ಗೌರವ ಡಾಕ್ಟರೇಟ್ ಪಡೆದ ಸಾಧಕರಿಗೆ ಹಝ್ರತ್ ಸಾದಾತ್ ವೃದ್ಧಾಶ್ರಮದಿಂದ ಸನ್ಮಾನ

ಗೌರವ ಡಾಕ್ಟರೇಟ್ ಪಡೆದ ಸಾಧಕರಿಗೆ ಹಝ್ರತ್ ಸಾದಾತ್ ವೃದ್ಧಾಶ್ರಮದಿಂದ ಸನ್ಮಾನ
ಗೌರವ ಡಾಕ್ಟರೇಟ್ ಪಡೆದ ಸಾಧಕರಿಗೆ ಹಝ್ರತ್ ಸಾದಾತ್ ವೃದ್ಧಾಶ್ರಮದಿಂದ ಸನ್ಮಾನ

ಕಾಪು: ಅನಾಥ ವೃದ್ಧರ ಸೇವೆ ಸ್ವರ್ಗದ ಕವಾಟವನ್ನು ತೆರೆದಂತೆ. ಅನಾಥ ವೃದ್ಧರ ಸಂರಕ್ಷಣೆ ನಮ್ಮೆಲ್ಲರ ಹಕ್ಕು. ಅದಕ್ಕಾಗಿ ನಾವು ಎಲ್ಲಾ ತ್ಯಾಗಕ್ಕೂ ಸಿದ್ಧ ಎಂದು ಖ್ಯಾತ ಸಮಾಜಸೇವಕ ಹೈದರ್ ಪರ್ತಿಪ್ಪಾಡಿ ಹೇಳಿದರು. ಹಿರಿಯರನ್ನು ಗೌರವಿಸುವುದು ಮತ್ತು ಕಿರಿಯರನ್ನು ಪ್ರೀತಿಸುವುದು ಪ್ರವಾದಿ (ಸ.ಅ.) ರವರ ಚರ್ಯೆ ಕೂಡಾ ಆಗಿದೆ ಎಂದು ಹೇಳಿದರು. ಅವರು ಇತ್ತೀಚೆಗೆ ಉಡುಪಿ ಜಿಲ್ಲೆಯ ಕಾಪು ಮಲ್ಲಾರ್ ಕೋಟೆ ಎಂಬಲ್ಲಿ ಹಝ್ರತ್ ಸಾದಾತ್ ವೃದ್ಧಾಶ್ರಮದಲ್ಲಿ ನಡೆದ ನಿಸ್ವಾರ್ಥ ನಾಯಕರ ಸಂಗಮ,ದಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತಾಡುತ್ತಿದ್ದರು.

  ಕಳೆದ ಐದಾರು ವರ್ಷಗಳಿಂದ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಕೂಲಿ ಕಾರ್ಮಿಕ ಮುಹಮ್ಮದ್ ಕಾಕ ನಡೆಸುತ್ತಿದ್ದ ವೃದ್ಧಾಶ್ರಮದ ವಿಷಯ ತಿಳಿದು ಮಂಗಳೂರಿನ ಕೆಲ ಹೃದಯವಂತರು ಖ್ಯಾತ ಸಮಾಜ ಸೇವಕ, ರಾಜಕಾರಣಿ ಹೈದರ್ ಪರ್ತಿಪ್ಪಾಡಿಯವರ ನೇತೃತ್ವದಲ್ಲಿ ಅಭಿವೃದ್ಧಿ ಸಮಿತಿಯನ್ನು ರಚಿಸಿ ವೃದ್ಧಾಶ್ರಮದ ಅಭಿವೃದ್ಧಿಗೆ ಹಗಲು - ರಾತ್ರಿ ಶ್ರಮಿಸುತ್ತಿದ್ದಾರೆ. ಮುಹಮ್ಮದ್ ಕಾಕ ಊರಿನ ಕೆಲ ಯುವಕರನ್ನು ಸೇರಿಸಿಕೊಂಡು ಕಳೆದ ನಾಲ್ಕೈದು ವರ್ಷಗಳಿಂದ ಈ ವೃದ್ದಾಶ್ರಮವನ್ನು ನಡೆಸುತ್ತಿದ್ದು, ತಮ್ಮ ಸಂಪಾದನೆಯ ಒಂದು ಭಾಗವನ್ನೇ ಈ ಅನಾಥ ವೃದ್ಧರ ಸಂರಕ್ಷಣೆಗಾಗಿ ವಿನಿಯೋಗಿಸುತ್ತಿದ್ದರು. ವಿಷಯ ತಿಳಿದ ಇಕ್ಬಾಲ್ ಬಾಳಿಲ, ಹನೀಫ್ ಪಾಜಪಲ್ಲ, ನಿಸಾರ್ A.K. ಜಲೀಲ್ F.A. ಮುಹಮ್ಮದ್ ಕುಕ್ಕುವಳ್ಳಿ ಮುಂತಾದವರು ಹೈದರ್ ಪರ್ತಿಪ್ಪಾಡಿಯವರ ಅಧ್ಹಕ್ಷತೆಯಲ್ಲಿ ಅಭಿವೃದ್ಧಿ ಸಮಿತಿಯನ್ನು ರಚಿಸಿಕೊಂಡು ಆಶ್ರಮಕ್ಕೆ ಸುಸಜ್ಜಿತ ಕಟ್ಟಡ ಹಾಗೂ ಮಸೀದಿ ನಿರ್ಮಾಣದ ಪ್ರಯತ್ನಕ್ಕೆ ಧುಮುಕಿದ್ದಾರೆ. ನಿಸ್ವಾರ್ಥ ನಾಯಕರ ಸಂಗಮ ಎಂಬ ಈ ಕಾರ್ಯಕ್ರಮದಲ್ಲಿ ಬೊಳ್ಳೂರು ಉಸ್ತಾದ್, ಮಂಗಳೂರು ಶಾಸಕ ಯು.ಟಿ. ಖಾದರ್, ಮಂಗಳೂರು ಉತ್ತರ. ಶಾಸಕ ಮೊಯ್ದಿನ್ ಬಾವ, ಮಾಜಿ ಪೋಲೀಸ್ ಅಧಿಕಾರಿ, ರಾಜಕಾರಣಿ ಜಿ.ಎ.ಬಾವ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಯಾಸಿನ್ ಮಲ್ಪೆ, ಬೆಂಗಳೂರಿನ ಖ್ಯಾತ ಉದ್ಯಮಿ ಡಾಕ್ಟರ್ ಉಮರ್ ಹಾಜಿ, ನೂಮಾನ್ ಶೇಖ್ ಮುಹಮ್ಮದ್‌ ಮುಂತಾದ ಸುಮಾರು 50 ಮಂದಿ ಆಯ್ದ ಗಣ್ಯರು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಹೈದರ್ ಪರ್ತಿಪ್ಪಾಡಿ ವಹಿಸಿಕೊಂಡಿದ್ದರೆ ಬೊಳ್ಳೂರು ಉಸ್ತಾದ್ ಆರಂಭದಲ್ಲಿ ದುಆ ನೆರವೇರಿಸಿ ಶುಭ ಹಾರೈಸಿದರು. ಮುಹಮ್ಮದ್ ಕುಕ್ಕುವಳ್ಳಿ ಸ್ವಾಗತಿಸಿದರು.

ಡಾಕ್ಟರೇಟ್ ಪಡೆದ ಸಾಧಕರಿಗೆ ಸನ್ಮಾನ:

ತಮ್ಮ ಸಮಾಜ ಸೇವೆಗಾಗಿ ಗುರುತಿಸಲ್ಪಟ್ಟು ಗೌರವ ಡಾಕ್ಟೃರೇಟ್ ಪಡೆದ ಮಂಗಳೂರು ಉತ್ತರ  ಮಾಜಿ ಶಾಸಕ ಡಾಕ್ಟರ್ ಮೊಯ್ದಿನ್ ಬಾವ ಹಾಗೂ ಬೆಂಗಳೂರಿನ ಖ್ಯಾತ ಉದ್ಯಮಿ ಡಾಕ್ಟರ್ ಉಮರ್ ಹಾಜಿ ಇವರುಗಳನ್ನು ಕಾಪುವಿನ ಹಝ್ರತ್ ಸಾದಾತ್ ವೃದ್ಧಾಶ್ರಮದ ಪರವಾಗಿ ಸನ್ಮಾನಿಸಲಾಯಿತು.

  ಕಾಪುವಿನಲ್ಲಿ ಕೂಲಿ ಕಾರ್ಮಿಕನೋರ್ವರು ನಡೆಸುತ್ತಿರು ಮುಸ್ಲಿಂ ವೃದ್ದಾಶ್ರಮದ ಅಭಿವೃದ್ದಿ ಸಮಿತಿಯು ಆಯೋಜಿಸಿದ ಕಾರ್ಯಕ್ರಮದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು.

 

ಡಾಕ್ಟರ್ ಮೊಯ್ದಿನ್ ಬಾವ:

ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವ ಅವರಿಗೆ ಇತ್ತೀಚೆಗೆ ದುಬಾಯಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ದುಬಾಯಿ ಶೇಖ್ ಸುಹೈಲ್ ಅಲ್-ಜರೂನಿ ಸಮ್ಮುಖದಲ್ಲಿ ಅಮೇರಿಕಾದ ಬ್ರಿಯಾನ್ ಐಕೆರ್ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದ್ದರು. ಯುರೋಪಿಯನ್ ಯುನಿವರ್ಸಿಟಿ ವಿಶ್ವದ 11 ಮಂದಿ ಸಾಧಕರನ್ನು ಗುರುತಿಸಿ ಈ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿತ್ತು. ಭಾರತದಿಂದ ಆಯ್ಕೆಯಾದ ಇಬ್ಬರಲ್ಲಿ ಮೊಯ್ದಿನ್ ಬಾವ ಒಬ್ಬರಾಗಿದ್ದಾರೆ.  ಭೇದ ಭಾವ ಇಲ್ಲದೆ ಸಮಾಜದ ಎಲ್ಲ ಜನರಿಗಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್‌ ಸಲ್ಲಿಸಲಾಗಿತ್ತು. ಇವರ ಘನ ಸಾಧನೆಯನ್ನು ಮೆಚ್ಚಿದ ಹಝ್ರತ್ ಸಾದಾತ್ ವೃದ್ಧಾಶ್ರಮದ ಅಭಿವೃದ್ಧಿ ಸಮಿತಿಯು ನಿಸ್ವಾರ್ಥ ನಾಯಕರ ಸಂಗಮ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಗೌರವ ಸಲ್ಲಿಸಿತು.

 

ಡಾಕ್ಟರ್ ಉಮರ್ ಹಾಜಿ:

ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಎಳೆಯದರಲ್ಲೇ ಬೆಂಗಳೂರು ಸೇರಿ ತನ್ನ ಕಿರು ವಯಸ್ಸಿನಲ್ಲೇ ಮೇರು ಸಾಧನೆಯನ್ನು ಮಾಡಿದವರು. ಉದ್ಯಮ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಡಾಕ್ಟರ್ ಉಮರ್ ಹಾಜಿ ಹಮ್ಮು-ಬಿಮ್ಮಗಳಿಲ್ಲದೆ ಎಲ್ಲರ ಜೊತೆ ಸರಳವಾಗಿ ಬೆರೆಯುವವರು. ಸಮಾಜದಲ್ಲಿ ಜನರ ಕಷ್ಟಗಳಿಗೆ ಶೀಘ್ರ ಸ್ಪಂದಿಸುವವರು. ದಿಟ್ಟ, ನೇರ ನಡೆ-ನುಡಿಯ ಡಾಕ್ಟರ್ ಉಮರ್ ಹಾಜಿ ಅಖಿಲ ಭಾರತ ಮಾನವ ಹಕ್ಕು ಹೋರಾಟ ಸಮಿತಿಯ ಉಪಾಧ್ಯಕ್ಷರೂ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ರಾಜ್ಯ ಸಮಿತಿಯ ಗೌರವಾಧ್ಯಕ್ಷರೂ ಆಗಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿತ್ತು. ಇವರ ಈ ಘನ ಸಾದನೆಯನ್ನು ಮೆಚ್ಚಿದ ಹಝ್ರತ್ ಸಾದಾತ್ ವೃದ್ಧಾಶ್ರಮ ಅಭಿವೃದ್ಧಿ ಸಮಿತಿಯು ಶಾಲು ಹೊದಿಸಿ ಗೌರವ ಸಲ್ಲಿಸಿತು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ