ಗುಪ್ತಾಂಗಕ್ಕೆ ಬಿದಿರು ತೂರಿಸಿ ಪೈಶಾಚಿಕ ಕೃತ್ಯ: ಅತ್ತೆಯನ್ನೇ ಬರ್ಬರವಾಗಿ ಹತ್ಯೆಗೈದ ಅಳಿಯ

ಗುಪ್ತಾಂಗಕ್ಕೆ ಬಿದಿರು ತೂರಿಸಿ ಪೈಶಾಚಿಕ ಕೃತ್ಯ: ಅತ್ತೆಯನ್ನೇ ಬರ್ಬರವಾಗಿ ಹತ್ಯೆಗೈದ ಅಳಿಯ

ಮುಂಬಯಿ: ಅಳಿಯನೊಬ್ಬ ತನ್ನ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿ ಘಟನೆ ಮುಂಬೈಯ ವಿಲೆಪಾರ್ಲೆಯಲ್ಲಿ ನಡೆದಿದೆ.

      ಆರೋಪಿಯನ್ನು ಬಂಧಿಸಿದ ವಿಲೇಪಾರ್ಲೆ ಪೋಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸೆಪ್ಟೆಂಬರ್‌ 14ರವರೆಗೆ ಪೋಲೀಸ್‌ ಕಸ್ಟಡಿಗೆ ನೀಡಲಾಗಿದೆ. ಪೊಲೀಸರ ಪ್ರಕಾರ, “ಆಕೆಯ ತಲೆಯ ಮೇಲೆ ಟೈಲ್ಸ್‌ನಿಂದ ಹಲ್ಲೆ ಮಾಡಿದ ನಂತರ ದೇಹಕ್ಕೆ ಚಾಕುವಿನಿಂದ ಇರಿಯಲಾಗಿದೆ. ಆಕೆಯ ಗುಪ್ತಾಂಗಕ್ಕೆ ಬಿದಿರನ್ನು ತೂರಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

      ಮೃತ ಮಹಿಳೆ ತನ್ನ ಮಗಳೊಂದಿಗೆ ಮುಂಬಯಿಯ ವಿಲೇಪಾರ್ಲೆಯಲ್ಲಿ ವಾಸಿಸುತ್ತಿದ್ದಳು. ಸರಗಳ್ಳತನದ ಪ್ರಕರಣದಲ್ಲಿ ಆರೋಪಿಯು ತಪ್ಪಿತಸ್ಥನೆಂದು ಸಾಬೀತಾಗಿ ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದನು. ಆತನನ್ನು ಸೆಪ್ಟೆಂಬರ್ 1 ರಂದು ಬಿಡುಗಡೆ ಮಾಡಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ನಂತರ, ಆರೋಪಿಯು ತನ್ನ ಪತ್ನಿಯನ್ನು ಭೇಟಿಯಾಗಲು ಹೋದನು. ಆದರೆ ಪತ್ನಿ ಬೇರೊಬ್ಬನನ್ನು ಮದುವೆಯಾಗಿದ್ದಾಳೆ ಮತ್ತು ಆಕೆ ಗರ್ಭಿಣಿಯಾಗಿದ್ದಾಳೆ ಎಂಬುದನ್ನು ಗಮನಿಸುತ್ತಾನೆ.

     ಆರೋಪಿಯು ಆಕೆಯೊಂದಿಗೆ ತನ್ನ ಹೊಸ ಗಂಡನನ್ನು ತೊರೆಯುವಂತೆ ಕೇಳಿಕೊಂಡಿದ್ದ. ಆಕೆ ನಿರಾಕರಿಸಿದ್ದಳು. ಅದಾಗ್ಯೂ, ಮರುದಿನ ಆತ ಅವಳನ್ನು ಭೇಟಿಯಾಗಲು ಮತ್ತೆ ಹೋದಾಗ, ಅವಳು ಸ್ಥಳವನ್ನು ಬಿಟ್ಟು ಹೋಗಿದ್ದಳು. ಆಕೆಯನ್ನು ಹುಡುಕಲು ಪ್ರಯತ್ನಿಸಿದ ಆರೋಪಿ, ತನ್ನ ಅತ್ತೆಯ ಜೊತೆ ವಿವರಗಳನ್ನು ಕೇಳುತ್ತಾನೆ. ಅತ್ತೆ ತನ್ನ ಮಗಳ ಬಗ್ಗೆ ಯಾವುದೇ ವಿವರಗಳನ್ನು ನೀಡಲು ನಿರಾಕರಿಸುತ್ತಾಳೆ.

     ಇದರಿಂದ ಕುಪಿತನಾದ ಆರೋಪಿಯು ತನ್ನ ಅತ್ತೆಯ ಮೇಲೆ ಹಲ್ಲೆ ನಡೆಸಿ ಹಲವು ಬಾರಿ ಇರಿದಿದ್ದಾನೆ. ಆಕೆಯ ಗುಪ್ತಾಂಗಕ್ಕೆ ಬಿದಿರು ತೂರಿಸಿದ್ದಾನೆ. ಹತ್ಯೆಯ ಒಂದು ಒಂದು ದಿನದ ನಂತರ ಆರೋಪಿಯನ್ನು ಪುಣೆಯಲ್ಲಿ ಬಂಧಿಸಲಾಯಿತು.

      ದೇಶದಲ್ಲಿ ಮಹಿಳೆಯರ ಮೇಲಿನ ಭಯಾನಕ, ಪೈಶಾಚಿಕ ದೌರ್ಜನ್ಯವು ಪದೇ ಪದೇ ನಡೆಯುತ್ತಿದ್ದು, ನಿಯಂತ್ರಣಕ್ಕೆ ಬಾರದಂತಾಗಿದೆ. ಮಹಿಳೆಯರ ಸಂರಕ್ಷಣೆಗೆ ಕಾನೂನುಗಳು ಸಮರ್ಪಕವಾಗಿ ಜಾರಿಯಾಗಬೇಕಾದ ಅಗತ್ಯವಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ