‌ಜಸ್ಟೀಸ್‌ ಫಾರ್ ಸಬಿಯಾ ಸೈಫಿ: ಅತ್ಯಂತ ಕ್ರೂರವಾಗಿ ಕೊಲೆಗೀಡಾದ ದೆಹಲಿ ಮಹಿಳಾ ಪೋಲೀಸ್

‌ಜಸ್ಟೀಸ್‌ ಫಾರ್ ಸಬಿಯಾ ಸೈಫಿ: ಅತ್ಯಂತ ಕ್ರೂರವಾಗಿ ಕೊಲೆಗೀಡಾದ ದೆಹಲಿ ಮಹಿಳಾ ಪೋಲೀಸ್

ನವದೆಹಲಿ: ಮಾನವೀಯತೆಯನ್ನೇ ನಾಚಿಸುವಂತಹ ಮತ್ತೊಂದು ಬರ್ಬರ ಕೃತ್ಯ ಭಾರತದ ರಾಜಧಾನಿ ದೆಹಲಿಯಿಂದ ತಡವಾಗಿ ವರದಿಯಾಗಿದೆ.

      ದೆಹಲಿ ಪೋಲೀಸ್‌ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಬೀಹ ಸೈಫಿ ಎಂಬ 21 ವರ್ಷದ ಯುವತಿಯನ್ನು ಗ್ಯಾಂಗ್‌ ರೇಪ್ ಮಾಡಿರುವುದಲ್ಲದೆ ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ. ದೆಹಲಿಯ ಸಂಗಮ್‌ ವಿಹಾರಿ ನಿವಾಸಿಯಾದ ಈಕೆ 4 ತಿಂಗಳ ಹಿಂದಷ್ಟೇ ದೆಹಲಿಯ ಪೋಲೀಸ್ ನಾಗರೀಕ ರಕ್ಷಣಾ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಆಕೆಯ ಮೃತ ದೇಹವು ಹರ್ಯಾಣದ ಫರೀದಾಬಾದ್‌ನಲ್ಲಿ ಸಿಕ್ಕಿದೆ.

      ಆಗಸ್ಟ್ 26 ರಂದು ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹೊರಟ ಸಬಿಯಾ ಸಂಜೆ 8 ಗಂಟೆಯಾದರೂ ದೆಹಲಿಯ ಸಂಗಮ್ ವಿಹಾರದಲ್ಲಿರುವ ತನ್ನ ಮನೆಗೆ ಹಿಂತಿರುಗದಿದ್ದಾಗ ಕುಟುಂಬಸ್ಥರು ಆಕೆಗೆ ಕರೆ ಮಾಡಿದರು. ಆಕೆಯ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಮನೆಯವರು ಗಾಬರಿಯಿಂದ ಪೋಲೀಸ್‌ ಠಾಣೆಗೆ ಧಾವಿಸಿದರು. ಅಲ್ಲಿ ಆಕೆ ಇರಲಿಲ್ಲ. ನಂತರ ಜಿಲ್ಲಾಧಿಕಾರಿಗಳ ಕಛೇರಿ, ಹೀಗೆ ಎಲ್ಲೆಡೆ ಹುಡುಕಿದರು. ಆದರೆ ಎಲ್ಲಿಯೂ ಯಾವುದೇ ಸುಳಿವು ಸಿಗಲಿಲ್ಲ. ಕೊನೆಗೆ ಸಬಿಯಾಳನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂತು. ಅದೂ ಕೂಡ ಬಹಳಷ್ಟು ಕ್ರೂರವಾಗಿ. ದೆಹಲಿ ಪೊಲೀಸರಿಂದ ಮಾಹಿತಿ ಪಡೆದ ಫರೀದಾಬಾದ್ ಪೊಲೀಸರು ರಸ್ತೆಯಿಂದ 10-15 ಅಡಿಗಳಷ್ಟು ದೂರವಿರುವಿರುವ ಪೊದೆಯಲ್ಲಿ ರಬಿಯಾ ಸೈಫಿಯ ಶವವನ್ನು ಪತ್ತೆ ಹಚ್ಚಿದ್ದಾರೆ.

      ಸಬಿಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸಹೋದರ ಹೇಳಿಕೊಂಡಂತೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮುಖ, ಅಂಗೈ ಸೇರಿದಂತೆ ಆಕೆಯ ದೇಹದ ಸುಮಾರು 50 ಕಡೆಗಳಲ್ಲಿ ಚಾಕುವಿನಿಂದ ಚುಚ್ಚಲಾಗಿದೆ. ಆಕೆಯ ಎರಡೂ ಸ್ತನಗಳನ್ನು ಕತ್ತರಿಸಿ ತೆಗೆಯಲಾಗಿದೆ. ಆಕೆಯ ಗುಪ್ತಾಂಗಗಳನ್ನು ಕುಯ್ಯಲಾಗಿದೆ. ಅತ್ಯಂತ ಭೀಕರ ರೀತಿಯಲ್ಲಿ ಕೊಲೆ ಮಾಡಲಾಗಿದೆ.

      ಇಷ್ಟೆಲ್ಲಾ ನಡೆದಿದ್ದರೂ ಇದೊಂದು ದೊಡ್ಡ ಸುದ್ದಿಯಾಗಲಿಲ್ಲ. ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆಯಲಿಲ್ಲ. ಇಲ್ಲೂ ಮೃತ ಪಟ್ಟಾಕೆಯ ಜಾತಿ ಮುಂದೆ ಬಂತೇ ಎಂಬುದು ಸಾಮಾಜಿಕ ಜಾಲ ತಾಣಗಲ್ಲಿ ನೆಟ್ಟಿಗರು ಕೇಳುತ್ತಿರುವ ಪ್ರಶ್ನೆ. ದೆಹಲಿಯ ನಿರ್ಭಯಾ ಕೊಲೆ, ಇತ್ತೀಚೆಗಿನ ಮೈಸೂರು ಪ್ರಕರಣ ಹೀಗೆ ಈ ಹಿಂದೆ ನಡೆದ ಪ್ರಕರಣಗಳಿಗೆ ಹೋಲಿಸಿದರೆ ಈ ಘಟನೆ ದೊಡ್ಡ ಸುದ್ದಿಯಾಗಲೇ ಇಲ್ಲ. ಇದೀಗ ನಿಧಾನವಾಗಿ ಜನ ಸಾಮಾನ್ಯರು ಜಸ್ಟೀಸ್‌ ಫಾರ್‌ ಸಬಿಯಾ ಎಂದು ಬೀದಿಗಿಳಿದಿದ್ದಾರೆ. ಸಾಮಾಜಿಕ ಜಾಲ ತಾಣಗಳ ಮೂಲಕವೂ ಹೋರಾಟಕ್ಕೆ ಕಿಚ್ಚು ಹಚ್ಚಲಾಗುತ್ತಿದೆ.

      ಪೊಲೀಸರ ಪ್ರಕಾರ, ದೆಹಲಿಯ ಸಿವಿಲ್ ಡಿಫೆನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ರಬಿಯಾ ಸೈಫಿ ಎಂಬ ಯುವತಿ ಫರೀದಾಬಾದ್‌ನ ಸೂರಜ್‌ಕುಂಡ್-ಪಾಲಿ ರಸ್ತೆಯಲ್ಲಿ ಕತ್ತು ಸೀಳಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಘಟನೆಯ ನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜೈತ್‌ಪುರ ನಿವಾಸಿ ನಿಜಾಮುದ್ದೀನ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ನಿಜಾಮುದ್ದೀನ್ ತನ್ನ ಪತ್ನಿ ರಾಬಿಯಾಳನ್ನು ಕೊಂದು ಶವವನ್ನು ಸೂರಜ್ಕುಂಡ್ ಪಾಲಿ ರಸ್ತೆಗೆ ಎಸೆದಿರುವುದಾಗಿ ಹೇಳಿ ಶರಣಾಗಿದ್ದಾನೆ. ಮತ್ತೊಂದೆಡೆ, ಮೃತ ಸಬಿಯಾಳ ತಂದೆ ತನ್ನ ಮಗಳಿಗೆ ಮದುವೆಯೇ ಆಗಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿ ನಿಜಾಮುದ್ದೀನ್ ಸಿವಿಲ್ ಡಿಫೆನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದನೆಂದು ಹೇಳಲಾಗಿದೆ. ಈತನೇ ಸಬಿಯಾ ಸೈಫಿ ಸಿವಿಲ್ ಡಿಫೆನ್ಸ್‌ನಲ್ಲಿ ಕೆಲಸ ಪಡೆಯಲು ಸಹಾಯ ಮಾಡಿದ್ದನೆಂದೂ ಹೇಳಲಾಗಿದೆ. ಅಂದಿನಿಂದ ಇವರಿಬ್ಬರೂ ಒಬ್ಬರಿಗೊಬ್ಬರು ಹತ್ತಿರವಾಗಿದ್ದರು. ಮತ್ತು ನಿಜಾಮುದ್ದೀನ್ ಸಬಿಯಾ ಮನೆಗೂ ಭೇಟಿ ನೀಡುತ್ತಿದ್ದ.

      ಏನೇ ಆದರೂ ಈ ಕ್ರೂರಿಗೆ ಶಿಕ್ಷೆಯಾಗಲೇ ಬೇಕು. ಮನುಷ್ಯತ್ವವನ್ನೇ ಮರೆತ ಈತನ ಕೃತ್ಯಕ್ಕೆ ನಾಗರೀಕ ಸಮಾಜ ತಲೆ ತಗಿಸುವಂತಾಗಿದೆ. ಆರೋಪಿಗಳಿಗೆ ಗರಿಷ್ಠ ಮಟ್ಟದ ಕಠಿಣ ಶಿಕ್ಷೆಯಾಗುವಂತಾಗಲು ನಾಗರೀಕ ಸಮಾಜ ಒಕ್ಕೊರಳಿನಿಂದ ಧ್ವನಿ ಎತ್ತಬೆಕಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ