ಜೀವದ ಹಂಗು ತೊರೆದು ಮಗುವನ್ನು ಕಾಪಾಡಿದ: ಭಯಾನಕ ಆ ದೃಶ್ಯ

republicday728
republicday468
republicday234

ಮುಂಬೈ: ತನ್ನ ಜೀವವನ್ನು ಪಣಕ್ಕಿಟ್ಟು ಮಗುವನ್ನು ರಕ್ಷಿಸಿ ಶೌರ್ಯ ತೋರಿದ ರೈಲ್ವೆ ಸಿಬ್ಬಂದಿ ಮಯೂರ್ ಶೆಲ್ಕೆ ಅವರು ಈಗ ಅದೇ ಮಗುವಿನ ಶಿಕ್ಷಣಕ್ಕೂ ನೆರವಾಗಲು ಮುಂದಾಗಿದ್ದಾರೆ .
      ಏಪ್ರಿಲ್ 17 ರಂದು ವಾಂಗಾಣಿ ನಿಲ್ದಾಣದಲ್ಲಿ ರೈಲು ಹಳಿಗಳ ಮೇಲೆ ಬಿದ್ದಿದ್ದ ಮಗುವನ್ನು ಮಯೂರ್ ರಕ್ಷಿಸಿದ್ದರು. ದೃಷ್ಟಿ ದೋಷ ಇರುವ ತನ್ನ ತಾಯಿ ಜತೆ ತೆರಳುತ್ತಿದ್ದ ಸಂದರ್ಭದಲ್ಲಿ ಮಗು ಕಾಲು ಜಾರಿ ಹಳಿಗಳ ಮೇಲೆ ಬಿದ್ದಿತ್ತು. ಇದೇ ಸಂದರ್ಭದಲ್ಲಿ ಅತಿ ವೇಗದಲ್ಲಿ ಉದ್ಯಾನ ಎಕ್ಸ್ಪ್ರೆಸ್ ಅದೇ ಹಳಿಗಳ ಬರುತ್ತಿತ್ತು. ಹಳಿಗಲ ಮೇಲೆ ಬಿದ್ದ ಮಗುವನ್ನು ಕಂಡ ಮಯೂರ್ ವೇಗದಲ್ಲಿ ಧಾವಿಸಿ ಬಂದು, ಮಗುವನ್ನು ರಕ್ಷಿಸಿ ತಾವೂ ಪಾರಾಗಿದ್ದರು , 7 ರಿಂದ 8 ಸೆಕೆಂಡ್ಗಳ ಅವಧಿಯಲ್ಲಿ ನಡೆದ ಈ ಸಾಹಸ ಕಾರ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. (ಮೇಲಿನ ವೀಡಿಯೋ ನೋಡಿ)

   ತಮ್ಮ ಸಾಹಸ ಕಾರ್ಯಕ್ಕಾಗಿ ರೈಲ್ವೆ ಇಲಾಖೆ ಸೇರಿದಂತೆ ಹಲವು ಸಂಘ, ಸಂಸ್ಥೆಗಳು ನೀಡಿರುವ ಬಹುಮಾನದಲ್ಲಿನ ಅರ್ಧ ಮೊತ್ತವನ್ನು ಮಗುವಿನ ಶಿಕ್ಷಣಕ್ಕೆ ನೀಡುವುದಾಗಿ ಮಯೂರ್ ಮಯೂರ್ ಶೆಲ್ಕೆ ತಿಳಿಸಿದ್ದಾರೆ . ರೈಲ್ವೆ ಸಚಿವಾಲಯ ಮಯೂರ್ ಅವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದೆ. ಇದರಲ್ಲಿನ 25 ಸಾವಿರಗಳನ್ನು ತಾನು ರಕ್ಷಿಸಿದ ಮಗು ಸಾಹಿಲ್ ಶಿರಾಸತ್ಗೆ ನೀಡುವುದಾಗಿ ಮಯೂರ್ ಈಗಾಗಲೇ ತಿಳಿಸಿದ್ದಾರೆ.
ಮಗುವಿನ ಕುಟುಂಬದವರು ಬಡವರು ಎನ್ನುವುದು ತಿಳಿದು ಬಂದಿದೆ . ಮಗುವಿಗೆ ಶಿಕ್ಷಣ ನೀಡಲು ಕುಟುಂಬಕ್ಕೆ ಸಾಧ್ಯವಾಗುವುದಿಲ್ಲ . ನಾನು ಆ ಮಗುವನ್ನು ರಕ್ಷಿಸಿದ್ದೇನೆ. ಹೀಗಾಗಿ, ಬಹುಮಾನದ ಅರ್ಧ ಮೊತ್ತವನ್ನು ಮಗುವಿನ ಭವಿಷ್ಯಕ್ಕಾಗಿ ನೀಡುತ್ತಿದ್ದೇನೆ  ಎಂದು ಮಯೂರ್ ತಿಳಿಸಿದ್ದಾರೆ.
      ಕಾರ್ಪೊರೇಟ್ ಕಂಪನಿಯೊಂದು ಮಯೂರ್ ಅವರಿಗೆ ಮೋಟಾರ್ ಸೈಕಲ್ ಅನ್ನು ಬಹುಮಾನವಾಗಿ ನೀಡಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ