ತಲಾಖ್‌ ನೀಡಿದ ಪತ್ನಿಯ ಅಶ್ಲೀಲ ವೀಡಿಯೋ ಹರಿಯಬಿಟ್ಟ ಭೂಪ: 25ರ ಮಹಿಳೆ ಆತ್ಮಹತ್ಯೆ

ತಲಾಖ್‌ ನೀಡಿದ ಪತ್ನಿಯ ಅಶ್ಲೀಲ ವೀಡಿಯೋ ಹರಿಯಬಿಟ್ಟ ಭೂಪ: 25ರ ಮಹಿಳೆ ಆತ್ಮಹತ್ಯೆ

ಮುಜಾಫರ್‌ನಗರ: ಸಾಮಾಜಿಕ ಜಾಲ ತಾಣಗಳಲ್ಲಿ ತನ್ನ ವಿಚೇಧಿತ ಪತಿಯೇ ತನ್ನ ಅಶ್ಲೀಲ ವೀಡಿಯೋಗಳನ್ನು ಹರಿಯ ಬಿಟ್ಟಿದ್ದರಿಂದ ಮನನೊಂದ 25ರ ಹರೆಯದ ಮಹಿಳೆಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಜಾಫರ್‌ನಗರ ಜಿಲ್ಲೆಯ ಕಿಶನ್ಪುರ್‌ ಗ್ರಾಮದಲ್ಲಿ ನಡೆದಿದೆ.

      ಭೋಪಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿಶನ್ಪುರ್ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗಳಿಗೆ 18 ತಿಂಗಳ ಮಗು ಇದೆ ಎಂದು ಪೊಲೀಸ್ ಅಧಿಕಾರಿ ದೀಪಕ್ ಚತುರ್ವೇದಿ ತಿಳಿಸಿದ್ದಾರೆ.

      ಮೂರು ತಿಂಗಳ ಹಿಂದೆ ಆರೋಪಿಯು ತನ್ನ ಪತ್ನಿಗೆ ತ್ರಿವಳಿ ತಲಾಖ್ ಘೋಷಿಸಿ ವಿಚ್ಛೇದನ ನೀಡಿದ್ದನು. ನಂತರ ಆಕೆಯು ತನ್ನ ಮಗುವಿನೊಂದಿಗೆ ಹೆತ್ತವರ ಜೊತೆ ಕಿಶನ್ಪುರ್ ಗ್ರಾಮಕ್ಕೆ ತೆರಳಿದ್ದಳು. ಅದಾಗ್ಯೂ ಮಹಿಳೆಗೆ ಕಿರುಕುಳ ನೀಡುವುದನ್ನು ಮುಂದುವರೆಸಿದ್ದ ಆರೋಪಿ, ಅವಳ ಅಶ್ಲೀಲ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದನು. ಇದರಿಂದ ಮನ ನೊಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

      ಆಗಸ್ಟ್ 18 ರಂದು ಮಹಿಳೆಯು ಪೋಲಿಸರಿಗೆ ನೀಡಿದ ದೂರಿನಲ್ಲಿ, ನನ್ನ ಪತಿಗ ನನಗೆ ಮೂರು ತಿಂಗಳ ಹಿಂದೆ ತಲಾಖ್ ನೀಡಿದ್ದು ಬಲವಂತವಾಗಿ ತಮ್ಮ ಮಗನನ್ನು ನನ್ನಿಂದ ದೂರವಿಟ್ಟಿದ್ದಾನೆ ಎಂದು ಆರೋಪಿಸಿದ್ದಾಳೆ.

      ಘಟನೆಗೆ ಸಂಬಂಧಿಸಿದಂತೆ ಮುಜಾಫರ್‌ನಗರದ ಭೋಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ