ಜಂ-ಇಯ್ಯತುಲ್ ಮುಅಲ್ಲಿಮೀನ್ ದ.ಕ.ಜಿಲ್ಲಾ ಸಮಿತಿಗೆ ನೂತನ ಸಾರಥಿಗಳು

ಮಂಗಳೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮದ್ರಸ ಅಧ್ಯಾಪಕರ ಒಕ್ಕೂಟವಾದ ಸಮಸ್ತ ಕೇರಳ ಜಂ-ಇಯ್ಯತುಲ್ ಮುಅಲ್ಲಿಮೀನ್ ದ.ಕ.ಜಿಲ್ಲಾ ಸಮಿತಿಗೆ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಗಿದ್ದು, ಶಂಸುದ್ದೀನ್ ದಾರಿಮಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
2020-2021ನೇ ಸಾಲಿನ ವಾರ್ಷಿಕ ಮಹಾಸಭೆಯು ಸಮಸ್ತ ಮುಫತ್ತಿಶರಾದ ಹನೀಫ್ ಮುಸ್ಲಿಯಾರ್‌ರವರ ಅಧ್ಯಕ್ಷತೆಯಲ್ಲಿ ಮಂಗಳೂರು ಸಮಸ್ತ ಕಚೇರಿಯಲ್ಲಿ ಮಂಗಳವಾರದಂದು ನಡೆಯಿತು. ನಿರ್ಗಮನ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ವಾರ್ಷಿಕ ವರದಿ ಮತ್ತು ಆಯ-ವ್ಯಯ ಮಂಡಿಸಿದರು.
2021-2022 ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು:
ಅಧ್ಯಕ್ಷರು: ಶಂಸುದ್ದೀನ್ ದಾರಿಮಿ ಕುಂಬ್ರ,
ಉಪಾಧ್ಯಕ್ಷರು: ಸಿದ್ಧೀಕ್ ಫೈಝಿ ಆತೂರು ಹಾಗೂ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ,
ಪ್ರ. ಕಾರ್ಯದರ್ಶಿ: ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ
ಸಹ ಕಾರ್ಯದರ್ಶಿ: ಕರೀಂ ದಾರಿಮಿ ಪುತ್ತೂರು ಹಾಗೂ ಶರೀಫ್ ಮದನಿ ಸಜಿಪ
ಕೋಶಾಧಿಕಾರಿ: ಇಬ್ರಾಹಿಂ ದಾರಿಮಿ ಕಡಬ
ಪರೀಕ್ಷಾ ಮಂಡಳಿ ಚೇರ್ಮೆನ್: ಸಿ.ಎಚ್. ಇಬ್ರಾಹಿಂ ಮುಸ್ಲಿಯಾರ್ ಸಾಲೆತ್ತೂರು
ಐಟಿ ಕೋಡಿನೇಟರ್: ಹಂಝ ಫೈಝಿ ಉಡುಪಿ,
SKSBV ಚೇರ್ಮೆನ್: ಮುಹಮ್ಮದ್ ರಫೀಕ್ ಫೈಝಿ ಮಂಗಳೂರು
SKSBV ಕನ್ವೀನರ್: ಅಶ್ರಫ್ ಹನೀಫಿ ಉಪ್ಪಿನಂಗಡಿ
ಕುರುನ್ನುಗಳ್ ಉಸ್ತುವಾರಿ: ಗಫೂರ್ ಹನೀಫಿ ವಿಟ್ಲ ಹಾಗೂ ಸಿರಾಜುದ್ದೀನ್ ಮದನಿ ಬಂಟ್ವಾಳ
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ