ಚೀನಾದಲ್ಲಿ ತೀವೃವಾಗಿ ಹರಡುತ್ತಿರುವ ಕೊರೋನಾ ಡೆಲ್ಟಾ ರೂಪಾಂತರ: ಕಠಿಣ ನಿರ್ಬಂಧ ಜಾರಿ

ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರದಿಂದ ಉಂಟಾಗುವ ಸೋಂಕು ಚೀನಾ ಮತ್ತು ಆಸ್ಟ್ರೇಲಿಯಾದ ಕೆಲವು ಕಡೆಗಳಲ್ಲಿ ಹೆಚ್ಚಾಗಿ ಹರಡುತ್ತಿದೆ.. ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಎರಡೂ ದೇಶಗಳು ಕಠಿಣ ನಿರ್ಬಂಧಗಳನ್ನು ವಿಧಿಸಲು ಮುಂದಾಗಿವೆ.

ಚೀನಾದಲ್ಲಿ ತೀವೃವಾಗಿ ಹರಡುತ್ತಿರುವ ಕೊರೋನಾ ಡೆಲ್ಟಾ ರೂಪಾಂತರ: ಕಠಿಣ ನಿರ್ಬಂಧ ಜಾರಿ

ಬೀಜಿಂಗ್: ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರದಿಂದ ಉಂಟಾಗುವ ಸೋಂಕು ಚೀನಾ ಮತ್ತು ಆಸ್ಟ್ರೇಲಿಯಾದ ಕೆಲವು ಕಡೆಗಳಲ್ಲಿ ಹೆಚ್ಚಾಗಿ ಹರಡುತ್ತಿದೆ.. ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಎರಡೂ ದೇಶಗಳು ಕಠಿಣ ನಿರ್ಬಂಧಗಳನ್ನು ವಿಧಿಸಲು ಮುಂದಾಗಿವೆ.

      ಡೆಲ್ಟಾ ರೂಪಾಂತರವು ಮಾರಕವಾಗಿ ಪರಿವರ್ತನೆಯಾಗುವ ಮೊದಲು ಪ್ರಸರಣ ತಡೆಯುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಡಬ್ಲ್ಯುಎಚ್‌ಒ ಎಚ್ಚರಿಕೆ ನೀಡಿತ್ತು. ಡೆಲ್ಟಾ ರೂಪಾಂತರದಿಂದಾಗಿ ವಿಶ್ವದಾದ್ಯಂತ ಕಳೆದ ನಾಲ್ಕು ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಮೊದಲು ಭಾರತದಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ಡೆಲ್ಟಾ ರೂಪಾಂತರ ಈಗಾಗಲೇ 132 ದೇಶಗಳಲ್ಲಿ ಪತ್ತೆಯಾಗಿದೆ.

      ಚೀನಾದ ಫುಜಿಯಾನ್‌ ಮತ್ತು ಚಾಂಗ್‌ಕ್ವಿಂಗ್‌ನಲ್ಲಿ ಸೋಂಕು ಹರಡುವಿಕೆ ಹೆಚ್ಚಾಗಿದೆ. ನಾನ್‌ಜಿಂಗ್ ನಗರದಲ್ಲಿ 200ಕ್ಕೂ ಹೆಚ್ಚು ಡೆಲ್ಟಾ ಪ್ರಕರಣಗಳು ಪತ್ತೆಯಾಗಿವೆ. ಆರಂಭದಲ್ಲಿ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 9 ಮಂದಿ ಸ್ವಚ್ಛತಾ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. 10 ಲಕ್ಷಕ್ಕೂ ಹೆಚ್ಚು ಜನರನ್ನು ಲಾಕ್‌ಡೌನ್‌ಗೆ ಒಳಪಡಿಸುವ ಮೂಲಕ ಚೀನಾ ಸರ್ಕಾರವು ತ್ವರಿತವಾಗಿ ಹರಡಬಲ್ಲ ಡೆಲ್ಟಾ ರೂಪಾಂತರ ಪ್ರಸರಣ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಸಾಮೂಹಿಕ ಸೋಂಕು ಪತ್ತೆ ಪರೀಕ್ಷೆ ಅಭಿಯಾನಗಳನ್ನೂ ಆರಂಭಿಸಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ