ಟೈಲರ್ ಎಸೋಸಿಯೇಷನ್ ಮಹಾಸಭೆ: ಉಚಿತ ಹೊಲಿಗೆ ಯಂತ್ರ ವಿತರಣೆ

republicday728
republicday468
republicday234

ಪಾಣೆಮಂಗಳೂರು: ಕರ್ನಾಟಕ ರಾಜ್ಯ ಟೈಲರ್ ಎಸೋಸಿಯೇಶನ್ (ರಿ.) ಇದರ ಪಾಣೆಮಂಗಳೂರು ವಲಯ ಸಮಿತಿ ಮಹಾಸಭೆ ಹಾಗೂ ಆಸಕ್ತರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವು ಎಪ್ರಿಲ್ 10ರಂದು  ಬೆಳಗ್ಗೆ 9.30ಕ್ಕೆ ಮೆಲ್ಕಾರ್, ಬಿರ್ವ ಮಿನಿ ಸಭಾಂಗಣದಲ್ಲಿ ನಡೆಯಲಿದೆ.
      ಅಶೋಕ್ ಸಭಾಧ್ಯಕ್ಷತೆ ವಹಿಸಲಿದ್ದು, ರೋಟರಿ ಕ್ಲಬ್ ಸಂಸ್ಥೆಯ ಪ್ರಕಾಶ ಕಾರಂತ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
      ಕೆ‌.ಎಸ್.ಟಿ.ಎ. ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ಮೂರ್ತೆದಾರರ ಮಹಾಮಂಡಳದ ಅಧ್ಯಕ್ಷ ಸಂಜೀವ ಪೂಜಾರಿ, ಬಂಟ್ವಾಳ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ರಾಘವ, ಕೆ.ಎಸ್.ಟಿ.ಎ. ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಈಶ್ವರ ಕುಲಾಲ್, ಕೆ.ಎಸ್.ಟಿ.ಎ. ಬಂಟ್ವಾಳ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ನಾಗೇಶ್, ಕೋಶಾಧಿಕಾರಿ ಯಾದೇಶ್ ತುಂಬೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವುದಾಗಿ ವಲಯ ಸಮಿತಿಯ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ರಾಜೀವಿ, ಕೋಶಾಧಿಕಾರಿ  ಕೆ.ಎಸ್. ಸುರೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ