ತರಗತಿಯಲ್ಲೇ ಗಾಢ ನಿದ್ರೆಗೆ ಜಾರಿದ ಶಿಕ್ಷಕಿ...! ಮ್ಕಕಳು ಮಾಡಿದ್ದೇನು ಗೊತ್ತಾ?

ಉತ್ತರ ಪ್ರದೇಶ: ಶಾಲಾ ಶಿಕ್ಷಕಿಯೊಬ್ಬರು ಶಾಲೆಯಲ್ಲಿ ಪಾಠ ಮಾಡುವುದು ಬಿಟ್ಟು ಶಾಲೆಯಲ್ಲೇ ಗಾಢಾ ನಿದ್ರೆಗೆ ಜಾರಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶಾಲಾ ಸಮಯದಲ್ಲಿ ತರಗತಿಯಲ್ಲೇ ನಿದ್ರೆಗೆ ಜಾರಿದ ಶಿಕ್ಷಕಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶಿಕ್ಷಕಿ ಮಕ್ಕಳಿಗೆ ಪಾಠ ಮಾಡುವುದು ಬಿಟ್ಟು ಶಾಲಾ ತರಗತಿಯಲ್ಲಿ ಗಾಢ ನಿದ್ರೆಗೆ ಜಾರಿದ್ದಾರೆ. ಇನ್ನೊಂದು ಕಡೆ ಪುಟಾಣಿ ಮಕ್ಕಳು ಸುತ್ತಲೂ ನಿಂತು ಶಿಕ್ಷಕಿಗೆ ಬೀಸಣಿಗೆಯಲ್ಲಿ ಗಾಳಿ ಹಾಕುತ್ತಿದ್ದಾರೆ. ಈ ವೀಡಿಯೋ ದೊಡ್ಡ ಸುದ್ದಿ ಆಗುತ್ತಿದ್ದಂತೆ ಮಕ್ಕಳ ಪೋಷಕರು ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಕ್ಷಕಿಯ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ.
ನಾವು ನಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ಸಿಗಲಿ ಅನ್ನೋ ಉದ್ದೇಶದಿಂದ ಶಾಲೆಗೆ ಕಳುಹಿಸುತ್ತೇವೆ. ಅವರ ಭವಿಷ್ಯವನ್ನು ರೂಪಿಸಬೇಕಾದ ಶಿಕ್ಷಕಿಯೇ ಹೀಗೆ ಶಾಲಾ ಸಮಯದಲ್ಲಿ ನಿದ್ದೆಗೆ ಜಾರಿ ಮಕ್ಕಳಿಂದ ಚಾಮರವನ್ನು ಬೀಸಿಕೊಂಡು ಆರಾಮವಾಗಿ ಮಲಗಿದರೆ ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ. ಈ ಘಟನೆ ನಡೆದಿರುವುದು ಸರ್ಕಾರಿ ಶಾಲೆಯಲ್ಲಿ, ಸರ್ಕಾರಿ ಶಾಲೆಗೆ ಮಕ್ಕಳು ಬರಲ್ಲ ಎಂದು ಬೊಬ್ಬೆ ಹೊಡೆಯುವವರು ಯಾಕೆ ಬರೋದಿಲ್ಲ ಅನ್ನೋದನ್ನ ಕೂಡ ವಿಚಾರ ಮಾಡಬೇಕು. ಇಂತಹ ಬೇಜವಾಬ್ದಾರಿ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿದ್ರೆ ಯಾರು ತಾನೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದೆ ಬರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ