ತಾಯಿನಾಡ ಬದ್ಧತೆ ಪ್ರದರ್ಶಿಸಿದ ಎಸ್ಕೆಎಸ್ಎಸ್ಎಫ್ ಕರ್ನಾಟಕ ಯುಎಇ: ಹುಟ್ಟೂರಿಗೆ ಆಕ್ಸಿಜನ್ ಸಿಲಿಂಡರ್

ತಾಯಿನಾಡ ಬದ್ಧತೆ ಪ್ರದರ್ಶಿಸಿದ ಎಸ್ಕೆಎಸ್ಎಸ್ಎಫ್ ಕರ್ನಾಟಕ ಯುಎಇ: ಹುಟ್ಟೂರಿಗೆ ಆಕ್ಸಿಜನ್ ಸಿಲಿಂಡರ್

ದುಬೈ: SKSSF ಕರ್ನಾಟಕ ಯುಎಇ ಹಾಗೂ SKSSF ವಿಖಾಯ ಕರ್ನಾಟಕ ಯುಎಇ ಸಮಿತಿ ವತಿಯಿಂದ #Support India's Covid Fight ಇದರ ಭಾಗವಾಗಿ ತಾಯಿನಾಡಿನ ಕೋವಿಡ್ ರೋಗಿಗಳಿಗೆ ಅತ್ಯಗತ್ಯವಾಗಿರುವ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಟ್ ಗಳನ್ನು ಕಳುಹಿಸಿ ಕೊಡಲಾಯಿತು.
     ಸದಾ ಸೇವಾ ನಿರತರಾಗಿರುವ ಎಸ್ಕೆಎಸ್ಎಸ್ಎಫ್ ಕರ್ನಾಟಕ ಯುಎಇ ಸಮಿತಿಯು, ಕೋವಿಡ್ ಎರಡನೇ ಅಲೆ ಗಂಭಿರ ಸ್ವರೂಪ ಪಡೆದು ಸಂಕಷ್ಟದಲ್ಲಿರುವ ಹುಟ್ಟೂರ ಜನತೆಗೆ ಸಹಾಯ ಮಾಡಲು ಯೋಜನೆಯನ್ನು ರೂಪಿಸಿಕೊಂಡಿತ್ತು. DONATE OXYGEN & SAVE LIVES ಎಂಬ ಅಭಿಯಾನವನ್ನು ಆರಂಭಿಸಿದ ಎಸ್ಕೆಎಸ್ಎಸ್ಎಫ್ ಯುಎಇ ಸಮಿತಿ ದುಬೈಯಲ್ಲಿ ಆನ್ಲೈನ್ ಮೂಲಕ ದಾನಿಗಳನ್ನು ಸಂಪರ್ಕಿಸಿತ್ತು.

      ಅಭಿಯಾನವನ್ನು ಯಶಸ್ಸಿಗೊಳಿಸಲು ಅನಿವಾಸಿ ಉದ್ಯಮಿಗಳು, ಉದಾರ ದಾನಿಗಳು, ಸಮಿತಿಯ ಪದಾಧಿಕರಿಗಳು ಉತ್ತಮ ರೀತಿಯಲ್ಲಿ ಸಹಕರಿಸಿದರು. ಜನಾಬ್ ಶರೀಫ್ ಕಾವು ಮತ್ತು ಜನಾಬ್ ರಫೀಕ್ ಸುರತ್ಕಲ್ ಅವರು ಅಭಿಯಾನದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

      SHIPWAVES DUBAI ಇದರ ಮಾಲಕರಾದ ಜನಾಬ್ ಮುಹಮ್ಮದ್ ಹಾರಿಸ್ ಅವರು ದುಬೈ ಯಿಂದ ಮಂಗಳೂರಿಗೆ ಉಚಿತ ಕಾರ್ಗೊ ವ್ಯವಸ್ಥೆ ಏರ್ಪಡಿಸಿ ಸಹಕರಿಸಿದರು.

      ದಿನಾಂಕ 22.5.2021 ಶನಿವಾರ ಬೆಳಿಗ್ಗೆ ಎಸ್ಕೆಎಸ್ಎಸ್ಎಫ್ ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಗರ್ ಅಲೀ ತಂಙಲ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಹುಮಾನ್ಯ ಸುಲೈಮಾನ್ ಮೌಲವಿ ಕಲ್ಲೆಗ ಅವರ ದುವಾದೊಂದಿಗೆ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಟ್ ಗಳನ್ನು ಕಾರ್ಗೊ ಮೂಲಕ ತಾಯಿನಾಡಿಗೆ ಕಳುಹಿಸಿ ಕೊಡಲಾಯಿತು.

      ಈ ಸಂದರ್ಭದಲ್ಲಿ ಎಸ್ಕೆಎಸ್ಎಸ್ಎಫ್ ಕರ್ನಾಟಕ ಯುಎಇ ಟ್ರೆಂಡ್ ಚೆಯರ್ ಮೇನ್ ನೂರ್ ಮುಹಮ್ಮದ್ ನೀರ್ಕಜೆ, ಎಸ್ಕೆಎಸ್ಎಸ್ಎಫ್ ವಿಖಾಯ ಯುಎಇ ಚೆಯರ್ ಮೇನ್ ಜನಾಬ್ ನವಾಝ್ ಬಿ.ಸಿ.ರೋಡ್, ಕಾರ್ಯದರ್ಶಿ ಜನಾಬ್ ನಾಸಿರ್ ಬಪ್ಪಲಿಗೆ, ಕೋಶಾಧಿಕಾರಿ ಜನಾಬ್ ಸಿರಾಜ್ ಬಿ.ಸಿ.ರೋಡ್, ಕನ್ವೀನರ್ ಜನಾಬ್ ಅಬ್ದುಲ್ ಅಝೀಝ್ ಸೋಂಪಾಡಿ,  ಕಾರ್ಯಕಾರಿ ಸಮಿತಿಯ ಸದಸ್ಯರಾದ ಶೆರೀಫ್ ಕೊಡಿನೀರು, ಜನಾಬ್ ನಿಝಾಮ್ ತೋಡಾರು, ಶಬೀರ್ ಫರಂಗಿಪೇಟೆ, ಜೌಹರ್ ಉರುಮನೆ ಮೊದಲಾದವರು ಉಪಸ್ತಿತರಿದ್ದರು.

      ಅತ್ಯಗತ್ಯವಾದ ಅಕ್ಸಿಜನ್ ಸಿಲಿಂಡರ್, ಮೆಡಿಕಲ್ ಕಿಟ್, ಪಿಪಿ ಕಿಟ್ ಇತ್ಯಾದಿಗಳನ್ನು ದ.ಕ.ಜಿಲ್ಲಾ ಎಸ್ಕೆಎಸ್ಎಸ್ಎಫ್ ಗೆ ಕಳುಹಿಸಿ ಕೊಡಲಾಯಿತು. ಕಳೆದ ವರ್ಷ ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲೂ ಎಸ್ಕೆಎಸ್ಎಸ್ಎಫ್ ಯುಎಇ ಸಮಿತಿ ದ.ಕ.ಜಿಲ್ಲಾ ಸಮಿತಿಯಿಂದಿಗೆ ಸೂಕ್ತವಾಗಿ ಸ್ಪಂದಿಸಿತ್ತು. ಈ ಬಾರಿಯೂ ಅತ್ಯಗತ್ಯವಾದ ಅಕ್ಸಿಜನ್ ಸಿಲಿಂಡರ್, ಮೆಡಿಕಲ್ ಕಿಟ್, ಪಿಪಿ ಕಿಟ್ ಇತ್ಯಾದಿಗಳನ್ನು ದ.ಕ.ಜಿಲ್ಲಾ ಎಸ್ಕೆಎಸ್ಎಸ್ಎಫ್ ಗೆ ಕಳುಹಿಸಿ ಕೊಡುವ ಮೂಲಕ ಎಸ್ಕೆಎಸ್ಎಸ್ಎಫ್ ಯುಎಇ ಸಮಿತಿ ತನ್ನ ಹುಟ್ಟೂರ ಬದ್ಧತೆಯನ್ನು ಪ್ರದರ್ಶಿಸಿದೆ. ದ.ಕ.ಜಿಲ್ಲೆಯಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ಸೇವೆಯಲ್ಲಿರುವ ಎಸ್ಕೆಎಸ್ಎಸ್ಎಫ್ ವಿಖಾಯ ಕಾರ್ಯಕರ್ತರು ಜಾತಿ, ಪಂಗಡಗಳ ಭೇದವಿಲ್ಲದೆ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಎಸ್ಕೆಎಸ್ಎಸ್ಎಫ್ ನ 10 ಆಂಬುಲೆನ್ಸ್ ಗಳು, ನೂರಾರು ನೀಲಿ ಪಡೆಯ ವಿಖಾಯ ಕಾರ್ಯಕರ್ತರು ಹಗಲು ರಾತ್ರಿಯೆನ್ನದೆ ಸೇವಾ ನಿರತವಾಗಿವೆ. ಎಸ್ಕೆಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ವಿಖಾಯ ಜಿಲ್ಲಾ ಚೇರ್ಮನ್ ಇಸ್ಮಾಯಿಲ್ ತಂಙಳ್, ಕನ್ವೀನರ್ ಆಸಿಫ್ ಕಬಕ, ಕೋರ್ಡಿನೇಟರ್ ಮುಸ್ತಫ ಕಟ್ದದಪಡ್ಪು, ಜಿಲ್ಲಾ ವಿಖಾಯ ಉಸ್ತುವಾರಿ ಇಸ್ಹಾಕ್ ಹಾಜಿ ತೋಡಾರು, ವಿಖಾಯ ಕೇಂದ್ರ ಸಮಿತಿ ಉಪಾಧ್ಯಕ್ಷ ಬಶೀರ್ ಮಜಲ್ ಮುಂತಾದವರು ವಿಖಾಯ ಸೇವಾ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದಾರೆ. 

      ಸೇವಾ ನಿರತ ವಿಖಾಯ ಕಾರ್ಯಕರ್ತರ ಸಂಪರ್ಕ ನಂಬರನ್ನು ಈಗಾಗಲೇ ಸಾರ್ವಜನಿಕವಾಗಿ ಬಿಡುಗಡೆಗೊಳಿಸಿದ್ದು ಅಗತ್ಯ ಇರುವವರು ಆಯಾ ಪ್ರದೇಶಗಳ ಆ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ವಿಖಾಯ ಉಸ್ತುವಾರಿ ಇಸ್ಹಾಕ್ ಹಾಜಿ, ಕರ್ನಾಟಕ ಯುಎಇ ಸಮಿತಿ ಅಧ್ಯಕ್ಷ ಸಯ್ಯಿದ್ ಅಸ್ಗರ್ ಅಲಿ ತಂಙಳ್, ಪ್ರಧಾನ ಕಾರ್ಯದರ್ಶಿ ಸುಲೇಮಾನ್ ಮುಸ್ಲಿಯಾರ್ ಕಲ್ಲೇಗ ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ