ಗಣರಾಜ್ಯೋತ್ಸವ ಸಂಭ್ರಮ: ಹಿಂದೆ ಸರಿದ ಬ್ರಿಟನ್ ಪ್ರಧಾನಿ

ನವದೆಹಲಿ: ಬ್ರಿಟನ್ ನಲ್ಲಿ ರೂಪಾಂತರ ಕೊರೋನ ವೈರಸ್ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿಈ ಬಾರಿಯ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಹ್ವಾನಿತರಾಗಿದ್ದ ಬ್ರಿಟನ್ ಪ್ರಧಾನಿ
ಬೋರಿಸ್ ಜಾನ್ಸನ್ ತನ್ನ ಭಾರತ ಭೇಟಿಯನ್ನು ರದ್ದು ಗೊಳಿಸಿದ್ದಾರೆ.
ಬ್ರಿಟನ್ ನಲ್ಲಿ ರೂಪಾಂತರ ವೈರಸ್ ಸೋಂಕು ವ್ಯಾಪಕವಾಗುತ್ತಿದೆ. ಈ ಬಗ್ಗೆ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ ಭಾರತ ಭೇಟಿಯನ್ನು ರದ್ದು ಗೊಳಿಸಿದ್ದಾರೆ. ಭೇಟಿಯನ್ನು ರದ್ದುಗೊಳಿಸಿದ ಬಗ್ಗೆ ಅವರು ವಿಷಾದವನ್ನೂ ವ್ಯಕ್ತ ಪಡಿಸಿದ್ದಾರೆ.
ರೂಪಾಂತರಗೊಂಡ ಕೊರೊನಾ ವೈರಸ್ ತೀವ್ರವಾಗಿ ಪ್ರಸರಣವಾಗುತ್ತಿರುವ ಕಾರಣ ಬ್ರಿಟನ್ನಲ್ಲಿ ಬುಧವಾರದಿಂದ ಮತ್ತೆ ಲಾಕ್ಡೌನ್ ಘೋಷಿಸಲಾಗಿದೆ. ಪ್ರಜೆಗಳ ಹಿತ ಕಾಪಾಡಲು ಪ್ರಧಾನಿಯವರನ್ನು ಬ್ರಿಟನ್ ನಲ್ಲಿಯೇ ಉಳಿಸಿಕೊಳ್ಳುವುದು ಬಹಳ ಮುಖ್ಯ ಎಂಬುದಾಗಿ ಬ್ರಿಟನ್ ತಿಳಿಸಿದೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ