"ತೈಬಾ ಎಕ್ಸ್ ಪ್ಲೋರ್" ಸಮಾರೋಪ ಸಮಾರಂಭ

"ತೈಬಾ ಎಕ್ಸ್ ಪ್ಲೋರ್" ಸಮಾರೋಪ ಸಮಾರಂಭ

ಕಿನ್ಯಾ: ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ವಾದಿತ್ತೈಬ ಕಿನ್ಯಾ ಇದರ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್ " ತೈಬಾ ಎಕ್ಸ್ ಪ್ಲೋರ್ " ಸಮಾರೋಪ ಸಮಾರಂಭವು ಕಾಲೇಜು ಆಡಿಟೋರಿಯಮ್ ನಲ್ಲಿ ನಡೆಯಿತು.

      ಸಮಾರಂಭವನ್ನು ಸಮಸ್ತ ಕೇರಳ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ಉದ್ಘಾಟಿಸಿದರು.

      SKSSF ದ.ಕ. ಜಿಲ್ಲಾಧ್ಯಕ್ಷರಾದ ಸೈಯದ್ ಅಮೀರ್ ತಂಗಳ್ ಕಿನ್ಯಾ ಅಧ್ಯಕ್ಷತೆ ವಹಿಸಿದ್ದರು.

      ಉಪಾಧ್ಯಕ್ಷರಾದ ಸೈಯದ್ ಇಬ್ರಾಹಿಂ ಬಾತಿಷಾ ತಙಳ್ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.

      ಪ್ರಸಿದ್ಧ ವಾಗ್ಮಿ ಯಾದ ಅನ್ವರ್ ಅಲಿ ಹುಧವಿ ಆಳುವ " ಹುಬ್ಬುರ್ರಸೂಲ್" ಮುಖ್ಯ ಪ್ರಭಾಷಣಗೈದರು.

      ಮುಖ್ಯ ಅತಿಥಿಗಳಾಗಿ ಡಿ.ಎ ಉಸ್ಮಾನ್ ಹಾಜಿ ಏರ್ ಇಂಡಿಯಾ, ಇದ್ದಿನಬ್ಬ ಹಾಜಿ ಬೊಳ್ಳೂರು,ಸಿದ್ದೀಕ್ ಬದಿಯಡ್ಕ , ಫಾರೂಕ್ ಕಿನ್ಯಾ, ಇಸ್ಮಾಯಿಲ್ ಹಾಜಿ ಕಿನ್ಯಾ, ಆಗಮಿಸಿದರು.

      ವೇದಿಕೆಯಲ್ಲಿ ಕಾಲೇಜಿನ ಪ್ರಾಧ್ಯಾಪಕರು , ಮ್ಯಾನೇಜ್ಮೆಂಟ್ ಸದಸ್ಯರು, ಊರಿನ ಗಣ್ಯ ವ್ಯಕ್ತಿಗಳು, ಪಾಲ್ಗೊಂಡು ಕಾರ್ಯಕ್ರಮವು ಯಶಸ್ವಿಯಾಯಿತು.

     ಇದೇ ಸಮಯದಲ್ಲಿ ಐದು ದಿವಸಗಳ ಕಾಲ ಕಾಲೇಜಿನಲ್ಲಿ ಕೇಂಬ್ರಿಡ್ಜ್ , ಆಕ್ಸ್ಫರ್ಡ್ , ಕೈರೋ ತಂಡಗಳ ಮಧ್ಯೆ ನಡೆದ "ತೈಬಾ ಎಕ್ಸ್ ಪ್ಲೋರ್" ಫೆಸ್ಟ್ ನ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

      ಕೈರೋ ತಂಡವು ವಿಜಯಿಯಾಗಿ ಟ್ರೋಫಿಯನ್ನು ತನ್ನ ಮಡಿಲಿಗೇರಿಸಿಕೊಂಡಿತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ