ಜಮ್ಮು ಕಾಶ್ಮೀರಕ್ಕೆ ಐತಿಹಾಸಿಕ ದಿನ: ಪ್ರಧಾನಿ

ಜಮ್ಮು ಕಾಶ್ಮೀರಕ್ಕೆ ಐತಿಹಾಸಿಕ ದಿನ: ಪ್ರಧಾನಿ
republicday728
republicday468
republicday234

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಎಲ್ಲ ಜನರಿಗೂ ಆಯುಷ್ಮಾನ್ ಭಾರತ್ ಆರೋಗ್ಯ ಸೇವೆ ಯೋಜನೆಯನ್ನು ವಿಸ್ತರಿಸುವ ನಿರ್ಧಾರವನ್ನು ಪ್ರಧಾನಿ ಶನಿವಾರ ಪ್ರಕಟಿಸಿದರು. ಕೇಂದ್ರಾಡಳಿತ ಪ್ರದೇಶದ ಪ್ರತಿಯೊಬ್ಬರೂ ₹ 5 ಲಕ್ಷ ಮೊತ್ತದ ಆರೋಗ್ಯ ವಿಮೆಗೆ ಅರ್ಹರಾಗಿದ್ದಾರೆ. ಇದು ಈ ಭಾಗಕ್ಕೆ ಐತಿಹಾಸಿಕ ದಿನ ಎಂದು ಪ್ರಧಾನಿ ಹೇಳಿದರು.
     ಜಮ್ಮು ಮತ್ತು ಕಾಶ್ಮೀರದ 6 ಲಕ್ಷ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಗೆ ಸೇರಿದ ವ್ಯಕ್ತಿಯು ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ದೇಶದ ಎಲ್ಲಿ ಬೇಕಾದರೂ ಆರೋಗ್ಯ ಸೇವೆ ಪಡೆಯಬಹುದು. ಬಂಗಾಳ ರಾಜ್ಯವು ಯೋಜನೆಗೆ ಸೇರಿಕೊಂಡಿಲ್ಲದ ಕಾರಣ ಅಲ್ಲಿ ಆಯುಷ್ಮಾನ್ ಸೇವೆ ಲಭ್ಯವಿರುವುದಿಲ್ಲ.
     ಕೋವಿಡ್ ಅವಧಿಯಲ್ಲಿ ಕಣಿವೆ ರಾಜ್ಯದಲ್ಲಿ 18 ಲಕ್ಷ ಎಲ್‌ಪಿಜಿ ಸಿಲಿಂಡರ್ ವಿತರಿಸಲಾಗಿದೆ. ಸ್ವಚ್ಛ ಭಾರತ್ ಅಭಿಯಾನದಡಿ 10 ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಐಐಟಿ ಮತ್ತು ಐಐಎಂ ಸ್ಥಾಪನೆಯಿಂದ ಗುಣಮಟ್ಟದ ಉನ್ನತ ಶಿಕ್ಷಣ ಸಿಗಲಿದೆ. ಎರಡು ಏಮ್ಸ್ ಮತ್ತು ಎರಡು ಕ್ಯಾನ್ಸರ್ ಸಂಸ್ಥೆಗಳನ್ನು ಸಹ ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ