ತೋಡಾರು ಆದರ್ಶ್‌ ವಿದ್ಯಾ ಸಂಸ್ಥೆ: ಸಮಸ್ತ ಫಾಳಿಲಾ ಕೋರ್ಸ್‌ಗೆ ಚಾಲನೆ

ತೋಡಾರು ಆದರ್ಶ್‌ ವಿದ್ಯಾ ಸಂಸ್ಥೆ: ಸಮಸ್ತ ಫಾಳಿಲಾ ಕೋರ್ಸ್‌ಗೆ ಚಾಲನೆ

ಮೂಡಬಿದ್ರೆ: ಇಲ್ಲಿಗೆ ಸಮೀಪದ ತೋಡಾರ್‌ ಆದರ್ಶ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿನಿಗಳಿಗಾಗಿ ಪಿಯುಸಿ ಜೊತೆ ಜೊತೆಯಲ್ಲೇ ಧಾರ್ಮಿಕ ಶಿಕ್ಷಣ ನೀಡುವ ಫಾಳಿಲ ಕೋರ್ಸ್‌ಗೆ ಚಾಲನೆ ನೀಡಲಾಯಿತು

      ಆದರ್ಶ್‌ ವಿದ್ಯಾ ಸಂಸ್ಥೆಯು ಸಮಸ್ತ ಕೇರಳ ‌ಜಂ-ಇಯ್ಯತುಲ್ ಉಲಮಾದಿಂದ ಅಂಗೀಕೃತಗೊಂಡ‌ ವುಮೆನ್ಸ್ ಶರೀಯತ್ ಕಾಲೇಜಾಗಿದ್ದು, ಗುಣ ಮಟ್ಟದ ಶಿಕ್ಷಣಕ್ಕೆ ಇಲ್ಲಿ ಆದ್ಯತೆಯನ್ನು ನೀಡಲಾಗುತ್ತದೆ. ಪಿಯುಸಿಯೊಂದಿಗೆ ಫಾಳಿಲ ಮತ್ತು ಪಿಯುಸಿ ಅಲ್ಲದವರಿಗೆ ಶರೀಯತ್ ಶಿಕ್ಷಣ ನೀಡಲು ವಿಶೇಷವಾಗಿ ತರಬೇತುಗೊಂಡ ಅಧ್ಯಾಪಿಕೆಯರನ್ನು ಸಜ್ಜುಗೊಳಿಸಲಾಗಿದೆ. ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಪಿಯುಸಿಯೊಂದಿಗೆ ದಾರ್ಮಿಕ ಶಿಕ್ಷಣದಲ್ಲಿ ಹೆಚ್ಚಿನ ಅಧ್ಯಯನಕ್ಕೆ ಅನುಕೂಲವಾಗುವಂತೆ ಸಮಸ್ತ ಅಂಗೀಕೃತ ಫಾಳಿಲ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ತರಬೇತಿಗೊಂಡ ಉನ್ನತ ಮಟ್ಟದ ಅಧ್ಯಾಪಕರು, ವಿಶಾಲವಾದ ತರಗತಿ ಕೊಠಡಿಗಳು, ಆಟದ ಮೈದಾನ ಹೀಗೆ ಸುಸಜ್ಜಿತವಾದ ವ್ಯವಸ್ಥೆಯನ್ನು ಹೊಂದಿರುವ ಆದರ್ಶ್‌ ಪಿಯು ಕಾಲೇಜಿನಲ್ಲಿ ದಾಖಲಾತಿಯೂ ಆರಂಭಗೊಂಡಿದೆ. ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷರಾದ ಆಸಿಫ್ ಸೂರಲ್ಪಾಡಿ ತಿಳಿಸಿದರು.

      ಬಯಲು ಪೇಟೆ ಖತೀಬರಾದ ಶರೀಫ್ ಅರ್ಶದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿನಿಗಳಿಗೆ ಪಿಯು ವಿದ್ಯಾಭ್ಯಾಸದ ಜೊತೆ ಸಮರ್ಪಕವಾದ ಸಮಸ್ತ ಫಾಳಿಲಾ ಕೋರ್ಸ್‌ ಆರಂಭಿಸಿರುವ ಆದರ್ಶ್‌ ವಿದ್ಯಾ ಸಂಸ್ಥೆ ಜಿಲ್ಲೆಗೆ ಮಾದರಿ. ಇದು ಅನುಕರಣೀಯ. ವಿದ್ಯಾರ್ಥಿನಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. ಗುರುಪುರ ಖತೀಬರಾದ ಜಮಾಲುದ್ದೀನ್ ದಾರಿಮಿ ದುಅ ನೆರವೇರಿಸಿದರು.

      ಮುಖ್ಯ ಅತಿಥಿಗಳಾಗಿ ಶಾಹುಲ್ ಹಮೀದ್ ಹಾಜಿ ಮೆಟ್ರೋ, ಎಮ್.ಎಚ್.ಮೊಹಿಯುದ್ದೀನ್ ಹಾಜಿ ಅಡ್ಡೂರು, ಯು.ಪಿ.ಇಬ್ರಾಹಿಂ ಅಡ್ಡೂರು, ಅಬ್ದುಲ್ ಮಜೀದ್ ಸೂರಲ್ಪಾಡಿ, ರಫೀಕ್ ಮಾಸ್ಟರ್, ಸಲೀಂ ಉಡುಪಿ, ವರದಿಗಾರರಾದ ಎಮ್.ಎಸ್.ಮೊಹಮ್ಮದ್ ಮೊದಲಾದ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.‌


ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರನ್ನು ಸಂಪರ್ಕಿಸಲು ಕೋರಲಾಗಿದೆ.
8277294732,   9731569732

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ