯು ತೀವ್ರವಾಗಿ ಖಂಡಿಸಿವೆ.

      ತಾಲಿಬಾನ್‌ ಸರ್ಕಾರದ ಈ ನಿರ್ಧಾರ ವಿರೋಧಿಸಿ 24ಕ್ಕೂ ಹೆಚ್ಚು ಮಹಿಳೆಯರಿದ್ದ ಗುಂಪೊಂದು ಗುರುವಾರ ಕಾಬೂಲ್‌ ನಗರದ ಬೀದಿಗಳಲ್ಲಿ ಪ್ರತಿಭಟನೆ ನಡೆಸಿತು. ತಾಲಿಬಾನ್‌ ಆಡಳಿತದ ಈ ಧೋರಣೆಯನ್ನು ಅಫ್ಗಾನಿಸ್ತಾನದ ಹಲವು ಕ್ರಿಕೆಟಿಗರೂ ಖಂಡಿಸಿದ್ದಾರೆ.

      ವಾರದ ಆರಂಭದಲ್ಲಿ ‘ಈ ಕ್ಷಣದಿಂದ ಮುಂದಿನ ಆದೇಶದವರೆಗೆ ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಮಹಿಳೆಯರು ಪ್ರವೇಶಿಸುವಂತಿಲ್ಲ’ ಎಂದು ತಾಲಿಬಾನ್‌ ಸರ್ಕಾರ ಆದೇಶ ಹೊರಡಿಸಿತ್ತು. ಕೆಲವು ದಿನಗಳ ಹಿಂದೆ ಶಾಲೆಗೆ ಹೋಗದಂತೆ ಬಾಲಕಿಯರಿಗೆ ನಿಷೇಧ, ಉದ್ಯಾನ ಮತ್ತು ಜಿಮ್‌ಗಳಿಗೆ ಹೋಗದಂತೆ ಮತ್ತು ಉದ್ಯೋಗ ಮಾಡದಂತೆ ಮಹಿಳೆಯರಿಗೆ ನಿಷೇಧ ಹೇರಿತ್ತು. ಅಲ್ಲದೇ ಮಹಿಳೆಯರಿಗೆ ವಸ್ತ್ರಸಂಹಿತೆ ಜಾರಿಗೊಳಿಸಿತ್ತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ