ಜೆಸಿಐ ಸುಳ್ಯ ನಗರ ಸಮಿತಿಯಿಂದ ಮಹಿಳಾ ದಿನಾಚರಣೆ

ಜೆಸಿಐ ಸುಳ್ಯ ನಗರ ಸಮಿತಿಯಿಂದ ಮಹಿಳಾ ದಿನಾಚರಣೆ
republicday728
republicday468
republicday234

ಸುಳ್ಯ: ಜೆಸಿಐ ಸುಳ್ಯ ನಗರ ಸಮಿತಿ ವತಿಯಿಂದ ಮಹಿಳಾ ದಿನಾಚರಣೆಯನ್ನು ಸುಳ್ಯ ಗಾಂಧಿ ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು  ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶೀತಲ್ ವಹಿಸಿದ್ದರು.

     ಮುಖ್ಯ ಅತಿಥಿಯಾಗಿ ದೈಹಿಕ ಶಿಕ್ಷಕಿ ಪದ್ಮಿನಿ,  ಪ್ರಾಂಶುಪಾಲರಾದ ಅಬ್ದುಲ್ ಸಮದ್  ಮತ್ತು ಜೆಸಿಐ ಸುಳ್ಯ ನಗರ ಸಮಿತಿಯ ಅಧ್ಯಕ್ಷ ಜೆಸಿ ಚಂದ್ರಶೇಖರ ಕನಕಮಜಲು, ಸ್ಥಾಪಕರಾದ ಜೆಸಿ ಮನಮೋಹನ್ ಬಳ್ಳಡ್ಕ, ಉಪಾಧ್ಯಕ್ಷರಾದ ಜೆಸಿ ರಂಜಿತ್ ಪಿಜೆ ಮುಂತಾದವರು ವೇದಿಕೆಯಲ್ಲಿ  ಉಪಸ್ಥಿತರಿದ್ದರು.
     ಕರಾಟೆ ಶಿಕ್ಷಕರಾದ ಜೆಸಿಐ ಸುಳ್ಯ ನಗರ ಸಮಿತಿ ಅಧ್ಯಕ್ಷ ಚಂದ್ರಶೇಖರ ಕನಕಮಜಲು ಮಹಿಳಾ ಸ್ವರಕ್ಷಣೆ ಬಗ್ಗೆ ವಿದ್ಯಾರ್ಥಿನಿಯರಿಗೆ ತರಬೇತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಶಾಲಾ ಅಧ್ಯಾಪಕರು ವಿದ್ಯಾರ್ಥಿನಿಯರು ಜೆಸೀಐ  ಸದಸ್ಯರುಗಳು ಉಪಸ್ಥಿತರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ